Maternity Leave: ಈ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 5 ವರ್ಷ ಹೆರಿಗೆ ರಜೆ, ಹೊಸ ನಿಯಮ.
ಇದೀಗ ಈ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೊಸ ಹೆರಿಗೆ ರಜಾ ನೀತಿಯನ್ನು ಜಾರಿಗೆ ತರಲಾಗಿದೆ.
5 Years Maternity Leave Policy: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ ಹರಿಸುತ್ತದೆ ಎನ್ನಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸಿ ಮಹಿಳೆಯರಿಗೆ ಸಾಕಷ್ಟು ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನು ಪುರುಷರಷ್ಟೇ ಮಹಿಳೆಯರು ಸಮಾನತೆಯನ್ನು ಹೊಂದಬೇಕು ಎಂದು ಸಾಕಷ್ಟು ಕಾನೂನುನನ್ನು ತರಲಾಗಿದೆ.
ಇನ್ನು ಕೇಂದ್ರ ಸರ್ಕಾರ ಕೂಡ ಮಹಿಳೆಯರ ಹಿತಕ್ಕಾಗಿ ವಿವಿಧ ಯೋಜನೆಗಳಲ್ಲೂ ನೀಡಿ ಅವರಿಗೆ ಆರ್ಥಿಕವಾಗಿ ನೆರವಾಗಲು ಪ್ರಯತ್ನಿಸುತ್ತಿದೆ. ಅದರಲ್ಲೂ ದೇಶದ ಗರ್ಭಿಣಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಇದೀಗ ಈ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೊಸ ಹೆರಿಗೆ ರಜಾ ನೀತಿಯನ್ನು ಜಾರಿಗೆ ತರಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಎಷ್ಟು ವರ್ಷಗಳ ಕಾಲ ರಜೆಯನ್ನು ನೀಡಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
ಈ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 5 ವರ್ಷ ಹೆರಿಗೆ ರಜೆ
ಇದೀಗ Mahindra ತನ್ನ ಖಾಸಗಿ ವಲಯದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಮುಂದಾಗಿದೆ. ಖಾಸಗಿ ವಲಯದ ಈ ಕಂಪನಿಯು ಮಹಿಳಾ ಉದ್ಯೋಗಿಗಳಿಗಾಗಿ ಹೊಸ ಹೆರಿಗೆ ನೀತಿಯನ್ನು ಪರಿಚಯಿಸಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 5 ವರ್ಷ ಹೆರಿಗೆ ರಜೆಯನ್ನು ಘೋಷಿಸಲಾಗಿದೆ. ಈ ಹೊಸ ಸೌಲಭ್ಯವು ಮಹೀಂದ್ರಾಗೆ ಸಂಬಂಧಿಸಿದ ಎಲ್ಲಾ ಮಹಿಳಾ ಕಾರ್ಮಿಕರಿಗೆ ಲಭ್ಯವಾಗುತ್ತದೆ. ದತ್ತು ಮತ್ತು ಬಾಡಿಗೆ ತಾಯ್ತನದ ಮಹಿಳೆಯರೂ ಈ ಪಾಲಿಸಿಯ ವ್ಯಾಪ್ತಿಗೆ ಬರುತ್ತಾರೆ ಮತ್ತು ಅವರಿಗೆ ಹೆರಿಗೆ ರಜೆಯನ್ನೂ ನೀಡಲಾಗುವುದು.
ಗರ್ಭಿಣಿಯರಿಗಾಗಿ ರೂಪಿಸಿರುವ ಐದು ವರ್ಷಗಳ ಹೆರಿಗೆ ನೀತಿಯಲ್ಲಿ ಏನಿದೆ…?
ಈ ಹೆರಿಗೆ ನೀತಿಯಲ್ಲಿ ಎಲ್ಲಾ ತಾಯಂದಿರಿಗೆ 6 ತಿಂಗಳ ಫ್ಲೆಕ್ಸಿ ಕೆಲಸದ ಆಯ್ಕೆಯನ್ನು ಮತ್ತು 24 ತಿಂಗಳ ಹೈಬ್ರಿಡ್ ಕೆಲಸದ ಆಯ್ಕೆಯನ್ನು ಒದಗಿಸುತ್ತದೆ. ಇದರೊಂದಿಗೆ ಒಂದು ವಾರದ ಕಡ್ಡಾಯ ಹೆರಿಗೆ ರಜೆಯನ್ನೂ ನೀಡಲಾಗುವುದು. ಈ ಹೆರಿಗೆ ರಜೆಯು ಹೆರಿಗೆಗೂ ಒಂದು ವರ್ಷ ಮೊದಲು, ತಾಯಿಯಾಗುವ ಸಮಯದಲ್ಲಿ ಒಂದು ವರ್ಷ ಮತ್ತು ನಂತರದ ಮೂರು ವರ್ಷಗಳನ್ನು ಒಳಗೊಂಡಿರುತ್ತದೆ.
ಮಗುವಿನ ನಿರ್ವಹಣೆಗಾಗಿ ರಜೆ ತೆಗೆದುಕೊಳ್ಳಲು ಬಯಸುವ ಮಹಿಳಾ ಉದ್ಯೋಗಿಗಳಿಗೆ ಕಂಪನಿಯು ಒಂದು ವರ್ಷದ ಅವಧಿಗೆ ಸುಬ್ಟಿಕಲ್ ಅಥವಾ ವೇತನವಿಲ್ಲದೆ ರಜೆಯ ಆಯ್ಕೆಯನ್ನು ನೀಡುತ್ತದೆ. ಆದರೆ ಇದು ಸಂಸ್ಥೆಯಲ್ಲಿ 36 ತಿಂಗಳ ಸೇವೆಯನ್ನು ಪೂರೈಸಿದವರಿಗೆ ಮಾತ್ರ ಲಭ್ಯವಾಗುತ್ತದೆ. ಮಾತೃತ್ವ ರಜೆಯಿಂದ ಹಿಂದಿರುಗುವ ಮಹಿಳೆಯರಿಗೆ ಕಂಪನಿಯು ವೃತ್ತಿ ಭರವಸೆ ನೀತಿಯನ್ನು ಸಹ ನೀಡುತ್ತಿದೆ.