30 Lakh Home Loan EMI 20 Years: ಮನೆ ಮನುಷ್ಯನ ಮೂಲಭೂತ ಅಗತ್ಯದಲ್ಲಿ ಒಂದಾಗಿದೆ. ಮನೆ ಕೇವಲ ಸಿಮೆಂಟ್ ಮತ್ತು ಇಟ್ಟಿಗೆಯಿಂದ ನಿರ್ಮಾಣವಾದ ಕಟ್ಟಡ ಅಲ್ಲ, ವ್ಯಕ್ತಿಯ ಭವಿಷ್ಯದ ಭದ್ರತೆ ಆಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮನೆ ಜೀವನದ ದೊಡ್ಡ ಕನಸಾಗಿರುತ್ತದೆ. ಕನಸಿನ ಮನೆಯನ್ನು ನಿರ್ಮಾಣ ಮಾಡಲು ಅನೇಕ ಬ್ಯಾಂಕ್ ಗಳು ಸಾಲವನ್ನು ನೀಡುತ್ತದೆ. 2025 ರಲ್ಲಿ RBI ನ ರೆಪೋ ದರದ ಕಡಿತದ ನಂತರ ಗೃಹ ಸಾಲದ ಬಡ್ಡಿದರ ಕಡಿಮೆ ಆಗಿದೆ. ಇದೀಗ ನಾವು 30 ಲಕ್ಷ ಗೃಹ ಸಾಲ ಪಡೆದುಕೊಂಡರೆ ತಿಂಗಳಿಗೆ ಎಷ್ಟು EMI ಪಾವತಿ ಮಾಡಬೇಕು ಅನ್ನುವ ಬಗ್ಗೆ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿಯೋಣ.
ಗೃಹ ಸಾಲದ EMI ಲೆಕ್ಕಾಚಾರ
ಗೃಹ ಸಾಲದ ಬಡ್ಡಿದರ ಎಲ್ಲ ಬ್ಯಾಂಕ್ ಗಳಲ್ಲಿ 7.5% ನಿಂದ 8.5% ವರೆಗೆ ಇದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಪಡೆದುಕೊಂಡಿದ್ದರೆ ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ಪಡೆದುಕೊಳ್ಳಬಹುದು. ಇದೀಗ ನಾವು ವಿವಿಧ ಬಡ್ಡಿದರಗಳಿಂದ 30 ಲಕ್ಷ ಗೃಹ ಸಾಲವನ್ನು ಪಡೆದುಕೊಂಡರೆ ಎಷ್ಟು EMI ಪಾವತಿಸಬೇಕಾಗುತ್ತದೆ ಅನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. {EMI ಲೆಕ್ಕಹಾಕುವ ಸೂತ್ರ – EMI = P × r × (1 + r)^n / ((1 + r)^n – 1)} ಇಲ್ಲಿ r ಮಾಸಿಕ ಬಡ್ಡಿದರವಾಗಿದೆ.
ವಿವಿಧ ಬಡ್ಡಿದರಗಳಲ್ಲಿ EMI ಲೆಕ್ಕಾಚಾರ
* 7.5% ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು ಪಡೆದುಕೊಂಡರೆ ತಿಂಗಳಿಗೆ 24,159 ರೂ. EMI ಪಾವತಿಸಬೇಕು, ಒಟ್ಟು ಬಡ್ಡಿ 27.98 ಲಕ್ಷ ಆಗುತ್ತದೆ. ನೀವು ಒಟ್ಟಾಗಿ 57.98 ಲಕ್ಷ ಪಾವತಿ ಮಾಡಬೇಕು.
* 8% ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು ಪಡೆದುಕೊಂಡರೆ ತಿಂಗಳಿಗೆ 25,093 ರೂ. EMI ಪಾವತಿಸಬೇಕು, ಒಟ್ಟು ಬಡ್ಡಿ 30.22 ಲಕ್ಷ ಆಗುತ್ತದೆ. ನೀವು ಒಟ್ಟಾಗಿ 61.35 ಲಕ್ಷ ಪಾವತಿ ಮಾಡಬೇಕು.
* 8.25% ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು ಪಡೆದುಕೊಂಡರೆ ತಿಂಗಳಿಗೆ 25,562 ರೂ. EMI ಪಾವತಿಸಬೇಕು, ಒಟ್ಟು ಬಡ್ಡಿ 31.35 ಲಕ್ಷ ಆಗುತ್ತದೆ. ನೀವು ಒಟ್ಟಾಗಿ 61.35 ಲಕ್ಷ ಪಾವತಿ ಮಾಡಬೇಕು.
* 8.5% ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು ಪಡೆದುಕೊಂಡರೆ ತಿಂಗಳಿಗೆ 26,035 ರೂ. EMI ಪಾವತಿಸಬೇಕು, ಒಟ್ಟು ಬಡ್ಡಿ 32.48 ಲಕ್ಷ ಆಗುತ್ತದೆ. ನೀವು ಒಟ್ಟಾಗಿ 62.48 ಲಕ್ಷ ಪಾವತಿ ಮಾಡಬೇಕು.
* 9% ಬಡ್ಡಿದರದಲ್ಲಿ 30 ಲಕ್ಷ ಸಾಲವನ್ನು ಪಡೆದುಕೊಂಡರೆ ತಿಂಗಳಿಗೆ 26,992 ರೂ. EMI ಪಾವತಿಸಬೇಕು, ಒಟ್ಟು ಬಡ್ಡಿ 34.78 ಲಕ್ಷ ಆಗುತ್ತದೆ. ನೀವು ಒಟ್ಟಾಗಿ 64.78 ಲಕ್ಷ ಪಾವತಿ ಮಾಡಬೇಕು.
EMI ಯಲ್ಲಿ ಬಡ್ಡಿ ಮತ್ತು ಮೂಲಧನ ಹಚಿಕೆ
* ಮೊದಲು EMI ಯಲ್ಲಿ ಬಡ್ಡಿ ಭಾಗ ಹೆಚ್ಚಾಗಿರುತ್ತದೆ, ನಂತರ ಮೂಲಧನದ ಭಾಗ ಹೆಚ್ಚಾಗುತ್ತದೆ.
* 20 ವರ್ಷಗಳಲ್ಲಿ ಒಟ್ಟು ಬಡ್ಡಿ ಸಾಲದ ಮೊತ್ತಕ್ಕಿಂತ ಹೆಚ್ಚಾಗಬಹುದು. ಉದಾಹರಣೆ ಮೂಲಕ ನೋಡುದಾದರೆ, 8% ಬಡ್ಡಿದರಲ್ಲಿ ಸುಮಾರು 30 ಲಕ್ಷ ಬಡ್ಡಿ ಬರುತ್ತದೆ.
* ಹೆಚ್ಚಿನ ಅವಧಿಯನ್ನು ಆಯ್ಕೆ ಮಾಡಿಕೊಂಡರೆ EMI ಕಡಿಮೆ ಆಗುತ್ತದೆ ಮತ್ತು ಸಾಲದ ಒಟ್ಟು ಬಡ್ಡಿ ಹೆಚ್ಚಾಗುತ್ತದೆ.
EMI ಕಡಿಮೆ ಮಾಡುವ ಟಿಪ್ಸ್
* ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಂಡರೆ ಬಡ್ಡಿ ಕಡಿಮೆ ಆಗುತ್ತದೆ, ಇದರಿಂದ ತಿಂಗಳ EMI ಕೂಡ ಕಡಿಮೆ ಆಗುತ್ತದೆ.
* ಹೆಚ್ಚು ಡೌನ್ ಪೇಮೆಂಟ್ ಮಾಡಿ ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಳ್ಳಿ
* ಪ್ರಿ ಪೇಮೆಂಟ್ ಆಯ್ಕೆಯನ್ನು ಬಳಸಿಕೊಂಡು ಬಡ್ಡಿಯನ್ನು ಉಳಿತಾಯ ಮಾಡಿ
* ಬ್ಯಾಂಕ್ ಗಳ ನಡುವೆ ಹೋಲಿಕೆ ಮಾಡಿ ಕಡ್ಡಿಗೆ ಬಡ್ಡಿಗೆ ಗೃಹ ಸಾಲವನ್ನು ಪಡೆದುಕೊಳ್ಳಿ
* ಗೃಹ ಸಾಲ ಪಡೆದುಕೊಳ್ಳುವ ಮೊದಲು EMI ಲೆಕ್ಕಾಚಾರ ಮಾಡಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

