8th Pay Commission DA And Pension: ಇನ್ನೇನು ಕೆಲವೇ ದಿನಗಳಲ್ಲಿ 2025 ರ ವರ್ಷ ಮುಗಿಯಲಿದ್ದು, ಆದರೆ ಹೊಸ ವೇತನ ಆಯೋಗ ಯಾವಾಗ ಜಾರಿ ಆಗುತ್ತದೆ ಅನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗದ ಘೋಷಣೆಯನ್ನು ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಆಯೋಗವು ಸಂಬಳ ಮತ್ತು ಪಿಂಚಣಿಯನ್ನು 25% ರಿಂದ 30% ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ನೌಕರರ ಸಂಬಳ ಮತ್ತು ಭತ್ಯೆಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
8ನೇ ವೇತನ ಆಯೋಗ
ಜನವರಿ 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕ್ಯಾಬಿನೆಟ್ 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿತು ಮತ್ತು ನವೆಂಬರ್ 3, 2025 ರಂದು ಹಣಕಾಸು ಸಚಿವಾಲಯದಿಂದ ಟರ್ಮ್ ಆಫ್ ರೆಫೆರೆನ್ಸ್ (ToR) ಅಧಿಸೂಚನೆಯನ್ನು ಹೊರಡಿಸಿದೆ. 8ನೇ ವೇತನ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ, ಹಾಗೆ ಪಾರ್ಟ್ ಟೈಮ್ ಸದಸ್ಯರಾಗಿ ಪ್ರೊ. ಪುಲಕ್ ಘೋಷ್ ಮತ್ತು ಸದಸ್ಯ ಕಾರ್ಯದರ್ಶಿ ಆಗಿ ಪಂಕಜ್ ಜೈನ್ ಆಯ್ಕೆ ಆಗಿದ್ದು,ಇದರ ಮುಖ್ಯ ಕಚೇರಿ ದೆಹಲಿಯಲ್ಲಿದೆ.
8ನೇ ವೇತನ ಆಯೋಗ ಯಾವಾಗ ಜಾರಿಯಾಗಲಿದೆ?
8ನೇ ವೇತನ ಆಯೋಗ ನವೆಂಬರ್ 2025 ರಲ್ಲಿ ಉಲ್ಲೇಖ ನಿಯಮಗಳನ್ನು (ToR) ಅನುಮೋದಿಸಿ ಸೂಚನೆ ನೀಡಿದೆ, ಇದು ಹಣಕಾಸಿನ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳನ್ನು ಪರಿಶೀಲಿಸಿ ತನ್ನ ಆದೇಶವನ್ನು ನೀಡುತ್ತದೆ. ಶಿಫಾರಸ್ಸುಗಳು ಜನವರಿ 1, 2026 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ, ಆದರೂ ಅನುಷ್ಠಾನಕ್ಕೆ ಸಮಯ ತೆಗೆದುಕೊಳ್ಳುತ್ತದೆ.
PIB ಪ್ಯಾಕ್ಟ್ ಚೆಕ್
ಇತ್ತೀಚಿಗೆ ಫೈನಾನ್ಸ್ ಆಕ್ಟ್ 2025 ಅಡಿಯಲ್ಲಿ ಪಿಂಚಣಿದಾರರ DA ಹೆಚ್ಚಳ ಮತ್ತು ಪೇ ಕಮಿಷನ್ ಲಾಭಗಳನ್ನು ನಿಲ್ಲಿಸಲಾಗಿದೆ ಎಂದು ಒಂದು ಸುದ್ದಿ ವೈರಲ್ ಆಗಿತ್ತು. ಇದೀಗ ಆ ಸುದ್ದಿ ಸಂಪೂರ್ಣ ಸುಳ್ಳು ಸುದ್ದಿ ಎಂದು PIB ಪ್ಯಾಕ್ಟ್ ಚೆಕ್ ಘೋಷಣೆ ಮಾಡಿದೆ. ಸಾಮಾನ್ಯ ಪಿಂಚಣಿದಾರರಿಗೆ ಯಾವುದೇ ಬದಲಾವಣೆ ಇಲ್ಲ, ಕೇವಲ PSU ಗೆ ವರ್ಗಾಯಿಸಲಾದ ಮತ್ತು ಗಂಭೀರ ತಪ್ಪಿಗಾಗಿ ವಜಾಗೊಳಿಸಲಾದ ನೌಕರರಿಗೆ ಮಾತ್ರ ರಿಟೈರ್ಮೆಂಟ್ ಲಾಭಗಳು ರದ್ದಾಗುವ ಸಾಧ್ಯತೆ ಇದೆ ಎಂದು PIB ಮಾಹಿತಿ ನೀಡಿದೆ.
ಯಾರು ಈ ಆಯೋಗದ ಲಾಭವನ್ನು ಪಡೆದುಕೊಳ್ಳುತ್ತಾರೆ?
ಸುಮಾರು 50.14 ಲಕ್ಷ ಕೇಂದ್ರ ಸರ್ಕಾರೀ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು ಈ ಆಯೋಗದ ಲಾಭವನ್ನು ಪಡೆದುಕೊಳ್ಳುತ್ತಾರೆ. ಪ್ರಸ್ತುತ 58% DA ಇದ್ದು, ಇದು ಹೆಚ್ಚಳ ಆಗುವ ಸಾಧ್ಯತೆ ಇದೆ. ಆಯೋಗದ ಶಿಫಾರಸ್ಸುಗಳು ಒಪ್ಪಿದ ನಂತರ ಬಜೆಟ್ ನಲ್ಲಿ ಅನುದಾನ ಮಾಡಲಾಗುತ್ತದೆ. ಹಾಗೆಯೇ Fitment facts ಮೂಲಕ ವೇತನ ಹೆಚ್ಚಳದ ನಿರ್ಧಾರ ಆಗುತ್ತದೆ. ವೇತನ ಹೆಚ್ಚಳ 20 ರಿಂದ 35% ಇರಬಹುದು ಎಂದು ಅಂದಾಜಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

