8th Pay commission 2025 Salary And DA: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗದ ಜಾರಿಯನ್ನು ಕಾಯುತ್ತಿದ್ದಾರೆ. ಇದರಿಂದ ನೌಕರರ ಸಂಬಳ ಮತ್ತು ಭತ್ಯೆಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಕೇಂದ್ರ ಸರ್ಕಾರವು ಜನವರಿ 2025 ರಲ್ಲಿ 8ನೇ ವೇತನ ಆಯೋಗದ ರಚನೆಯನ್ನು ಘೋಷಿಸಿತ್ತು, ಆದರೆ ಇನ್ನು ಜಾರಿಗೆ ಬರಲಿಲ್ಲ. ಇದರಿಂದ ಜನವರಿ 2026 ರ ವೇಳೆಗೆ ಜಾರಿಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಇದೀಗ ನಾವು 8 ನೇ ವೇತನ ಜಾರಿಯಾದರೆ ಸಂಬಳ ಮತ್ತು DA ಯಲ್ಲಿ ಏನು ಬದಲಾವಣೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಆಯೋಗದ ಹಿನ್ನೆಲೆ
ವೇತನ ಆಯೋಗವು ಕೇಂದ್ರ ಸರ್ಕಾರವು ಸ್ಥಾಪಿಸುವ ವಿಶೇಷ ಸಮಿತಿಯಾಗಿದೆ. ಇದು ಸರ್ಕಾರಿ ನೌಕರರ ವೇತನ, ಭತ್ಯೆಗಳು ಮತ್ತು ಇತರ ಪ್ರಯೋಜನಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಶಿಫಾರಸುಗಳನ್ನು ಮಾಡುತ್ತದೆ. ಈ ಶಿಫಾರಸುಗಳು ನೌಕರರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಜೀವನ ವೆಚ್ಚಕ್ಕೆ ತಕ್ಕಂತೆ ಸಂಬಳವನ್ನು ಸರಿಹೊಂದಿಸಲು ಸಹಾಯ ಮಾಡುತ್ತವೆ. 1947 ರಿಂದ ಇದುವರೆಗೆ ಒಟ್ಟು ಏಳು ವೇತನ ಆಯೋಗಗಳು ರಚನೆಯಾಗಿವೆ. ಇದೀಗ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆಗೆ 2025 ಜನವರಿಯಲ್ಲಿ ಅನುಮೋದನೆ ನೀಡಿದೆ. ಇನ್ನು ನವೆಂಬರ್ ನಲ್ಲಿ ಟರ್ಮ್ ಆಫ್ ರೆಫೆರೆನ್ಸ್ ಅನುಮೋದನೆಯಾಗಿದೆ. ಆಯೋಗದಲ್ಲಿ ಚೆರ್ ಪರ್ಸನ್, ಒಬ್ಬ ಸದಸ್ಯ, ಮತ್ತು ಒಬ್ಬ ಸೆಕ್ರೆಟರಿ ಇರುತ್ತಾರೆ. ಶಿಫಾರಸ್ಸುಗಳನ್ನು 18 ತಿಂಗಳ ಒಳಗೆ ಸಲ್ಲಿಸಬೇಕು, ಕರ್ನಾಟಕದಲ್ಲಿ ಇನ್ನು ಪ್ರತ್ಯೇಕ ಆಯೋಗ ರಚನೆ ಆಗಿಲ್ಲ.
8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ
ಅಂದಾಜಿನ ಪ್ರಕಾರ ಕೇಂದ್ರದಲ್ಲಿ ಶಿಫಾರಸ್ಸುಗಳು ಜನವರಿ 1, 2026 ರಿಂದ ಜಾರಿಗೆ ಬರಲಿದೆ ಮತ್ತು ಆಯೋಗದ ವರದಿ 2026 ರ ಮಧ್ಯ ಅಥವಾ ಅಂತ್ಯದಲ್ಲಿ ಬರಲಿದೆ. ಆದರೆ ಕರ್ನಾಟಕದಲ್ಲಿ 6 ರಿಂದ 12 ತಿಂಗಳು ತಡವಾಗಬಹುದು.
ನೌಕರರ ಸಂಬಳ ಎಷ್ಟು ಹೆಚ್ಚಾಗಬಹುದು?
ಪಿಟ್ಮೆಂಟ್ ಪ್ಯಾಕರ್ 1.83 ರಿಂದ 2.46 ವರೆಗೆ ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇದರಿಂದ ಸಂಬಳದಲ್ಲಿ 20% ನಿಂದ 34% ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ ಮೂಲ ವೇತನ ಕನಿಷ್ಠ 18,000 ದಿಂದ 33,000-44,000 Rs ಕ್ಕೆ ಏರಿಕೆ ಆಗಬಹುದು. ಇದು ಅಂದಾಜಿನ ಪ್ರಕಾರ, ನಿಖರ ಅಂಕಿ ಅಂಶಗಳಿಗಾಗಿ ಆಯೋಗದ ವರದಿ ಬರುವರೆಗೆ ಕಾಯಬೇಕು.
DA ಮತ್ತು ಇತರ ಸೌಲಭ್ಯಗಳು
ಹೊಸ ಆಯೋಗದ ರಚನೆಯಲ್ಲಿ DA ಶೂನ್ಯದಿಂದ ಪ್ರಾರಂಭವಾಗಿ ನಂತರ ಹೆಚ್ಚಾಗುತ್ತದೆ. ಪ್ರಸ್ತುತ DA 58% ನಿಂದ 70% ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಇನ್ನುHRA,TA ಮುಂತಾದ ಸೌಲಭ್ಯಗಳು ಹೊಸ ಮೂಲ ವೇತನದ ಮೇಲೆ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ನೌಕರರಿಗೆ ಮಾತ್ರವಲ್ಲದೆ ಪಿಂಚಣಿದಾರರಿಗೂ ಪರಿಸ್ಕರಣೆ ಆಗುತ್ತದೆ.
ಕರ್ನಾಟಕ ನೌಕರರಿಗೆ ಸಿಗುವ ಪ್ರಯೋಜನಗಳು
ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರದ ಶಿಫಾರಸ್ಸುಗಳನ್ನು ಅಳವಡಿಸಿಕೊಂಡರೆ, ನೌಕರರ ಸಂಬಳ, ಭತ್ಯೆಗಳಲ್ಲಿ ಹೆಚ್ಚಳ ಆಗುತ್ತದೆ. ಇದು ನೌಕರರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರೀ ವೆಬ್ ಸೈಟ್ ಗಳನ್ನೂ ಪರಿಶೀಲಿಸಿ.
8 ನೇ ವೇತನ ಆಯೋಗದ ಪ್ರಮುಖ ಕಾರ್ಯಗಳು
* ಆಯೋಗದ ಸಂಬಳ ರಚನೆ
* ಭತ್ಯೆಗಳ ಪರಿಶೀಲನೆ
* ಪಿಂಚಣಿ ಮತ್ತು ಸೇವಾ ನಿಯಮಗಳ ಪರಿಶೀಲನೆ
* ಆರ್ಥಿಕ ಸ್ಥಿತಿ ಮತ್ತು ಹಣದುಬ್ಬರವನ್ನು ಪರಿಗಣಿಸಿ ಶಿಫಾರಸ್ಸು ಮಾಡುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

