5 Best Car: ಆಗಸ್ಟ್ ನಲ್ಲಿ ಲಾಂಚ್ ಆಗಲಿದೆ ಟಾಪ್ 5 ಬೆಸ್ಟ್ ಕಾರ್ ಗಳು, ಬಜೆಟ್ ಬೆಲೆಗೆ

ಆಗಸ್ಟ್ ನಲ್ಲಿ ಲಾಂಚ್ ಆಗಲಿದೆ ಟಾಪ್ 5 ಬೆಸ್ಟ್ ಕಾರ್ ಗಳು

5 Best Car Launch In India: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಕಾರ್ ಗಳು ಲಾಂಚ್ ಆಗುತ್ತಿವೆ. ಜನರು ಹೊಸ ಕಾರ್ ಖರೀದಿಗೆ ಹೊಸ ಹೊಸ ಆಯ್ಕೆಯನ್ನು ಪಡೆಯುತ್ತಿದ್ದಾರೆ. ಇನ್ನು ದೇಶದ ಈ ಜನಪ್ರಿಯ ಕಂಪನಿಗಳು ಆಗಸ್ಟ್ ನಲ್ಲಿ ತನ್ನ ಟಾಪ್ ಬೆಸ್ಟ್ ಮಾಡೆಲ್ ಕಾರ್ ಗಳನ್ನೂ ಬಿಡುಗಡೆ ಮಾಡಲಿವೆ. ನೀವು ಈ ಆಗಸ್ಟ್ ನಲ್ಲಿ ಹೊಸ ಕಾರ್ ಅನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ, ಈ ಲೇಖನವನ್ನು ಓದಬಹುದು. ಈ ಲೇಖನದಲ್ಲಿ ನಾವೀಗ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಬೆಸ್ಟ್ ಕಾರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Tata Curvv EV
Image Credit: Carwale

ಆಗಸ್ಟ್ ನಲ್ಲಿ ಲಾಂಚ್ ಆಗಲಿದೆ ಟಾಪ್ 5 ಬೆಸ್ಟ್ ಕಾರ್ ಗಳು
•Tata Curvv EV
ಸದ್ಯ ಮಾರುಕಟ್ಟೆಯಲ್ಲಿ Tata Curvv EV ಆಗಸ್ಟ್ 7, 2024 ರಂದು ಬಿಡುಗಡೆಯಾಗಲಿದೆ. ಈ ಮಾದರಿಯು ಮಾರುಕಟ್ಟೆಯಲ್ಲಿ ಸುಮಾರು 17 ರಿಂದ 22 ಲಕ್ಷ ರೂ. ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಕರ್ವ್ EV ಮಾದರಿಗೆ ಎರಡು ಬ್ಯಾಟರಿ ಆಯ್ಕೆಗಳು ಲಭ್ಯವಿರುತ್ತವೆ. ಹೊಸ ಕಾರಿನ ಮಾದರಿಗಾಗಿ 40.5 kWh ಬ್ಯಾಟರಿ ಮತ್ತು ಟಾಪ್ ಎಂಡ್ ಮಾದರಿಗಾಗಿ 55 kWh ಬ್ಯಾಟರಿ ಆಯ್ಕೆಗಳು ಲಭ್ಯವಿರುತ್ತವೆ. ಹೊಸದಾಗಿ ನೀಡಲಾದ 55 KVH ಬ್ಯಾಟರಿ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಕಾರಿನ ಸ್ಟಾರ್ಟಿಂಗ್ ಮಾಡೆಲ್ ಪ್ರತಿ ಚಾರ್ಜ್ ಗೆ 465 ಕಿ.ಮೀ ಮೈಲೇಜ್ ನೀಡಲಿದ್ದು, ಟಾಪ್ ಎಂಡ್ ಮಾಡೆಲ್ 550 ಕಿ.ಮೀ ಮೈಲೇಜ್ ನೀಡಲಿದೆ.

