Fake Notes: ನಿಮ್ಮ ಬಳಿ ಇರುವ 500 ರೂ ನೋಟುಗಳು ನಕಲಿ, RBI ಹೇಳಿರುವ ರೀತಿಯಲ್ಲಿ ಪರಿಶೀಲಿಸಿಕೊಳ್ಳಿ.
ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಕಲಿ ಹಾಗೂ ಅಸಲಿ ನೋಟುಗಳ ಪತ್ತೆ ಹಚ್ಚುವಿಕೆಯ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ.
500 Rs Fake Note Identification: ಪ್ರಸ್ತುತ ದೇಶದಲ್ಲಿ 500 ರೂ. ಮುಖಬೆಲೆಯ ನೋಟ್ ಅತಿ ದೊಡ್ಡ ನೋಟ್ ಆಗಿದೆ. ದೇಶದಲ್ಲಿ 2000 ರೂ. ರದ್ದಾಗಿರುವ ಬಗ್ಗೆ ಎಲ್ಲರಿಗು ತಿಳಿದೇ ಇನ್ನು. ಇನ್ನು ಕೇವಲ 12 ದಿನಗಳಲ್ಲಿ 2000 ಮುಖಬೆಲೆಯ ನೋಟ್ Indian Currency ಸ್ಥಾನವನ್ನು ಕಳೆದುಕೊಳ್ಳಲಿದೆ.
Septembar 30 ರವರಿಗೆ ಮಾತ್ರ 2000 ರೂ. ನೋಟುಗಳ ವಿನಿಮಯ ಮತ್ತು ಠೇವಣಿಗೆ RBI ಅವಕಾಶ ನೀಡಿದೆ. ನಿಗದಿತ ಸಮಯದೊಳಗೆ ನೀವು ನಿಮ್ಮ ಬಳಿ ಇರುವ ಹಣವನ್ನು ವಿನಿಮಯ ಅಥವಾ ಠೇವಣಿ ಮಾಡಬಹುದಾಗಿದೆ.
500 ರೂ. ನಕಲಿ ನೋಟುಗಳು ಹೆಚ್ಚುತ್ತಿವೆ
ಇನ್ನು ದೇಶದಲ್ಲಿ 2000 Note Ban ಆಗುತ್ತಿದ್ದಂತೆ ನೋಟಿನ ವಿಚಾರವಾಗಿ ಸಾಕಷ್ಟು ಮಾಹಿತಿಗಳು ವೈರಲ್ ಆಗಿವೆ. ನೋಟಿಗೆ ಸಂಬಂಧಿಸಿಡನಂತೆ ನಕಲಿ ಸುದ್ದಿಗಳೇ ಹೆಚ್ಚು ವೈರಲ್ ಆಗಿವೆ. 2000 ರೂ. ನೋಟು ರದ್ದಾದ ಬಳಿಕ 500 ರೂ. ಕೂಡ ರದ್ದಾಗುತ್ತದೆ ಎನ್ನುವ ಭೀತಿ ಜನರಲ್ಲಿ ಮೂಡಿತ್ತು. RBI 2000 ನೋಟಿನ ಹೊರತು ಬೇರಾವ ನೋಟನ್ನು ರದ್ದು ಮಾಡಲು ನಿರ್ಧರಿಸಿಲ್ಲ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿತ್ತು. ಇನ್ನು 500 ರೂ. ನೋಟುಗಳ ರದ್ದಾಗುತ್ತದೆ ಎನ್ನುವ ಸುದ್ದಿಗೆ ಸ್ಪಷ್ಟನೆ ಸಿಕ್ಕ ಬಳಿಕ 500 ರೂ. Fake ನೋಟುಗಳು ಬೆಳಕಿಗೆ ಬಂದಿದ್ದವು.
ನಿಮ್ಮ ಬಳಿ ಇರುವ 500 ರೂ ನೋಟುಗಳು ನಕಲಿ ಆಗಿರಬಹುದು
2000 ರೂ. ನೋಟ್ ಬ್ಯಾನ್ ಸಮಯದಲ್ಲಿ ಜನರು 500 ರೂ. ನಕಲಿ ನೋಟುಗಳ ಸಮಸ್ಯೆಯನ್ನು ಎದುರಿಸಯಬೇಕಾಗಿದೆ. ಇನ್ನು ಜನರು 500 ರೂ. ಅಸಲಿ ಹಾಗೂ ನಕಲಿ ನೋಟುಗಳ ಪತ್ತೆ ಹಚ್ಚುವಿಕೆಯ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದ್ದರು. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಕಲಿ ಹಾಗೂ ಅಸಲಿ ನೋಟುಗಳ ಪತ್ತೆಹಚ್ಚುವಿಕೆಯ ಬಗ್ಗೆ RBI ಮಾಹಿತಿ ನೀಡಿದೆ. ನಿಮ್ಮ ಬಳಿ ಇರುವ 500 ರೂ. ನೋಟುಗಳು ಈ ಕೆಳಗಿನಂತಿಲ್ಲದಿದ್ದರೆ ಅದು ನಕಲಿ ನೋಟು ಎಂದು ಪರಿಗಣಿಸಬಹುದಾಗಿದೆ.
ನಿಮ್ಮ ಬಳಿ ಇರುವ 500 ರೂ ನೋಟುಗಳು ಅಸಲಿಯತ್ತನ್ನುಪರಿಶೀಲಿಸಿಕೊಳ್ಳಿ
*ಮಹಾತ್ಮಗಾಂಧಿ ಸರಣಿಯಲ್ಲಿನ ರೂ. 500 ಮುಖಬೆಲೆಯ ನೋಟುಗಳು ಆರ್ ಬಿಐ ಗವರ್ನರ್ ಸಹಿಯನ್ನು ಹೊಂದಿದೆ.
*500 ರೂ. ನೋಟಿನ ಬಣ್ಣವು ಸ್ಟೋನ್ ಗ್ರೇ ಆಗಿದ್ದು, ಕೆಂಪು ಕೋಟೆಯ ಲಕ್ಷಣವನ್ನು ಹೊಂದಿದೆ.
*RBI ನೀಡಿರುವ ಮಾಹಿತಿಯ ಪ್ರಕಾರ, 500 ರೂ. ನೋಟಿನ ಗಾತ್ರವು 63 mm x 150 mm ಆಗಿದೆ.
*ದೇವನಾಗರಿ ಲಿಪಿಯಲ್ಲಿ ಭರತ್ ಮತ್ತು ಇಂಡಿಯಾ ಎಂದು ಬರೆಯಲಾಗಿದೆ.
*ಭಾರತ್ ಮತ್ತು RBI ಶಾಸನಗಳೊಂದಿಗೆ ಬಣ್ಣದ ಭದ್ರತಾ ದಾರ ಇರುತ್ತದೆ. ನೋಟನ್ನು ತಿರುಗಿಸಿದಾಗ ದಾರದ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
*500 ರೂ. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನ ಇರುತ್ತದೆ.
* ನೋಟಿನ ಮೇಲೆ ಎಡ ಮತ್ತು ಕೆಳಭಾಗದಲ್ಲಿ ಆರೋಹಣ ಹಾಗೂ ಮುಂಭಾಗದಲ್ಲಿ ಅಂಕಿಗಳೊಂದಿಗೆ ಸಂಖ್ಯೆಯ ಫಲಕವನ್ನು ಇರಿಸಲಾಗಿದೆ.