Saudi Arabia Ban Indian Visa temporary: ಇತ್ತೀಚಿನ ದಿನಗಳಲ್ಲಿ ಸುರಕ್ಷತೆಯ ಉದ್ದೇಶದಿಂದ ಪಾಸ್ಪೋರ್ಟ್ ಮತ್ತು ವೀಸಾ ನಿಯಮಗಳಲ್ಲಿ ಕೆಲವು ಬದಲಾವಣೆ ಜಾರಿಗೆ ತರಲಾಗಿದೆ. ಹೌದು, 2025 ರ ವರ್ಷದಲ್ಲಿ ವೀಸಾ ನಿಯಮದಲ್ಲಿ (Visa Rules) ಬಹುದೊಡ್ಡ ಬದಲಾವಣೆ ಜಾರಿಗೆ ತರಲಾಗಿದೆ ಮತ್ತು ಬದಲಾದ ನಿಯಮದ ಪ್ರಕಾರ ಇನ್ನುಮುಂದೆ ಭಾರತದ ಜನರು ಈ ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಹೌದು, ಭಾರತದ ವೀಸಾ ರದ್ದು ಮಾಡಲಾಗಿದ್ದು ಈ ಮಾಹಿತಿಯನ್ನು ಪಾಸ್ಪೋರ್ಟ್ ಬಳಸುವ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಹಾಗಾದರೆ ಯಾವ ದೇಶ ಭಾರತದ ವೀಸಾ ರದ್ದು (Visa Ban) ಮಾಡಿದೆ ಮತ್ತು ರದ್ದು ಮಾಡಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದ ವೀಸಾ ರದ್ದು ಮಾಡಿದ ಸೌದಿ ಅರೇಬಿಯಾ (Saudi Arabia Ban Indian Visa)
ಹೌದು, ಸೌದಿ ಅರೇಬಿಯಾ ದೇಶ ಈಗ ಭಾರತದ ವೀಸಾ (Indian Visa Ban) ರದ್ದು ಮಾಡುವುದರ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು. ಕೇವಲ ಭಾರತ ಮಾತ್ರವಲ್ಲದೆ ಪಾಕಿಸ್ತಾನ ಸೇರಿದಂತೆ ಸುಮಾರು 14 ದೇಶಗಳ ವೀಸಾ ತಾತ್ಕಾಲಿಕವಾಗಿ ರದ್ದು ಮಾಡುವುದರ ಮೂಲಕ ಸೌದಿ ಅರೇಬಿಯಾ ಪ್ರಯಾಣಿಕರಿಗೆ ಬೇಸರದ ಸುದ್ದಿ ನೀಡಿದೆ ಎಂದು ಹೇಳಬಹುದು. ಇನ್ನು ವೀಸಾ ರದ್ದತಿ ಜೂನ್ ತಿಂಗಳ ಅಂತ್ಯದ ವರೆಗೆ ಇರಲಿದೆ ಎಂದು ತಿಳಿದುಬಂದಿದೆ.
ಸೌದಿ ಅರೇಬಿಯಾ ವೀಸಾ ರದ್ದು ಮಾಡಲು ಕಾರಣ ಏನು…?
ಸರಿಯಾದ ನೋಂದಣಿ ಇಲ್ಲದ ಜನರು ಹಜ್ ಭಾಗವಹಿಸುತ್ತಿರುವುದು ಈಗ ಸೌದಿ ಅರೇಬಿಯಾ ಸರ್ಕಾರದ ಗಮನಕ್ಕೆ ಬಂದಿದೆ. ಇನ್ನು ಅನೇಕ ಜನರು ಉಮ್ರಾ ಅಥವಾ ಸಂದರ್ಶಕರ ವೀಸಾ ಮೂಲಕ ಹಜ್ ನಲ್ಲಿ ಭಾಗವಹಿಸುತ್ತಿದ್ದಾರೆ, ಈ ರೀತಿಯಲ್ಲಿ ಬೇರೆಯವರ ವೀಸಾ ಮೂಲಕ ಹಜ್ ನಲ್ಲಿ ಭಾಗವಹಿಸುವುದು ಕಾನೂನು ಬಾಹಿರ ಕೂಡ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಜ್ ಯಾತ್ರೆಯಲ್ಲಿ ಯಾವುದೇ ಅವಘಡ ಆಗಬಾರದು ಮತ್ತು ಜನರಿಗೆ ಸುರಕ್ಷತೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಸೌದಿ ಅರೇಬಿಯಾ ಪ್ರಿನ್ಸ್ ಆಗಿರುವ ಮೊಹಮ್ಮದ್ ಬಿನ್ ಸಲ್ಮಾನ್ (Mohammed Bin Salman) ಅವರು ಅವರು ಹೇಳಿದ್ದಾರೆ. ಜನರ ಸುರಕ್ಷತೆಯ ಉದ್ದೇಶದಿಂದ ನಿಯಮಗಳನ್ನು ಮತ್ತಷ್ಟು ಬಿಗಿ ಮಾಡಿದೆ ಸೌದಿ ಅರೇಬಿಯಾ ಸರ್ಕಾರ. ಇನ್ನು ಹಜ್ ಪ್ರಯಾಣ ಮಾಡುವವರು ಏಪ್ರಿಲ್ 13 ರ ತನಕ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು ಮತ್ತು ಅದರ ವೀಸಾ ಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಭಾರತ, ಪಾಕಿಸ್ತಾನ ಸರಿದಂತೆ ಸುಮಾರು 14 ದೇಶಗಳಿಗೆ ಈ ನಿಯಮ ಅನ್ವಯ ಆಗಲಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಸದ್ಯ ಹಜ್ (Hajj) ನಲ್ಲಿ ತೀವ್ರವಾದ ಶಾಖ ಇದೆ ಮತ್ತು ಅಲ್ಲಿ ಜನಸಂದಣಿ ಬಹಳ ಹೆಚ್ಚಿದೆ. ಈ ಸಮಯದಲ್ಲಿ ಮತ್ತು ಜನರು ಅಲ್ಲಿಗೆ ಬಂದರೆ ಪ್ರಾಣಹಾನಿ ಆಗಬಹುದು ಮತ್ತು ಇದು ಸೌದಿ ಅರೇಬಿಯಾ ಮೇಲೆ ಕೆಟ್ಟ ಪರಿಣಾಮ ಕೂಡ ಬೀರುವ ಸಾಧ್ಯತೆ ಇದೆ ಅನ್ನುವ ಕಾರಣಕ್ಕೆ ಜೂನ್ ತಿಂಗಳ ಅಂತ್ಯದ ತನಕ ವೀಸಾ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಸದ್ಯ ವೀಸಾ ಪಡೆದುಕೊಂಡಿರುವವರು ಸರ್ಕಾರ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇನ್ನು ಹಜ್ ಯಾತ್ರೆಗಾಗಿ ನಕಲಿ ವೀಸಾ ಪಡೆದು ಅಥವಾ ಬೇರೆಯವರ ವೀಸಾ ಪಡೆದು ಬಂದರೆ ಅವರಿಗೆ ಕಠಿಣ ಶಿಕ್ಷೆ ಮತ್ತು 5 ವರ್ಷಗಳ ಹಜ್ ಯಾತ್ರೆಯಿಂದ ಅವರನ್ನು ನಿಷೇಧ ಮಾಡಲಾಗುತ್ತದೆ ಎಂದು ಸೌದಿ ಅರೇಬಿಯಾ ಸರ್ಕಾರ (Saudi Arabia Government) ತಿಳಿಸಿದೆ.