•Nissan X-Trail
ನಿಸ್ಸಾನ್‌ ನ ಹೊಸ ಎಕ್ಸ್-ಟ್ರಯಲ್ ಎಸ್‌ಯುವಿ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಸಂಪೂರ್ಣವಾಗಿ ಆಮದು ಮಾಡಿಕೊಂಡ (ಸಿಬಿಯು) ಮಾದರಿಯಾಗಿ ಮಾರಾಟವಾಗಲಿದೆ. ಹೊಸ ಕಾರು ದುಬಾರಿ ಟೊಯೊಟಾ ಫಾರ್ಚುನರ್‌ ಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ. ಇದು ಶಕ್ತಿಯುತ 1.5 ಲೀಟರ್ ಪೆಟ್ರೋಲ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್‌ ಬಾಕ್ಸ್‌ ಗಳ ಆಯ್ಕೆಯ ಮೂಲಕ ಗರಿಷ್ಠ 204 ಅಶ್ವಶಕ್ತಿ ಮತ್ತು 305 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Nissan X-Trail
Image Credit: Carwale

•Mahindra Thar Roxx
ಮಹೀಂದ್ರಾ ಕಂಪನಿಯು ಥಾರ್ ಕಾರಿನ ಹೊಸ ರೋಕ್ಸ್ ಆವೃತ್ತಿಯನ್ನು ಹಲವಾರು ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಇದು ಅಧಿಕೃತವಾಗಿ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಮತ್ತು ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ವಿಶೇಷವಾಗಿ 5-ಬಾಗಿಲು ಆಯ್ಕೆ. ಪ್ರಸ್ತುತ ಮಾರುಕಟ್ಟೆಯಲ್ಲಿ, ಥಾರ್ ಕಾರು ಮಾದರಿಯು 3-ಬಾಗಿಲು ಸೌಲಭ್ಯದೊಂದಿಗೆ ಮಾತ್ರ ಖರೀದಿಗೆ ಲಭ್ಯವಿರುತ್ತದೆ. ಇದು ಆಫ್-ರೋಡ್ ಮತ್ತು ಜೀವನಶೈಲಿ ಮಾದರಿಯಾಗಿ ಗುರುತಿಸಲ್ಪಟ್ಟಿದೆ. ಆದರೆ ಥಾರ್ ರಾಕ್ಸ್ ಆವೃತ್ತಿಯು ಹಿಂಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ 5-ಬಾಗಿಲಿನ ಸೌಲಭ್ಯವನ್ನು ನೀಡುತ್ತದೆ.

Mahindra Thar Roxx
Image Credit: Htantimes

•Hyundai Alcazar facelift
ಹುಂಡೈ ಕಂಪನಿಯು ಕ್ರೆಟಾ ಫೇಸ್‌ ಲಿಫ್ಟ್‌ ನಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಿದೆ. ಇದೀಗ ಕಂಪನಿಯು ಅಲ್ಕಾಜರ್ ಫೇಸ್‌ ಲಿಫ್ಟ್ ಅನ್ನು ಪರಿಚಯಿಸಲು ಹೊರಟಿದೆ. ಅಲ್ಕಾಜರ್ ಫೇಸ್‌ ಲಿಫ್ಟ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು 7-ಆಸನಗಳನ್ನು ಆದ್ಯತೆ ನೀಡುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

Join Nadunudi News WhatsApp Group

Hyundai Alcazar facelift
Image Credit: Overdrive

•MG Cloud Electric
ಭಾರತದಲ್ಲಿ ZS EV ಮತ್ತು ಕಾಮೆಟ್ EV ಕಾರುಗಳ ಮೂಲಕ ಎಲೆಕ್ಟ್ರಿಕ್ ಕಾರ್ ವಿಭಾಗದ ಬೇಡಿಕೆಯನ್ನು ಪಡೆದಿರುವ MG ಮೋಟಾರ್ ಕಂಪನಿಯು ಇದೀಗ ಕ್ಲೌಡ್ EV ಕಾರನ್ನು ಬಿಡುಗಡೆ ಮಾಡುತ್ತಿದೆ. ಹೊಸ ಕಾರನ್ನು ZS EV ಮತ್ತು ಕಾಮೆಟ್ EV ನಡುವೆ ಇರಿಸಲಾಗುತ್ತದೆ. ಇದನ್ನು ಅತ್ಯಾಧುನಿಕ ವಿನ್ಯಾಸದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್‌ಗೆ 460 ಕಿಮೀ ಮೈಲೇಜ್ ನೀಡುತ್ತದೆ. ಇದಲ್ಲದೆ, ಹೊಸ ಕಾರು ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಶ್ರೇಣಿ ಮಾರಾಟಕ್ಕಿದೆ.

MG Cloud Electric
Image Credit: ABP Live

Join Nadunudi News WhatsApp Group