iPhone 14: ವರ್ಷದ ಕೊನೆಯಲ್ಲಿ ಐಫೋನ್ ಮೇಲೆ ಭರ್ಜರಿ ರಿಯಾಯಿತಿ, 34 ಸಾವಿರಕ್ಕೆ ಸಿಗಲಿದೆ ಐಫೋನ್ 14.
ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 14 ಮೇಲೆ ಆಕರ್ಷಕ ಆಫರ್ ಘೋಷಣೆ ಆಗಿದೆ
iPhone 14 Flipkart Offer Sale: ಸದ್ಯ ಹೊಸ ವರ್ಷದ ವಿಶೇಷಕ್ಕೆ ವಿವಿಧ ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡುತ್ತಿದೆ. ಇನ್ನು ಹೊಸ ವರ್ಷಕ್ಕೆ ವಿಶೇಷವಾಗಿ Flipkart iPhone ಖರೀದಿಗೆ ಧಮಾಕ ಆಫರ್ ಅನ್ನು ನೀಡುತ್ತಿದೆ. ಈ ಧಮಾಕ ಆಫರ್ ನಲ್ಲಿ ಕಡಿಮೆ ಬೆಲೆಗೆ ಸೇರಿದಂತೆ ಇನ್ನಿತರ ಕೆಲವು ವಸ್ತುಗಳನ್ನ ಖರೀದಿ ಮಾಡಬಹುದಾಗಿದೆ.
ಸಾಮಾನ್ಯವಾಗಿ iPhone ಮೇಲೆ ಎಲ್ಲರು ಆಸಕ್ತಿ ಇಟ್ಟುಕೊಂಡಿರುತ್ತಾರೆ. ಇನ್ನಿತರ ಸ್ಮಾರ್ಟ್ ಫೋನ್ ಗಳಿಗಿಂತ ಐಫೋನ್ ನಲ್ಲಿ ಹೆಚ್ಚಿನ ಫೀಚರ್ ಇರುವ ಕಾರಣ ಐಫೋನ್ ಖರೀದಿಸುವ ಆಸೆ ಎಲ್ಲರಲ್ಲೂ ಇರುವುದು ಸಹಜ. ಸದ್ಯ ಐಫೋನ್ ಖರೀದಿಯ ಆಸೆ ಇದ್ದವರಿಗೆ ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್ ಘೋಷಣೆ ಆಗಿದೆ ಎಂದು ಹೇಳಬಹುದು.
![iPhone 14 discount sale on flipkart](https://nadunudi.in/wp-content/uploads/2023/12/iPhone-14-discount-sale.png)
ವರ್ಷದ ಕೊನೆಯಲ್ಲಿ ಐಫೋನ್ ಮೇಲೆ ಭರ್ಜರಿ ರಿಯಾಯಿತಿ
ಇನ್ನು ದೇಶದ ದುಬಾರಿ ಬ್ರಾಂಡ್ ಆಗಿರುವ Apple iPhone ಖರೀದಿಗೆ ಹೆಚ್ಚಿನ ಬಜೆಟ್ ಬೇಕಾಗುತ್ತದೆ. ಆದರೆ ಕಳೆದ ವರ್ಷ 2022 ರಲ್ಲಿ ಬಿಡುಗಡೆಗೊಂಡಿರುವ iPhone 14 ರ ಮಾದರಿಯ ಖರೀದಿಗೆ ಇದೀಗ ದೇಶದ ಜನಪ್ರಿಯ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವಾ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.
ಸದ್ಯ ನೀವು iPhone 14 ಖರೀದಿಸಲು ಬಯಸಿದ್ದರೆ ಬರೋಬರಿ 34 ಸಾವಿರಕ್ಕೂ ಅಧಿಕ ಹಣವನ್ನು ಉಳಿಸಬಹುದು. ಫ್ಲಿಪ್ ಕಾರ್ಟ್ ನ ಇ ಆಫರ್ ನ ಮೂಲಕ ನೀವು ನಿಮ್ಮ ಐಫೋನ್ ಖರೀದಿಯ ಆಸೆಯನ್ನು ಈಡೇರಿಸಿಕೊಳ್ಳಬಹುದು. ನಿಮ್ಮ ಬಜೆಟ್ ನಲ್ಲಿ ಇದೀಗ ಫ್ಲಿಪ್ಕಾರ್ಟ್ ನಿಮಗೆ iPhone ನೀಡಲು ಮುಂದಾಗಿದೆ. ವರ್ಷದ ಕೊನೆಯಲ್ಲಿ ಐಫೋನ್ ಮೇಲೆ ಫ್ಲಿಪ್ ಕಾರ್ಟ್ ಯಾವ ರೀತಿ ಆಫರ್ ಘೋಷಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
![iPhone 14 sale cheape rate on flipkart](https://nadunudi.in/wp-content/uploads/2023/12/iPhone-14-sale-on-flipkart.png)
34 ಸಾವಿರಕ್ಕೆ ಸಿಗಲಿದೆ ಐಫೋನ್ 14
ಮಾರುಕಟ್ಟೆಯಲ್ಲಿ iPhone 14 ರ ಆರಂಭಿಕ ಬೆಲೆ 69,900 ರೂ. ಆಗಿದೆ. ಫ್ಲಿಪ್ ಕಾರ್ಟ್ನಿಂದ 15% ರಿಯಾಯಿತಿಯನ್ನು ಬಳಸಿಕೊಂಡು 58,999 ರೂ. ಗೆ ಖರೀದಿಸಬಹುದು. ಇದರ ಮೇಲೆ ನಿಮಗೆ 34,500 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ಹಾಗೆಯೆ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಿದೆ.
ಅನೇಕ ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಎಲ್ಲಾ ಆಫರ್ ಗಳ ಅಡಿಯಲ್ಲಿ ನೀವು ಐಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್ ಕಾರ್ಟ್ ನ ಶಾಪಿಂಗ್ ಸೈಟ್ ಗೆ ಭೇಟಿ ನೀಡಿ ಕೊಡುಗೆಗಳನ್ನು ಪರಿಶೀಲಿಸಿಕೊಳ್ಳಬಹುದು. ಈ ಇಯರ್ ಎಂಡ್ ಸೇಲ್ ನ ಆಫರ್ ಅನ್ನು ನೀವು ಸದುಪಯೋಗಪಡಿಸಿಕೊಳ್ಳಿ.