Gold Price: ದೇಶದಲ್ಲಿ ಮತ್ತೆ ಇಳಿಕೆಯಾದ ಬಂಗಾರದ ಬೆಲೆ, ಇದು ಚಿನ್ನ ಖರೀದಿಸಲು ಉತ್ತಮ ಸಮಯ.
ಜನರು ಹೆಚ್ಚಾಗಿ ಖರೀದಿಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡುಬಂದಿದೆ.
Gold Price Decrease: ಜೂನ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ (Gold Price) ಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾಗಿತ್ತು. ಆದರೆ ಜುಲೈ ತಿಂಗಳಲ್ಲಿ ಇಳಿಕೆಗಿಂತ ಹೆಚ್ಚು ಏರಿಕೆ ಆಗಿದೆ. ಇದೀಗ ಜುಲೈ ತಿಂಗಳ 10 ನೇ ದಿನದಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನ ಖರೀದಿ ಮಾಡುವವರಿಗೆ ಈ ದಿನ ಉತ್ತಮವಾಗಿದೆ.
ಜನರು ಹೆಚ್ಚಾಗಿ 22 ಕ್ಯಾರೆಟ್ ಚಿನ್ನವನ್ನೇ ಖರೀದಿ ಮಾಡುತ್ತಾರೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಮಾತ್ರ ಇಳಿಕೆ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಮೊನ್ನೆಯ ಬೆಲೆಯಲ್ಲಿಯೇ ಸ್ಥಿರತೆ ಕಂಡುಕೊಂಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 5,445 ರೂ. ಆಗಿದೆ. ನಿನ್ನೆಗಿಂತ ಇಂದು 10 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43,640 ರೂ. ಇದ್ದು ಇಂದು 43,560 ರೂ. ಆಗಿದೆ.
ಎಂಟು ಗ್ರಾಂ ಚಿನ್ನದಲ್ಲಿ ಇಂದು 80 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 54,550 ಇದ್ದು ಇಂದು 54,450 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 100 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 545500 ಇದ್ದು ಇಂದು 5,44,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 5951 ರೂ. ಆಗಿದೆ. ಎಂಟು ಗ್ರಾಂ ಚಿನ್ನದ ಬೆಲೆ 47608 ರೂ. ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ 59510 ರೂ. ಆಗಿದೆ. ನೂರು ಗ್ರಾಂ ಚಿನ್ನದ ಬೆಲೆ 5,95,100 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊನ್ನೆಯ ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡಿದೆ.