Gold Price: ರಕ್ಷಾ ಬಂಧನದ ದಿನವೂ ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ, ಒಂದೇ ದಿನದಲ್ಲಿ 300 ರೂ ಏರಿಕೆ.
ಆಗಸ್ಟ್ ತಿಂಗಳ ಅಂತ್ಯದಲ್ಲಿ ದಾಖಲೆಯ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ.
300 Rs Hike In Gold Price: ಚಿನ್ನದ ಖರೀದಿ ಒಂದು ರೀತಿಯ ಉಳಿತಾಯದ ಹೂಡಿಕೆ ಎಂದರೆ ತಪ್ಪಾಗಲಾರದು. ಉಳಿತಾಯ ಹಣವನ್ನು ಚಿನ್ನ ಖರೀದಿಗೆ ವ್ಯಯಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಆದರೆ ಚಿನ್ನ ಖರೀದಿಗೆ ಜನರು ಬೆಲೆಯ ಇಳಿಕೆಯ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ.
ಚಿನ್ನದ ಬೆಲೆ ಯಾವಾಗ ಇಳಿಕೆ ಆಗುತ್ತದೆ ಎಂದು ಕಾಯುತ್ತಾರೆ. ಆದರೆ ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಆಗಸ್ಟ್ ನ ಎರಡು ವಾರ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಕಳೆದ ವಾರದಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಇಂದು ಮತ್ತೆ 300 ರೂ. ಏರಿಕೆ ಕಂಡ ಚಿನ್ನ
ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆಯೆಯಾಗಿದೆ. ನಿನ್ನೆಯಷ್ಟೇ ಏರಿಕೆ ಕಂಡ ಚಿನ್ನ ಇಂದು ಹತ್ತು ಗ್ರಾಂ ಚಿನ್ನ ಬರೋಬ್ಬರಿ 300 ರೂ. ಏರಿಕೆಯಾಗಿದೆ. ಇಳಿಕೆಯ ಪ್ರಮಾಣಕ್ಕಿಂತ ಮೂರು ಪಟ್ಟು ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇದೆ ರೀತಿ ಚಿನ್ನದ ಬೆಲೆ ಏರಿಕೆಯಾದರೆ ಚಿನ್ನದ ಬೆಲೆ 6,000 ರೂಪಾಯಿ ಗಡಿ ದಾಟುವುದರಲ್ಲಿ ಯಾವುದೇ ಸಂದೇಹವಿಲ್ಲ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆಯಾಗುವ ಮೂಲಕ 5,500 ರೂ. ತಲುಪಿದೆ. ಇಂದು 44,000 ರೂ. ಎಂಟು ಗ್ರಾಂ ಚಿನ್ನದ ಬೆಲೆಯಾಗಿದೆ. ಇನ್ನು ಇಂದು ಹತ್ತು ಗ್ರಾಂ ಚಿನ್ನದ ಬೆಲೆ 55,000 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,000 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,50,000 ರೂ. ತಲುಪಿದೆ.
330 ರೂ. ಏರಿಕೆ ಕಂಡ 10 ಗ್ರಾಂ 24 ಕ್ಯಾರೆಟ್ ಚಿನ್ನ
ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 33 ರೂ. ಏರಿಕೆಯಾಗುವ ಮೂಲಕ 6,000 ರೂ. ತಲುಪಿದೆ. ಇಂದು 48,000 ರೂ. ಎಂಟು ಗ್ರಾಂ ಚಿನ್ನಕ್ಕೆ ನೀಡಬೇಕಾಗಿದೆ. ಇನ್ನು ಇಂದು ಹತ್ತು ಗ್ರಾಂ ಚಿನ್ನದ ಬೆಲೆ 60,000 ರೂ. ಆಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ. ಏರಿಕೆಯಾಗಿದೆ.
ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,300 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 6,00,000 ರೂ. ತಲುಪಿದೆ. ಆಗಸ್ಟ್ ಮೊದಲ ಎರಡು ವಾರದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಆದರೆ ಎರಡನೇ ವಾರದ ಚಿನ್ನದ ಏರಿಕೆಯಾದ ಕಾರಣ ಚಿನ್ನದ ಬೆಲೆ ಮತ್ತೆ 6000 ರೂ ಗಡಿಯನ್ನ ತಲುಪಿದೆ ಎಂದು ಹೇಳಬಹುದು.