Rahul Gandhi: ದೇಶದ ಯುವಕರಿಗೆ ಭರ್ಜರಿ ಗುಡ್ ನ್ಯೂಸ್, ಯುವಕರಿಗಾಗಿ 5 ಗ್ಯಾರೆಂಟಿ ಘೋಷಣೆ ಮಾಡಿದ ರಾಹುಲ್ ಗಾಂಧಿ.

ಯುವಕರಿಗಾಗಿ 5 ಗ್ಯಾರೆಂಟಿ ಘೋಷಣೆ ಮಾಡಿದ ರಾಹುಲ್ ಗಾಂಧಿ

5 Guarantee Scheme For Youths: ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಲೋಕಸಭಾ ಚುನಾವಣೆಯ ಕಾರಣ ರಾಜಕೀಯ ಪಕ್ಷಗಳು ಜನರನ್ನು ಓಲೈಸಲು ವಿವಿಧ ಯೋಜನೆಗಳನ್ನು ಹಲವಾರು ಸೌಲಭ್ಯವನ್ನು ಜಾರಿಗೊಳಿಸುತ್ತಿದೆ. ಇನ್ನು ಪ್ರಸ್ತುತ ಅಧಿಕಾರದಲ್ಲಿರುವ ಮೋದಿ ಸರ್ಕಾರ ಈಗಾಗಲೇ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ವಿವಿಧ ಯೋಜನೆಗಳ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊಡ ಲೋಕಸಭಾ ಚುನಾವಣೆ ಪ್ರಚಾರಕ್ಕಿಳಿದಿದ್ದಾರೆ.

Rahul Gandhi announces 5 guarantee scheme for youth
Image Credit: Hindustan Times

ದೇಶದ ಯುವಕರಿಗೆ ಭರ್ಜರಿ ಗುಡ್ ನ್ಯೂಸ್
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ದೇಶದ ಯುವಕರಿಗಾಗಿ ರಾಹುಲ್ ಗಾಂಧಿ ಅವರು ಸಾಲು ಯೋಜನೆಗಳನ್ನು ಘೋಷಿಸಿದ್ದಾರೆ.

ರಾಜಸ್ಥಾನದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಯುವಕರಿಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಯುವಕರಿಗಾಗಿ ಯಾವ ಯಾವ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

5 Guarantee Scheme For Youths
Image Credit: Youthkiawaaz

ಯುವಕರಿಗಾಗಿ 5 ಗ್ಯಾರೆಂಟಿ ಘೋಷಣೆ ಮಾಡಿದ ರಾಹುಲ್ ಗಾಂಧಿ
1. ಭಾರತಿ ಭರೋಸಾ (ಉದ್ಯೋಗ ಖಾತರಿ)
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು. ಪರೀಕ್ಷೆಯ ದಿನಾಂಕದಿಂದ ನೇಮಕಾತಿಯವರೆಗೆ ಸ್ಪಷ್ಟವಾದ ಟೈಮ್‌ ಲೈನ್ ಇದೆ.

2. ಪೆಹ್ಲಿ ನೌಕ್ರಿ ಪಕ್ಕಿ (ಮೊದಲ ಉದ್ಯೋಗ ಖಾತರಿ)
24 ವರ್ಷದೊಳಗಿನ ಪ್ರತಿ ಪದವಿ ಅಥವಾ ಡಿಪ್ಲೊಮಾ ಹೊಂದಿರುವವರಿಗೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಅಪ್ರೆಂಟಿಸ್‌ ಶಿಪ್ ತರಬೇತಿ ಪಡೆಯುವ ಹಕ್ಕನ್ನು ನೀಡಲು ಕಾಂಗ್ರೆಸ್ ಅಪ್ರೆಂಟಿಸ್‌ ಶಿಪ್ ಕಾನೂನನ್ನು ಜಾರಿಗೊಳಿಸುತ್ತದೆ. ಈ ಯೋಜನೆ ಅಡಿಯಲ್ಲಿ ಸ್ಟೈಫಂಡ್ ತಿಂಗಳಿಗೆ 8,500 ಮತ್ತು ವರ್ಷಕ್ಕೆ 1 ಲಕ್ಷ ಇರುತ್ತದೆ.

Join Nadunudi News WhatsApp Group

Rahul Gandhi 5 Guarantee Scheme
Image Credit: Indian Express

3. ಪೇಪರ್ ಲೀಕ್ ಸೆ ಮುಕ್ತಿ (ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವಿಕೆ)
ಸರ್ಕಾರಿ ಉದ್ಯೋಗಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಾಂಗ್ರೆಸ್ ಕಾನೂನು ತರಲಿದೆ. ಪತ್ರಿಕೆ ಸೋರಿಕೆಯಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

4. ಗಿಗ್ ಎಕಾನಮಿ ಮೇ ಸಮಾಜಿಕ್ ಸುರಕ್ಷಾ (ಗುತ್ತಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ)

ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಗುತ್ತಿಗೆ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಕಾನೂನುಗಳನ್ನು ತರುವುದಾಗಿ ಕಾಂಗ್ರೆಸ್ ಘೋಷಿಸಿದೆ.

5. ಯುವ ರೋಶನಿ (ಯುವಕರಿಗೆ ನೆರವು)
ಪ್ರತಿ ಜಿಲ್ಲೆಯಾದ್ಯಂತ ಯುವ ಸ್ಟಾರ್ಟಪ್‌ ಗಳಿಗಾಗಿ 5,000 ಕೋಟಿ ರೂಪಾಯಿಗಳ ರಾಷ್ಟ್ರೀಯ ನಿಧಿಯನ್ನು ಮೀಸಲಿಡಲಾಗುವುದು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಈ ನಿಧಿಯ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group