Gold Forecast: ಗಣೇಶನ ಹಬ್ಬಕ್ಕೂ ಇಳಿಕೆಯಾಗಿಲ್ಲ ಚಿನ್ನದ ಬೆಲೆ, ಇಂದು ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ…?
ಚಿನ್ನ ಖರೀದಿಸುವವರಿಗೆ ಬೇಸರದ ಸುದ್ದಿ, ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ.
Today Gold Price Hike: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಇತ್ತೀಚಿಗೆ ಹೆಚ್ಚಿನ ಏರಿಕೆ ಕಾಣುತ್ತಿದೆ. ಸದ್ಯ ದೇಶದಲ್ಲಿ ಚಿನ್ನದ ಮಾರಾಟ ಕಡಿಮೆ ಆಗಿದೆ ಎನ್ನಬಹೌದು. ಏಕೆಂದರೆ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ ಆಗುತ್ತಿರುವ ಕಾರಣ ಜನರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಜನರು ಹೆಚ್ಚಾಗಿ ಚಿನ್ನದ ಬೆಳೆಯ ಇಳಿಕೆಯ ನಿರೀಕ್ಷೆಯಲ್ಲಿರುತ್ತಾರೆ. ಹೊಸ ವರ್ಷ ಆರಂಭಗೊಂಡ ಸಮಯದಿಂದಲೂ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯೇ ಕಂಡು ಬಂದಿದೆ.
ಗಣೇಶನ ಹಬ್ಬಕ್ಕೂ ಇಳಿಕೆಯಾಗಿಲ್ಲ ಚಿನ್ನದ ಬೆಲೆ
ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶನ ಹಬ್ಬಕ್ಕಾಗಿ ದೇಶದ ಜನತೆಗೆ ಕಾತುರದಲ್ಲಿ ಕಾಯುತ್ತಿದ್ದರು. ಇನ್ನು ಗಣೇಶನ ಹಬ್ಬಕ್ಕೆ ಜನರು ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದರು.
ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎನ್ನುವ ಜನರ ಭರವಸೆ ಸುಳ್ಳಾಗಿದೆ. ಇಂದು ಕೂಡ ಚಿನ್ನದ ಬೆಲೆಯ್ಲಲಿ ಏರಿಕೆಯಾಗಿದೆ. ನಿನ್ನೆ 5,400 ರಲ್ಲಿ ಲಭ್ಯವಿದ್ದ ಚಿನ್ನದ ಬೆಲೆ ಇಂದು 5,500 ರ ಗಡಿ ದಾಟಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ.
ಗಣೇಶನ ಹಬ್ಬದಂದು ಚಿನ್ನದ ಬೆಲೆ ಎಷ್ಟು ತಲುಪಿದೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 14 ರೂ ಏರಿಕೆಯಾಗಿ 5,550 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,491 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 112 ರೂ ಏರಿಕೆಯಾಗಿ 44,040 ರೂ. ತಲುಪಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,928 ರೂ. ಗೆ ಲಭ್ಯವಿತ್ತು.
ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 140 ರೂ ಏರಿಕೆಯಾಗಿ 55,050 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,910 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,400 ರೂ ಏರಿಕೆಯಾಗಿ 5,50500 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,49,100 ರೂ. ಗೆ ಲಭ್ಯವಿತ್ತು.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 18 ರೂ ಏರಿಕೆಯಾಗಿ 6,008 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,990 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 144 ರೂ ಏರಿಕೆಯಾಗಿ 48,064 ರೂ. ತಲುಪಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,920 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 180 ರೂ ಏರಿಕೆಯಾಗಿ 60,080 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,900 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 1,800 ರೂ ಏರಿಕೆಯಾಗಿ 6,00,800 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,99,000 ರೂ. ಗೆ ಲಭ್ಯವಿತ್ತು.