7th Pay: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಆಗಸ್ಟ್ ನಲ್ಲಿ 7 ನೇ ವೇತನ ಆಯೋಗ ವರದಿ ಜಾರಿ.

7 ನೇ ವೇತನದ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್

7th Pay New Update: ಸದ್ಯ ರಾಜ್ಯ ಸರ್ಕಾರೀ ನೌಕರರು ಬಹುದಿನಗಳಿಂದ 7 ನೇ ವೇತನ ಜಾರಿಯ ಬಗ್ಗೆ ಸರ್ಕಾರದ ಮುಂದೆ ಮನವಿ ಇಟ್ಟಿದ್ದಾರೆ. ನೌಕರರು ಹಲವು ಸಮಯದಿಂದ 7 ನೇ ವೇತನ ಜಾರಿಯ ಬಗ್ಗೆ ಸರ್ಕಾರ ಘೋಷಣೆ ಹೊರಡಿಸುತ್ತದೆ ಎಂದು ಕಾಯುತ್ತಿದ್ದರೆ. ಲೋಕಸಭಾ ಚುನ್ವಣೆಯವರೆಗೂ ನೌಕರರು ಏಳನೇ ವೇತನ ಘೋಷಣೆಗಾಗಿ ಕಾಯುತ್ತಿದ್ದರು. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು, ಫಲಿತಾಂಶ ಪ್ರಕಟವಾಗಿ ದೇಶದಲ್ಲಿ ಸರ್ಕಾರ ರಚನೆಯಾದರೂ ಕೂಡ 7 ನೇ ವೇತನದ ಬಗ್ಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ.

ಈವರೆಗೆ ರಾಜ್ಯ ಸರ್ಕಾರ ಕೆಲವು ರಾಜ್ಯ ಸಚಿವ ಸಂಪುಟ ಸಭೆ ನಡೆಸಿದರು ಕೂಡ 7 ನೇ ವೇತನದ ಬಗ್ಗೆ ಚರ್ಚಿಸಿಲ್ಲ. ಆದರೆ ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರೀ ನೌಕರರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಹೌದು, ರಾಜ್ಯ ಸರ್ಕಾರೀ ನೌಕರರಿಗೆ ಶೀಘ್ರದಲ್ಲೇ 7 ನೇ ವೇತನ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.

7th Pay New Update
Image Credit: India

ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್
ಇದೀಗ 7 ನೇ ವೇತನ ಆಯೋಗ ವರದಿ ಜಾರಿ ಕುರಿತಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ನೌಕರರಿಗೆ 7 ನೇ ವೇತನ ಆಯೋಗ ಶಿಫಾರಸ್ಸುಗಳ ಜಾರಿ ಬಗ್ಗೆ ಸರ್ಕಾರ ಖಚಿತ ಮಾಹಿತಿ ನೀಡಿದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಹಣಕಾಸು ಹೊಂದಾಣಿಕೆ ಕುರಿತಂತೆ ಪರಿಶೀಲನೆ ನಡೆಸಿ ಮಾಹಿತಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಸೂಚನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಆಗಸ್ಟ್ ನಲ್ಲಿ ಏಳನೇ ವೇತನ ಆಯೋಗ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆಗಸ್ಟ್ ನಲ್ಲಿ 7 ನೇ ವೇತನ ಆಯೋಗ ವರದಿ ಜಾರಿ
ಏಳನೇ ವೇತನ ಆಯೋಗವು 27.5% ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಹಿಂದಿನ ಸರಕಾರ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡಿತ್ತು. ಈಗ ಉಳಿದ ಶೇ.10.5ರಷ್ಟು ಹೆಚ್ಚಳ ನೀಡಲು ನಿರ್ಧರಿಸಲಾಗಿದೆ. ವೇತನ ಹೆಚ್ಚಳಕ್ಕೆ ಸರಕಾರ ಬಜೆಟ್‌ ನಲ್ಲಿ 14 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಜುಲೈ 15 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವೇತನ ಪರಿಷ್ಕರಣೆ ಕುರಿತು ಚರ್ಚೆ ನಡೆಸಲಿದ್ದು, ನಂತರ ಆದೇಶ ಪ್ರಕಟಗೊಂಡು ಜಾರಿಗೆ ಬರಲಿದೆ ಎನ್ನಲಾಗಿದೆ. ಶೀಘ್ರದಲ್ಲೇ ಸರ್ಕಾರೀ ನೌಕರರು 7 ನೇ ವೇತನದ ವಿಚಾರವಾಗಿ ಸಿಹಿ ಸುದ್ದಿ ಪಡೆಯಬಹುದು.

7th pay commision live updates
Image Credit: Original Source

Join Nadunudi News WhatsApp Group

Join Nadunudi News WhatsApp Group