Ads By Google

Financial Rule: ಇಂದಿನಿಂದ ಹಣಕಾಸು ನಿಯಮದಲ್ಲಿ ಆಗಲಿದೆ ಈ 5 ಬದಲಾವಣೆಗಳು, ಎಚ್ಚರದಿಂದ ವ್ಯವಹಾರ ಮಾಡಿ

financial rules changes in india 2024

Image Credit: Original Source

Ads By Google

5 Financial Rule Change From January 1st: ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಹೊಸ ನಿಯಮಗಳು ಜಾರಿಯಾಗುತ್ತದೆ. ಈ ಬಾರಿ ಹೊಸ ತಿಂಗಳ ಜೊತೆಗೆ ಹೊಸ ವರ್ಷ ಕೂಡ ಆರಂಭಗೊಂಡಿದೆ. 2023 ರ ವಿದಾಯದೊಂದಿಗೆ 2024 ಅನ್ನು ಸ್ವಾಗತಿಸಲಾಗಿದೆ.

ಪ್ರತಿ ತಿಂಗಳು ನಿಯಮಗಳು ಬದಲಾದಂತೆ ಇದೀಗ ಹೊಸ ವರ್ಷದ ಆರಂಭ ಹಾಗೂ ಹೊಸ ತಿಂಗಳ ಆರಂಭದ ಕಾರಣ ಹಣಕಾಸಿನ ವಹಿವಾಟಿನ ಮುಖ್ಯ ನಿಯಮಗಳು ಬದಲಾಗಲಿವೆ. ಹೊಸ ವರ್ಷದಿಂದ ಈ ಐದು ಮುಖ್ಯ ಹಣಕಾಸಿನ ನಿಯಮಗಳು ನಿಮ್ಮ ಮೇಲೆ ಪರಿಣಾಮ ಬೀರಲಿದೆ.

Image Credit: Pune News

ಇಂದಿನಿಂದ ಹಣಕಾಸು ನಿಯಮದಲ್ಲಿ ಆಗಲಿದೆ ಈ 5 ಬದಲಾವಣೆಗಳು
ಠೇವಣಿ ಯೋಜನೆಗಳ ಬಡ್ಡಿದರ ಹೆಚ್ಚಳ
ಹೊಸ ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು 3 ವರ್ಷಗಳ ಠೇವಣಿ ಯೋಜನೆಯ ಮೇಲಿನ ಬಡ್ಡಿಯನ್ನು ಶೇಕಡಾ 0.20 ಕ್ಕೆ ಹೆಚ್ಚಿಸಲಾಗಿದೆ. ಹೊಸ ಹೆಚ್ಚಿದ ಬಡ್ಡಿ ದರಗಳು ಜನವರಿಯಿಂದ ಮಾರ್ಚ್ 2024 ತ್ರೈಮಾಸಿಕಕ್ಕೆ ಅನ್ವಯವಾಗಲಿದೆ. ಇಂದಿನಿಂದ ತ್ರೈಮಾಸಿಕ ಆರಂಭವಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಈಗ ಶೇ.8.20ಕ್ಕೆ ಏರಿಕೆಯಾಗಿದೆ. 3 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರ ಶೇ.7.10ಕ್ಕೆ ಏರಿಕೆಯಾಗಿದೆ.

ಸಿಮ್ ಖರೀದಿಯ ನಿಯಮದಲ್ಲಿ ಬದಲಾವಣೆ
ಹೊಸ ವರ್ಷದಲ್ಲಿ ಹೊಸ ಮೊಬೈಲ್ ಸಂಪರ್ಕಗಳನ್ನು ತೆಗೆದುಕೊಳ್ಳುವ ಗ್ರಾಹಕರು ಸರಳ ಪ್ರಕ್ರಿಯೆಯ ಮೂಲಕ ಸಿಮ್ ಅನ್ನು ಪಡೆದುಕೊಳ್ಳಬಹುದು. ಹೊಸ ನಿಯಮದ ಪ್ರಕಾರ, ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವನ್ನು ತೆಗೆದುಹಾಕಲಾಗಿದೆ. ಈಗ ಹೊಸ ಸಿಮ್‌ ಗಾಗಿ KYC ಪರಿಶೀಲನೆಯು ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ.

Image Credit: Informal News

ವಿಮಾ ದಾಖಲೆಗಳು ಸುಲಭವಾಗಲಿದೆ
ಜನವರಿ 1, 2024 ರಿಂದ ಪರಿಷ್ಕೃತ ಗ್ರಾಹಕ ಮಾಹಿತಿ ಹಾಳೆಗಳನ್ನು ನೀಡಲು ವಿಮಾ ನಿಯಂತ್ರಕ IRDAI ಎಲ್ಲಾ ವಿಮಾ ಕಂಪನಿಗಳನ್ನು ಕೇಳಿದೆ. ಗ್ರಾಹಕರ ಮಾಹಿತಿ ಸೀಟ್ ಅಂದರೆ CIS ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. IRDAI ಎಲ್ಲಾ ಮಾಹಿತಿಯನ್ನು CIS ನಲ್ಲಿ ಸರಳ ಭಾಷೆಯಲ್ಲಿ ಒದಗಿಸುವಂತೆ ವಿಮಾ ಕಂಪನಿಗಳಿಗೆ ಹೇಳಿದೆ.

ಕಾರುಗಳ ಬೆಲೆ ದುಬಾರಿಯಾಗಲಿದೆ
ಹೊಸ ಕಾರ್ ಖರೀದಿಸುವವರಿಗೆ ಹೊಸ ವರ್ಷದಿಂದ ಬೆಲೆ ದುಬಾರಿಯಾಗಲಿದೆ. Maruti Suzuki, Tata Motors, Mercedes Benz and Audi ಸೇರಿದಂತೆ ಅನೇಕ ಕಾರ್ ಗಳ ಬೆಲೆ ದುಬಾರಿಯಾಗಲಿದೆ.

Image Credit: News 9 Live

UPI ID ನಿಷ್ಕ್ರಿಯ
ಜನವರಿ 1 ರಿಂದ UPU Payment ನಿಯಮಗಳು ಬದಲಾಗಲಿವೆ. ಒಂದು ವರ್ಷದಿಂದಲೂ ಬಳಸದೆ ಇರುವಂತಹ UPI ID ಗಳನ್ನೂ ನಿಷ್ಕ್ರಿಯಗೊಳಿಸುವುದಾಗಿ NPCI ನಿರ್ಧರಿಸಿದೆ. ಯಾರು ಒಂದು ವರ್ಷದಿಂದ UPI ID ಯನ್ನು ಬಳಸಿಲ್ಲವೋ ಅನಂತವರ UPI ID ಜನವರಿ 1 ರಿಂದ ನಿಷ್ಕ್ರಿಯವಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in