GST Council Meeting: GST ಅನ್ನು 18% ರಿಂದ 5% ಇಳಿಕೆ ಮಾಡಿದ ಸರ್ಕಾರ, ಜನಸಾಮಾನ್ಯರಿಗೆ ಕೇಂದ್ರದಿಂದ ಗುಡ್ ನ್ಯೂಸ್.

ಈ ಉತ್ಪನ್ನಗಳ ತೆರಿಗೆ ಕಡಿಮೆ ಮಾಡಿದ ಕೇಂದ್ರ ಸರ್ಕಾರ.

52 nd GST Council Meeting: ಸರಕು ಮತ್ತು ಸೇವಾ ತೆರಿಗೆ ಮಂಡಳಿ GST ಕುರಿತು ಉನ್ನತ ನಿರ್ಧಾರ ತೆಗೆದುಕೊಳ್ಳುವ ಒಂದು ಸಂಸ್ಥೆಯಾಗಿದೆ. 52 ನೇ GST Council Meeting ಅಕ್ಟೋಬರ್ 7 ರಂದು ದೆಹಲಿಯಲ್ಲಿ ನೆಡೆಸಲಾಯಿತು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 52 ನೇ GST Council Meeting ನಲ್ಲಿ ಸಿರಿ ಧಾನ್ಯ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ ಮಾಡಲು ನಿರ್ಧಾರ ಕೈಗೊಂಡಿದೆ.

52nd GST Council Meeting
Image Credit: Indianexpress

ಸರ್ಕಾರ ಸಿರಿ ಧಾನ್ಯಗಳನ್ನು ಪ್ರೋಸ್ಸಾಹಿಸುತ್ತದೆ
ಇತ್ತೀಚೆಗೆ ರಾಗಿಯ ಬಗ್ಗೆ ಅಂದರೆ ಸಿರಿ ಧಾನ್ಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಾಗಾಗಿ ಭಾರತ 2023 ಅನ್ನು ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿದೆ. ದೇಶದಲ್ಲಿ ಒರಟು ಧಾನ್ಯಗಳ ಉತ್ಪಾದನೆ ಮತ್ತು ಬಳಕೆ ಎರಡನ್ನೂ ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಸಿರಿಧಾನ್ಯಗಳು ಅಂದರೆ ಒರಟು ಧಾನ್ಯಗಳನ್ನೂ ಉತ್ತೇಜಿಸಲು GST Council ಇದೀಗ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

GST Council 52 ನೇ ಸಭೆಯಲ್ಲಿ ಮಹತ್ವದ ನಿರ್ಧಾರ
Finance Minister Nirmala Sitharaman ಅವರ ಅಧ್ಯಕ್ಷತೆಯಲ್ಲಿ ನಡೆದ 52 ನೇ GST Council Meeting ನೆಡೆಯಿತು. ಇದರಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Finance Minister Nirmala Sitharaman Latest News
Image Credit: Cagurujiclasses

GST Council Meeting ನಲ್ಲಿ ಸಿರಿಧಾನ್ಯಗಳ ಮೇಲಿನ GST ದರವನ್ನು ಶೇಕಡಾ 18 ರಿಂದ ಶೇಕಡಾ 5 ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಪುಡಿ ಸಿರಿಧಾನ್ಯಗಳಿಗೆ ವಿನಾಯಿತಿ ನೀಡುವಂತೆ GST Council ಫಿಟ್ಮೆಂಟ್ ಸಮಿತಿಯು ಶಿಫಾರಸು ಮಾಡಿತ್ತು. ಒರಟು ಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ಮೇಲೆ GST ಯಿಂದ ವಿನಾಯಿತಿ ನೀಡುವ ಮೂಲಕ ಪ್ರೋತ್ಸಾಹಕಗಳ ಬೇಡಿಕೆಯೂ ಇತ್ತು ಇದನ್ನು Council ನಿರ್ಲಕ್ಷಿಸಿತು.

Join Nadunudi News WhatsApp Group

ಸಿರಿ ಧಾನ್ಯಗಳ ಪ್ರಯೋಜನ
ಸಿರಿ ಧಾನ್ಯಗಳು ಜನರ ಆರೋಗ್ಯಕ್ಕೆ ಮಾತ್ರ ಉತ್ತಮವಲ್ಲದೆ ಅವುಗಳು ಪರಿಸರಕ್ಕೂ ಹೆಚ್ಚು ಅನುಕೂಲಕರವಾಗಿದೆ. ಒರಟು ಧಾನ್ಯಗಳು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಸಿರಿ ಧಾನ್ಯಗಳನ್ನೂ ಕಡಿಮೆ ನೀರಿನಲ್ಲಿ ಬೆಳೆಯಬಹುದು ಹಾಗೆ ಅವುಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳು ಸಹ ಬೇಕಾಗುತ್ತವೆ. ಈ ರೀತಿಯಾಗಿ ಒರಟು ಧಾನ್ಯಗಳು ಪರಿಸರಕ್ಕೆ ಪ್ರಯೋಜನಕಾರಿ ಆಗಿದೆ.

Join Nadunudi News WhatsApp Group