8th Pay: ದೇಶದ ಎಲ್ಲಾ ಸರ್ಕಾರೀ ನೌಕರರಿಗೆ ಕೇಂದ್ರದ ಆದೇಶ, ಸಂಬಳದ ವಿಷಯದಲ್ಲಿ ಮಹತ್ವದ ನಿರ್ಧಾರ.
8ನೇ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರದ ಮಹತ್ವದ ಆದೇಶ.
8th Pay Commission Update: ಪ್ರಸ್ತುತ ಸರ್ಕಾರಿ ನೌಕರರು 7 ನೇ ವೇತನ ಆಯೋಗ (7th Pay Commission) ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ. ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ.
ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 8 ನೇ ವೇತನ ಆಯೋಗದ (8th Pay Commission) ಕುರಿತು ಮಾಹಿತಿ ಹೊರಬಿದ್ದಿದೆ. ಸರ್ಕಾರಿ ನೌಕರರಿಗೆ ಶೀಘ್ರವೇ 8ನೇ ವೇತನ ಆಯೋಗ ಜಾರಿಗೊಳಿಸುವಂತೆ ಸರ್ಕಾರ ಚಿಂತನೆ ನಡೆಸಿದೆ.
8ನೇ ವೇತನ ಆಯೋಗ ರಚನೆ (8th Pay Commission)
2024 ರ ಅಂತ್ಯದ ವೇಳೆಯಲ್ಲಿ 8ನೇ ವೇತನ ಆಯೋಗ ರಚನೆಯಾಗಲಿದೆ. 2016 ರಲ್ಲಿ 7 ನೇ ವೇತನ ಆಯೋಗ ರಚನೆಯಾಗಿತ್ತು. ಪ್ರತಿ 10 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆಯಾಗಲಿದೆ. 2025 ರ ಅಂತ್ಯದಲ್ಲಿ ಅಥವಾ 2026 ರ ಆರಂಭದಲ್ಲಿ 8 ನೇ ವೇತನ ಆಯೋಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ವರದಿಯಾಗಿತ್ತು.
ಈ ಬಾರಿಯ 8 ನೇ ವೇತನ ಹೆಚ್ಚಳವು ನೌಕರರ ವೇತನವನ್ನು ಇನ್ನಷ್ಟು ಹೆಚ್ಚಿಸಲಿದೆ. ಫಿಟ್ ಮೆಂಟ್ ಅಂಶವು 3.68 ಪಟ್ಟು ಹೆಚ್ಚಳ ಸಂಭವನೀಯ ಸಾಧ್ಯತೆ ಇದೆ ಹಾಗೂ ವೇತನ ಹೆಚ್ಚಳ 44.44 %, ಕನಿಷ್ಠ ವೇತನ ರೂ. 26000 ಸಾಧ್ಯತೆ ಇದೆ ಎನ್ನುವ ಬಗ್ಗೆ ಈ ಹಿಂದೆ ವರದಿಯಾಗಿತ್ತು.
8ನೇ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರದ ಮಹತ್ವದ ಆದೇಶ
ಇದೀಗ ಹಣಕಾಸು ಖಾತೆ ಸಚಿವ ಪಂಕಜ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 8ನೇ ವೇತನ ಆಯೋಗ ರಚನೆಯ ಬಗ್ಗೆ ರಾಜ್ಯಸಭೆಯಲ್ಲಿ ಸಚಿವರು ಮಹತ್ವದ ಆದೇಶ ನೀಡಿದ್ದಾರೆ. “ಕೇಂದ್ರ ಸರ್ಕಾರ 2014 ರಲ್ಲಿ 7 ನೇ ವೇತನ ಆಯೋಗವನ್ನು ಹೊರಡಿಸಿತ್ತು. ಪ್ರಸ್ತುತ ನೌಕರರು ಅದರ ಪ್ರಕಾರ ವೇತನ ಪಡೆಯುತ್ತಿದ್ದಾರೆ. ಇದರೊಂದಿಗೆ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಪ್ರಸ್ತುತ 8 ನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ಸರ್ಕಾರದ ಬಳಿ ಯಾವುದೇ ಯೋಜನೆ ಇಲ್ಲ” ಎಂದು ಸಚಿವರು ಮಾಹಿತಿ ತಿಳಿಸಿದ್ದಾರೆ.
ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಇನ್ನು ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ.
ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ.