7th Pay: ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಬೇಸರದ ಸುದ್ದಿ, ಸಿದ್ದರಾಮಯ್ಯ ಆದೇಶ

ಸರ್ಕಾರೀ ನೌಕರರ ವೇತನ ಹೆಚ್ಚಳ ಸದ್ಯಕ್ಕಿಲ್ಲ

7th Pay Latest Update: ಸದ್ಯ ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಕೂಡ 7 ನೇ ವೇತನ ಆಯೋಗ ವರದಿ ಜಾರಿಯಾಗಿಲ್ಲ. ಈ ಬಗ್ಗೆ ಸರ್ಕಾರೀ ನೌಕರರು ಈಗಲೂ ಯೋಚಿಸುತ್ತಲೇ ಇದ್ದಾರೆ. ಯಾವಾಗ 7 ನೇ ವೇತನ ಆಯೋಗ ವರದಿ ಜಾರಿಯಾಗುತ್ತದೆ ಎನ್ನುವ ಕುತೂಹಲದಲ್ಲಿ ನೌಕರರು ದಿನದೂಡುತ್ತಿದ್ದಾರೆ ಎನ್ನಬಹುದು.

ಇನ್ನು ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ 7 ನೇ ವೇತನದ ಬಗ್ಗೆ ಘೋಷಣೆ ಹೊರಡಿಸಲಾಗುತ್ತದೆ ಎಂದು ಈ ಹಿಂದೆ ಸರ್ಕಾರ ಹೇಳಿಕೆ ನೀಡಿತ್ತು. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿ ಸಾಕಷ್ಟು ದಿನ ಕಳೆದಿದೆ. ಸದ್ಯ ರಾಜ್ಯ ಸರ್ಕಾರ 7 ನೇ ವೇತನ ವರದಿ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಸರ್ಕಾರ ಈ ನಿರ್ಧಾರ ಸರ್ಕಾರೀ ನೌಕರರಿಗೆ ಬೇಸರ ನೀಡಲಿದೆ.

Siddaramaiah About 7th Pay
Image Credit: Hindustantimes

ಸರ್ಕಾರೀ ನೌಕರರ ವೇತನ ಹೆಚ್ಚಳ ಸದ್ಯಕ್ಕಿಲ್ಲ
ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೆ.ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುತ್ತಿಲ್ಲ. ಇದರಿಂದ ಸರ್ಕಾರಿ ನೌಕರರ ವೇತನ ಹೆಚ್ಚಾಗುತ್ತಿಲ್ಲ. ಇದೀಗ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಪದೇ ಪದೇ ನಿರಾಸೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ನಿರ್ಧಾರ ಕೈಗೊಳ್ಳುತ್ತಿಲ್ಲ, ಇದು ಇದಕ್ಕೆ ಕಾರಣ ಬಹಿರಂಗವಾಗಿದೆ.

7th pay big update
Image Credit: Live Mint

ನೌಕರರ ವೇತನ ಏಕೆ ಹೆಚ್ಚಾಗುತ್ತಿಲ್ಲ…?
ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸರ್ಕಾರಿ ನೌಕರರ ವೇತನವನ್ನು ಏಕೆ ಹೆಚ್ಚಳವಾಗುತ್ತಿಲ್ಲ ಎಂದು ವಿವರಿಸಿದ್ದಾರೆ.

ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯ ದುರಾಡಳಿತದಲ್ಲಿ
* ಗುತ್ತಿಗೆದಾರರ ಬಾಕಿ ಪಾವತಿಗೆ ಹಣವಿಲ್ಲ

Join Nadunudi News WhatsApp Group

* ಸರ್ಕಾರಿ ನೌಕರರ ವೇತನ ಹೆಚ್ಚಳವಿಲ್ಲ

* ಗೃಹಲಕ್ಷ್ಮಿಗೆ ಹಣ ಸಿಗುತ್ತಿಲ್ಲ

* ರೈತರಿಗೆ ಪ್ರೋತ್ಸಾಹಧನವಿಲ್ಲ

Outgoing CM Siddaramaiah CM Of Karnataka ನವರ ಏಕೈಕ ಸಾಧನೆ ಅಂದರೆ ಅದು ಕರ್ನಾಟಕದ ಆರ್ಥಿಕ ಪರಿಸ್ಥಿಯನ್ನು ಅಧೋಗತಿಗೆ ತಳ್ಳಿರುವುದು ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.

7th Pay Commission Latest Update
Image Credit: Informalnewz

Join Nadunudi News WhatsApp Group