Ads By Google

8th Pay: 8 ನೇ ವೇತನದ ನಿರೀಕ್ಷೆಯಲ್ಲಿ ಇರುವವರಿಗೆ ಬೇಸರದ ಸುದ್ದಿ, ಸರ್ಕಾರದ ಅಧಿಕೃತ ಆದೇಶ.

Govt Employees 8th Pay Commission

Image Credit: Original Source

Ads By Google

8th Pay Latest Update: ಸದ್ಯ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿರುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಹೊರಡಿಸಿದೆ. ನೌಕರರು ಈ ಘೋಷಣೆಯ ಬಳಿಕ ಶೇ. 4 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

ಇನ್ನು 7 ನೇ ವೇತನದಡಿ ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಇದೀಗ ಸರ್ಕಾರ ನೌಕರರ 8 ನೇ ವೇತನ ಜಾರಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆ. ಸರ್ಕಾರೀ ನೌಕರರು 8 ನೇ ವೇತನ ಜಾರಿಗಾಗಿ ಆಗ್ರಹಿಸಿದ್ದಾರೆ. ಈ ಬಾರಿ ಸರ್ಕಾರ 8 ನೇ ವೇತನದ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರ ನೌಕರರಿಗೆ ಬೇಸರ ತಂದಿದೆ ಎನ್ನಬಹುದು.

Image Credit: Informalnewz

8 ನೇ ವೇತನದ ನಿರೀಕ್ಷೆಯಲ್ಲಿ ಇರುವವರಿಗೆ ಬೇಸರದ ಸುದ್ದಿ
ಜೂನ್ 2024 ರಲ್ಲಿ 8 ನೇ ಕೇಂದ್ರ ವೇತನ ಆಯೋಗವನ್ನು ರಚಿಸುವುದಕ್ಕಾಗಿ ಎರಡು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆದರೆ, ಅಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಾಮಾನ್ಯವಾಗಿ, ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ.

ಸರ್ಕಾರದ ಅಧಿಕೃತ ಆದೇಶ
7 ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ಸ್ಥಾಪಿಸಲಾಯಿತು. ಅದರ ಶಿಫಾರಸುಗಳನ್ನು ಜನವರಿ 1, 2016 ರಿಂದ ಜಾರಿಗೆ ತರಲಾಯಿತು. ಕ್ರಮೇಣ 8ನೇ ವೇತನ ಆಯೋಗದತ್ತ ಗಮನ ಹರಿಸುತ್ತಿರುವಾಗ, 7ನೇ ವೇತನ ಆಯೋಗವು ಕೇಂದ್ರ ಸರಕಾರಿ ನೌಕರರ ವೇತನದ ಮೇಲೆ ಪ್ರಭಾವ ಬೀರುತ್ತಲೇ ಇದೆ. ಹಣದುಬ್ಬರದಿಂದಾಗಿ ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದ ನೈಜ ಮೌಲ್ಯದ ಸವೆತವನ್ನು ಸರಿದೂಗಿಸಲು, ಅವರಿಗೆ ತುಟ್ಟಿಭತ್ಯೆ (ಡಿಎ) ನೀಡಲಾಗುತ್ತದೆ ಮತ್ತು ಹಣದುಬ್ಬರದ ದರವನ್ನು ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ DA ದರವನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ. ಈ ಬಾರಿ 8 ನೇ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು 7 ನೇ ವೇತನ ಹೆಚ್ಚಳದ ಘೋಷಣೆಯನ್ನು ಮಾಡುವುದಾಗಿ ಸರ್ಕಾರ ತಿಳಿಸಿದೆ.

Image Credit: Banglahunt
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in