Ads By Google

7th Scale: ಸರ್ಕಾರೀ ನೌಕರರ ಸಂಬಳ 27000 ಕ್ಕೆ ಏರಿಕೆ, ಸಿದ್ದರಾಮಯ್ಯ ಸರ್ಕಾರದ ಘೋಷಣೆ

7th Pay Commission Big Update

Image Credit: Original Source

Ads By Google

7th Pay Latest Update: ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರೀ ನೌಕರರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಹೌದು, ರಾಜ್ಯ ಸರ್ಕಾರೀ ನೌಕರರಿಗೆ ಶೀಘ್ರದಲ್ಲೇ 7 ನೇ ವೇತನ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

ಆಗಸ್ಟ್ 1 ರಿಂದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿ ಲಭ್ಯವಾಗಲಿದೆ. ಪರಿಷ್ಕೃತ ವೇತನ ಶ್ರೇಣಿ ಜಾರಿಯಾಗದಿದ್ದರೆ ಇದೇ 29 ರ ನಂತರ ಮುಷ್ಕರ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಕೆ ನೀಡಿತ್ತು. ಅಲ್ಲದೆ, ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿದೆ. ಇನ್ನು ವೇತನ ಹೆಚ್ಚಳ ಘೋಷಣೆಯ ನಂತರ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: Akhandindia

ಸರ್ಕಾರೀ ನೌಕರರಿಗೆ ಭರ್ಜರಿ ಗುಡ್ ನ್ಯೂಸ್
ಜುಲೈ 15 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಅವರು 7 ನೇ ಜಾರಿಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ದು ನೇತೃತ್ವದ ಸರ್ಕಾರ, ಕನಿಷ್ಠ ಮೂಲ ವೇತನ ರೂ.17,000 ರಿಂದ ರೂ. 27,000 ಹೆಚ್ಚಿಸಲಾಗಿದೆ.

ಈ ಕುರಿತು ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ನೌಕರರ ಕನಿಷ್ಠ ಮೂಲ ವೇತನ ರೂ. 17,000 ರಿಂದ ರೂ. 27,000 ಗರಿಷ್ಠ ವೇತನ ರೂ. 1,50,600 ರಿಂದ ರೂ. 2,41,200 ಪರಿಷ್ಕರಿಸಲಾಗುವುದು ಎಂದಿದ್ದಾರೆ. ಇದಲ್ಲದೇ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಲಾಗಿದ್ದು, ನೌಕರರ ಕನಿಷ್ಠ ಪಿಂಚಣಿ ರೂ.8,500 ರಿಂದ ರೂ.13,500 ಹಾಗೂ ಗರಿಷ್ಠ ಪಿಂಚಣಿ ರೂ.75,300 ರಿಂದ ರೂ. 1.20,600 ಪರಿಷ್ಕರಿಸಲಾಗುವುದು. ಈ ಪರಿಷ್ಕರಣೆಯು ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೆ ಅನ್ವಯಿಸುತ್ತದೆ.

Image Credit: Informalnewz

ಕನಿಷ್ಠ ವೇತನ ರೂ. 27000 ಕ್ಕೆ ಹೆಚ್ಚಳ
7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನ ದಿನಾಂಕ: 01.07.2022ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ದಿನಾಂಕ: 01.08.2024ರಿಂದ ಅನುಷ್ಠಾನಗೊಳಿಸಲು ದಿನಾಂಕ: 15.07.2024ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದರಂತೆ, ದಿನಾಂಕ: 01.07.2022 ರಂತೆ, ನೌಕರರ ಮೂಲ ವೇತನಕ್ಕೆ 31% ತುಟ್ಟಿ ಭತ್ಯೆ ಮತ್ತು ರೂ. 27.50% ಫಿಟ್‌ಮೆಂಟ್ ಸೇರಿಸುವ ಮೂಲಕ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿ ಶೇ.58.50ರಷ್ಟು ಹೆಚ್ಚಳವಾಗಲಿದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಏರಿಕೆಯಾಗಲಿದೆ.

Image Credit: Informalnewz
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field