Locker Rule Change: ಬ್ಯಾಂಕ್ ಲಾಕರ್ ಮಾಡಿಸುವವರಿಗೆ ಹೊಸ ನಿಯಮ, ಇನ್ನುಮುಂದೆ ಈ 5 ಶುಲ್ಕ ಕಡ್ಡಾಯ.
ಹೊಸ ಲಾಕರ್ ಖರೀದಿ ಮಾಡುವವರಿಗೆ ಜಾರಿಗೆ ಬಂತು ಹೊಸ ಲಾಕರ್ ನಿಯಮ.
Bank Locker Charges: ಸಾಮಾನ್ಯವಾಗಿ ಎಲ್ಲರು ಕೂಡ ಬ್ಯಾಂಕ್ ಖಾತೆಯನ್ನು ಅನ್ನು ಹೊಂದಿರುತ್ತಾರೆ. ತಮ್ಮ ಬಳಿ ಇರುವ ಹಣದ ಉಳಿತಾಯಕ್ಕಾಗಿ ಬ್ಯಾಂಕ್ ಖಾತೆ ತೆರೆಯುವುದು ಸಾಮಾನ್ಯ. ಇನ್ನು ದೇಶದ ಪ್ರತೀತ ಬ್ಯಾಂಕ್ ಗಳು ಗ್ರಾಹಕರಿಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿರುತ್ತದೆ.
ಬ್ಯಾಂಕ್ ಸೌಲಭ್ಯಗಳಲ್ಲಿ Bank Loacker ಸೌಲಭ್ಯ ಕೂಡ ಒಂದಾಗಿದೆ. ದೇಶದ ಕೋಟ್ಯಂತರ ಗ್ರಾಹಕರು ಬ್ಯಾಂಕ್ ಲಾಕರ್ ಸೌಲಭ್ಯವನ್ನು ಬಳಸುತ್ತಾರೆ. ತಮ್ಮ ಬಳಿ ಇರುವ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಖಾತೆದಾರರು ಬ್ಯಾಂಕ್ ಲಾಕರ್ ಅನ್ನು ಉಪಯೋಗಿಸುತ್ತಾರೆ.
ಬ್ಯಾಂಕ್ ಲಾಕರ್ ಮಾಡಿಸುವವರಿಗೆ ಹೊಸ ನಿಯಮ
ಸದ್ಯ ದೇಶದಲ್ಲಿ ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ RBI ಸಾಕಷ್ಟು ನಿಯಮವನ್ನು ರೂಪಿಸಿದೆ. ಪರಿಷ್ಕೃತ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ಈಗಾಗಲೇ RBI ಗ್ರಾಹಕರಿಗೆ ಸೂಚನೆ ನೀಡಿದೆ. ಇನ್ನು ಬ್ಯಾಂಕುಗಳು ಲಾಕರ್ ಗಳಿಗೆ ಬಾಡಿಗೆ ಶುಲ್ಕವನ್ನು ವಿಧಿಸುವುದು ಗ್ರಾಹಕರಿಗೆ ತಿಳಿದೇ ಇದೆ.
ಆದರೆ ಬ್ಯಾಂಕ್ ಲಾಕರ್ ನ ಬಾಡಿಗೆ ಶುಲ್ಕವಲ್ಲದೆ ಕೆಲವು ಸಮಯದಲ್ಲಿ ಹೆಚ್ಚಿನ ಶುಲ್ಕವನ್ನು ವಿಧಿಸಲಾಗುತ್ತದೆ. ಇದೀಗ ಬಂಕ್ ಲಾಕರ್ ನಲ್ಲಿ ವಿಧಿಸಲಾಗುವ ಉಳಿದ ಶುಲ್ಕಗಳ ಆಬಗ್ಗೆ ಒಂದಿಷ್ಟು ವಿವರ ತಿಳಿಯೋಣ.
ಇನ್ನುಮುಂದೆ ಈ 5 ಬ್ಯಾಂಕ್ ಲಾಕರ್ ಶುಲ್ಕ ಕಡ್ಡಾಯ
*ಲಾಕರ್ ಬಾಡಿಗೆ ಶುಲ್ಕ
ಬ್ಯಾಂಕ್ ಲಾಕರ್ ನಲ್ಲಿನ ಪ್ರಮುಖ ಮತ್ತು ಅಗತ್ಯ ಶುಲ್ಕವೆಂದರೆ ನೀವು ಲಾಕರ್ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
*ಬ್ಯಾಂಕ್ ಲಾಕರ್ ನೋಂದಣಿ ಶುಲ್ಕ
ಬ್ಯಾಂಕಿನಲ್ಲಿ ಲಾಕರ್ ಸೌಲಭ್ಯವನ್ನು ಪಡೆದುಕೊಳ್ಳುವಾಗ, ಅನೇಕ ಬ್ಯಾಂಕ್ ಗಳಲ್ಲಿ ನೀವು ಒಂದು ಬಾರಿ ನೋಂದಣಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.
*ಲಾಕರ್ ಭೇಟಿ ಮಿತಿ
ನೀವು ಬ್ಯಾಂಕ್ ಲಾಕರ್ ಗೆ ಭೇಟಿ ನೀಡಲು ಕೆಲವು ಮಿತಿಗಳನ್ನು ಹೊಂದಿಸಲಾಗಿದೆ. ನೀವು ಆ ಮಿತಿಗಿಂತ ಹೆಚ್ಚು ಲಾಕರ್ ಗೆ ಭೇಟಿ ನೀಡಿದರೆ ನೀವು ಹೆಚ್ಚುವರಿ ಲಾಕರ್ ಭೇಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
* ಲಾಕರ್ ಬಾಡಿಗೆ ಪಾವತಿ ವಿಳಂಬ
ನೀವು ಲಾಕರ್ ಬಾಡಿಗೆಯನ್ನು ಪಾವತಿಸಲು ವಿಳಂಬ ಮಾಡಿದರೆ, ನೀವು ದಂಡವನ್ನು ಒಳಗೊಂಡಂತೆ ಲಾಕರ್ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
*ಲಾಕರ್ ಮುರಿಯುವ ಶುಲ್ಕ
ಯಾವುದೇ ಸಂದರ್ಭದಲ್ಲಿ ನೀವು ಲಾಕರ್ ಅನ್ನು ಮುರಿಯಬೇಕಾದರೆ ನೀವು ಅದಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.