Ads By Google

7th Pay: 7 ನೇ ವೇತನ ಜಾರಿ, ಹಾಗಾದರೆ ಸರ್ಕಾರೀ ನೌಕರರ ಸಂಬಳ ಎಷ್ಟು ಏರಿಕೆ ಆಗಲಿದೆ ನೋಡಿ.

karnataka government employees 7th pay details

Image Credit: Original Source

Ads By Google

7th Pay New Update: ರಾಜ್ಯ ಸರ್ಕಾರ ಈವರೆಗೆ ಕೆಲವು ರಾಜ್ಯ ಸಚಿವ ಸಂಪುಟ ಸಭೆ ನಡೆಸಿದರು ಕೂಡ 7 ನೇ ವೇತನದ ಬಗ್ಗೆ ಚರ್ಚಿಸಿಲ್ಲ. ಆದರೆ ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರೀ ನೌಕರರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಹೌದು, ರಾಜ್ಯ ಸರ್ಕಾರೀ ನೌಕರರಿಗೆ ಶೀಘ್ರದಲ್ಲೇ 7 ನೇ ವೇತನ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ನೌಕರರಿಗೆ 7 ನೇ ವೇತನವನ್ನು ಜಾರಿ ಮಾಡಿದರೆ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: Informal News

ರಾಜ್ಯದಲ್ಲಿ 7 ನೇ ವೇತನ ಜಾರಿ
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಆಗಸ್ಟ್ 1 ರಿಂದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿ ಲಭ್ಯವಾಗಲಿದೆ. ಪರಿಷ್ಕೃತ ವೇತನ ಶ್ರೇಣಿ ಜಾರಿಯಾಗದಿದ್ದರೆ ಇದೇ 29ರ ನಂತರ ಮುಷ್ಕರ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಕೆ ನೀಡಿತ್ತು. ಅಲ್ಲದೆ, ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿದೆ.

ವೇತನ ಪರಿಷ್ಕರಣೆಗಾಗಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಏಳನೇ ವೇತನ ಆಯೋಗವನ್ನು ರಚಿಸಿತ್ತು. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ 17% ಮಧ್ಯಂತರ ಪರಿಹಾರವನ್ನು ನೀಡಲು ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಳಿದ 10.50% ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ 7ನೇ ವೇತನ ಆಗಸ್ಟ್ ನಿಂದಲೇ ಜಾರಿಗೆ ಬರಲಿದೆ.

Image Credit: Rightsofemployees

ಸರ್ಕಾರೀ ನೌಕರರ ಸಂಬಳ ಎಷ್ಟು ಏರಿಕೆ ಆಗಲಿದೆ ನೋಡಿ
ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆಯ ನೌಕರರ ಮೂಲ ವೇತನವು ಜುಲೈ 1, 2022 ರಂದು 17,000 ರೂ. ಇದ್ದರೆ, ತುಟ್ಟಿ ಭತ್ಯ ಶೇ. 31 (ರೂ. 5,270) ಮತ್ತು ಶೇಕಡಾ 27.50 (ರೂ. 4,675) ಫಿಟ್‌ಮೆಂಟ್‌ಗೆ ಒಟ್ಟು 26,945 ಸಿಗುತ್ತದೆ. ಈಗ 2024 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನವು 27,000 ಆಗಿದ್ದರೆ ಅಂದಾಜು ತುಟ್ಟಿಭತ್ಯೆ 8.5% (ರೂ. 2295), ಮನೆ ಬಾಡಿಗೆ ಭತ್ಯೆ 20% (ರೂ. 5,400), ವೈದ್ಯಕೀಯ 500 ಮತ್ತು ನಗರ ಪರಿಹಾರ ಭತ್ಯೆ (CCA) ) ರೂ. 750 ಒಟ್ಟು ರೂ. 35,945 (01-01-2024 ಕ್ಕೆ) ಸಿಗಲಿದೆ.

Image Credit: Original Source
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field