Hyundai Car: ಹುಂಡೈ ಕಾರ್ ಖರೀದಿಸುವವರಿಗೆ ಸಿಹಿಸುದ್ದಿ, ಸೇಫ್ಟಿ ವಿಷಯದಲ್ಲಿ ದೊಡ್ಡ ನಿರ್ಧಾರ ಮಾಡಿದ ಹುಂಡೈ.
=ಸೇಫ್ಟಿ ವಿಷಯವಾಗಿ ಬಹುದೊಡ್ಡ ಘೋಷಣೆ ಮಾಡಿದ ಹುಂಡೈ.
6 Airbag Compulsory In Hyundai Cars: ಸದ್ಯ ಮಾರುಕಟ್ಟೆಯಲ್ಲಿ ಕಾರುಗಳದ್ದೇ ಕಾರುಬಾರು. ವಾರಕ್ಕೆ ಒಂದಾದರು ಹೊಸ ಹೊಸ ಮಾದರಿಯ ಕಾರ್ ಅನ್ನು ದೇಶದ ಜನಪ್ರಿಯ ಕಂಪನಿಗಳು ಪರಿಚಯಿಸುತ್ತವೆ. ಭಾರತೀಯ ಆಟೋ ವಲಯದಲ್ಲಿ ಕಾರ್ ಗ್ಲಾ ಮೇಲಿನ ಕ್ರೇಜ್ ಹೆಚ್ಚಿದೆ.
ಇತ್ತಿಚೆಗನ್ತು ಎಲ್ಲ ಕಂಪನಿಗಳು ಹೆಚ್ಚಿನ ಸುರಕ್ಷತಾ ರೇಟಿಂಗ್ ನೊಂದಿಗೆ ತಮ್ಮ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಜನರನ್ನು ಆಕರ್ಷಿಸಲು ಕಂಪನಿಗಳು ಹೆಚ್ಚಿನ ಮೈಲೇಜ್ ನ ಕಾರ್ ಗಳನ್ನು ಲಾಂಚ್ ಮಾಡುವುದರ ಜೊತೆಗೆ ಗ್ರಾಹಕರಿಗೆ ಕಾರ್ ಖರೀದಿ ಸಹಾಯವಾಗಲಿ ಎನ್ನುವ ಕಾರಣ ಆಕರ್ಷಕ ಹಣಕಾಸಿನ ಯೋಜನೆಯನ್ನು ಸಹ ಪರಿಚಯಿಸುತ್ತಿವೆ.
Hyundai ಕಾರ್ ಖರೀದಿಸುವವರ ಗಮನಕ್ಕೆ
ಸದ್ಯ ಮಾರುಕಟ್ಟೆಯಲ್ಲಿ HYUNDAI ಕಂಪನಿ ಈಗಾಗಲೇ ಹತ್ತು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. ಮಾರುಕಟ್ಟೆಯಲ್ಲಿ Hyundai ಕಂಪನಿಯ ಕಾರ್ ಗಳು ಬಿಡುಗಡೆಯಾದ ಕೆಲವೇ ದಿನಗಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತವೆ ಎಂದರೆ ತಪ್ಪಾಗಲಾರದು. ಸದ್ಯ Hyundai ಇನ್ನುಮುಂದೆ ತನ್ನ ಎಲ್ಲ ಮಾದರಿಯ ಕಾರ್ ಗಳಲ್ಲಿ ಬದಲಾವಣೆಯನ್ನು ತರಲು ಮುಂದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಹೆಚ್ಚಿನ ಸುರಕ್ಷತೆಯ ಫೀಚರ್ ಅನ್ನು ಅಳವಡಿಸಲು Hyundai ನಿರ್ಧರಿಸಿದೆ.
Hyundai ಕಾರ್ ಗಳಲ್ಲಿ ಇನ್ನುಮುಂದೆ 6 Airbag ಕಡ್ಡಾಯ
ಸದ್ಯ Hyundai Motor India Limited ತನ್ನ ನೂತನ ಮಾದರಿಯ Hyundai Verna ಮಾಡೆಲ್ ಅನ್ನು ಟೆಸ್ಟಿಂಗ್ ಗಾಗಿ ಕಳುಹಿಸಿದೆ. ಈ ವೇಳೆ Hyundai Verna Car ಟೆಸ್ಟ್ ನಲ್ಲಿ 5 Star Rating ಅನ್ನು ಪಡೆದುಕೊಂಡಿದೆ. ಇನ್ನು ಕಂಪನಿಯು ಇನ್ನುಮುಂದೆ ತಯಾರಿಸುವ ಎಲ್ಲ Car ಗಲ್ಲಿ 6 Airbag ಗಳನ್ನೂ ಅಳವಡಿಸುವುದಾಗಿ ಹೇಳಿಕೊಂಡಿದೆ.
ಈಗಾಗಲೇ Hyundai ತನ್ನ ಹಳೆಯ ಮಾದರಿಯ 6 Airbag ಗಳನು ನೀಡಿತ್ತು ಆದರೆ Grand i10 Neos, Aura and Venuvi ವೇರಿಯೆಂಟ್ ಗಳಲ್ಲಿ 4 Airbag ಗಳನ್ನೂ ನೀಡಲಾಗಿದೆ. ಆದರೆ ಇನ್ನುಮುಂದೆ Hyundai ಪರಿಚಯಿಸಲಿರುವ ಎಲ್ಲ ಮಾದರಿಯಲ್ಲೂ 6 Airbag ಕಡ್ಡಾಯವಾಗಿ ಇರಲಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಸುರಕ್ಷೆ ನೀಡಲು ಕಂಪನಿ ನಿರ್ಧರಿಸಿದೆ. ತನ್ನ ಎಲ್ಲ ವೇರಿಯೆಂಟ್ ಗಳಲ್ಲೂ 6 Airbag ಗಳನ್ನೂ ನೀಡುವ ಮೂಲಕ Hyundai Car ಗಳೂ ಇನ್ನುಮುಂದೆ ಭಾರತೀಯ ಆಟೋ ವಲಯದಲ್ಲಿ ಬಾರಿ ಸಂಚಲನ ಮೂಡಿಸಲಿದೆ.