500 Rs: ಬ್ಯಾನ್ ಆಗುತ್ತಾ 500 ರೂಪಾಯಿ ನೋಟುಗಳು…? ನೋಟ್ ಬ್ಯಾನ್ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ.
500 ನೋಟ್ ಬ್ಯಾನ್ ಆಗುವ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.
500 Rs Note Ban: ದೇಶದೆಲ್ಲೆಡೆ ಇದೀಗ 2,000 ರೂ. (2000 Note Ban) ಮುಖಬೆಲೆಯ ನೋಟ್ ರದ್ದತಿಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಸರ್ಕಾರ ಸೆಪ್ಟೆಂಬರ್ 30 ರವರೆಗೆ ನೋಟು ವಿನಿಮಯ ಪ್ರಕ್ರಿಯೆಗೆ ಸಮಯಾವಕಾಶವನ್ನು ನೀಡಿದೆ. ಇನ್ನು 2,000 ನೋಟು ಬ್ಯಾನ್ ಆಗುತ್ತಿದ್ದಂತೆ ಹೊಸ ನೋಟ್ ಹಾಗೂ ನಾಣ್ಯಗಳ ಚಲಾವಣೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.ಇನ್ನು 2000 ರೂ. ನೋಟ್ ಬ್ಯಾನ್ ಆಗುತ್ತಿದ್ದಂತೆ 500 ರೂ. ನೋಟ್ ಗಳು ಮತ್ತೆ ಬ್ಯಾನ್ ಆಗುವ ಭೀತಿಯಲ್ಲಿದೆ.
ದೇಶದಲ್ಲಿ 500 ರೂಪಾಯಿ ನೋಟುಗಳು ಕೂಡ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 2000 ಹಾಗೂ 500 ಮುಖಬೆಲೆಯ ನಕಲಿ ನೋಟುಗಳ ಮುದ್ರಣ ಹೆಚ್ಚಾಗಿ ಬೆಳಕಿಗೆ ಬಂದಿದೆ. ನಕಲಿ ನೋಟುಗಳ ಚಲಾವಣೆಯಿಂದ ಜನಸಾಮನ್ಯರು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಿದೆ. ಈ ಕಾರಣಕ್ಕೆ ಆರ್ ಬಿಐ 500 ರೂ. ನೋಟುಗಳ ರದ್ದತಿಗೆ ನಿರ್ಧರಿಸಿದೆ ಎನ್ನಲಾಗಿದೆ.
ದೇಶದಲ್ಲಿ 2,000 ರೂ. ನೋಟ್ ಬ್ಯಾನ್
2,000 ಮುಖಬೆಲೆಯ ನೋಟುಗಳ ಬಿಡುಗಡೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಸ್ಥಗಿತಗೊಳಿಸುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದೆ. ಮಾರ್ಚ್ 2017 ಕ್ಕಿಂತ ಮೊದಲು ಹೆಚ್ಚಿನ 2,000 ನೋಟುಗಳು ಚಲಾವಣೆಗೆ ಬಂದಿದೆ.
ಇನ್ನು ದೇಶದಲ್ಲಿ ಹೆಚ್ಚುತ್ತಿರುವ ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಮೋದಿ ಸರ್ಕಾರ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಜನಸಾಮಾನ್ಯರಿಗೆ ತಮ್ಮ ಬಳಿ ಇರುವ 2,000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿ ಮಾಡಲು ಸೆಪ್ಟೆಂಬರ್ 30, 2023 ರ ತನಕ ಸಮಯಾವಕಾಶವನ್ನು ನೀಡಲಾಗಿದೆ.
ಈ ದಿನದಂದು ಜನರ ಕೈಸೇರಲಿದೆ ಇನ್ನೊಂದು ಹೊಸ ನೋಟ್
ಇನ್ನು 2016 ರಲ್ಲಿ 500 ಹಾಗೂ 1,000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿದ್ದವು. ಈ ವೇಳೆ ಕೇವಲ 500 ರ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು ಹೊಸ 1,000 ನೋಟುಗಳ ಮುದ್ರಣದ ಬಗ್ಗೆ ಆರ್ ಬಿಐ ನಿರ್ಧರಿಸಿಲ್ಲ. ಇನ್ನು 2000 ನೋಟ್ ಬ್ಯಾನ್ ನ ಬಳಿಕ ಇದೀಗ 500 ಮುಖಬೆಲೆಯ ನೋಟ್ ದೊಡ್ಡ ಮೊತ್ತದ್ದಾಗಿದೆ. ಈ 500 ನೋಟ್ ಬ್ಯಾನ್ ಬಗ್ಗೆ ಕೂಡ ಸುದ್ದಿ ವೈರಲ್ ಆಗುತ್ತಲೇ ಇದೆ. 500 ರ ನೋಟ್ ನಿಷೇಧವಾಗುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಲೇ ಇದೆ.
500 ರೂ. ನೋಟ್ ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ
ಈಗಾಗಲೇ 500 ರೂ. ನೋಟುಗಳ ಬ್ಯಾನ್ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿವೆ. ಇನ್ನು 2,000 ನೋಟುಗಳ ಬ್ಯಾನ್ ಆದ ಬಳಿಕ 500 ನೋಟುಗಳ ಕೂಡ ಬ್ಯಾನ್ ಆಗಲಿದೆ ಎನ್ನುವ ಸುದ್ದಿ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡುತ್ತಿದೆ.
ಇನ್ನು 500 ರೂ. ನೋಟುಗಳನ್ನು ಬ್ಯಾನ್ ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇಂತಹ ಸುಳ್ಳು ಸುದ್ದಿಗಳಿಗೆ ಗಮನ ಹರಿಸಬೇಡಿ ಎಂದು ಆರ್ ಬಿಐ ಜನರಿಗೆ ಎಚ್ಚರಿಕೆ ನೀಡಿದೆ.