New Passport Rules In india: ಭಾರತ ಸರ್ಕಾರ ಪಾಸ್ಪೋರ್ಟ್ (Passport) ನಿಯಮದಲ್ಲಿ ಈಗಾಗಲೇ ಹಲವು ಬದಲಾವಣೆ ಮಾಡಿದೆ ಎಂದು ಹೇಳಬಹುದು. ಹೌದು, ಸುರಕ್ಷತೆಯ ಉದ್ದೇಶದಿಂದ ಭಾರತ ಸರ್ಕಾರ ಈಗಾಗಲೇ ವೀಸಾ ಮತ್ತು ಪಾಸ್ಪೋರ್ಟ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡುವುದರ ಮೂಲಕ ಜನರಿಗೆ ಬೇಸರದ ಸುದ್ದಿಯನ್ನು ಕೂಡ ನೀಡಿತ್ತು. ಇನ್ನು ಈಗ ಹೊಸ ಪಾಸ್ಪೋರ್ಟ್ ಮಾಡಿಸುವವರಿಗೆ ಭಾರತ ಸರ್ಕಾರ ಬೇಸರದ ಸುದ್ದಿ ನೀಡಿದೆ. ಇನ್ನುಮುಂದೆ ಹೊಸ ಪಾಸ್ಪೋರ್ಟ್ ಮಾಡಿಸಲು ಈ ದಾಖಲೆ ಕಡ್ಡಾಯ ಮತ್ತು ಈ ದಾಖಲೆ ಇಲ್ಲದೆ ಇದ್ದರೆ ಇನ್ನುಮುಂದೆ ಹೊಸದಾಗಿ ಪಾಸ್ಪೋರ್ಟ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ ಎಂದು ಹೇಳಬಹುದು. ಹಾಗಾದರೆ ಹೊಸದಾಗಿ ಪಾಸ್ಪೋರ್ಟ್ ಮಾಡಿಸಿಕೊಳ್ಳಲು ಯಾವ ದಾಖಲೆ ಕಡ್ಡಾಯ ಮತ್ತು ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ರೂಲ್ಸ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇನ್ನುಮುಂದೆ ಪಾಸ್ಪೋರ್ಟ್ ಮಾಡಿಸಲು ಈ ದಾಖಲೆ ಕಡ್ಡಾಯ
ಹೌದು, ಭಾರತ ಸರ್ಕಾರ ಈಗ ಹೊಸ ಪಾಸ್ಪೋರ್ಟ್ ಮಾಡಿಸುವವರಿಗೆ ಗಮನಾರ್ಹ ಬದಲಾವಣೆ ಜಾರಿಗೆ ತಂದಿದೆ ಎಂದು ಹೇಳಬಹುದು. ಹೊಸದಾದ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ಅರ್ಜಿದಾರರು ಈ ದಾಖಲೆ ಕಡ್ಡಾಯವಾಗಿ ನೀಡಬೇಕು ಎಂದು ಸರ್ಕಾರ ತಿಳಿಸಿದೆ. ಹೌದು, ಇನ್ನುಮುಂದೆ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಜನನ ಪ್ರಮಾಣಪತ್ರ ನೀಡದೆ ಇದ್ದರೆ ಅವರ ಅರ್ಜಿ ತಿರಸ್ಕಾರ ಮಾಡಲು ಆದೇಶ ಹೊರಡಿಸಲಾಗಿದೆ. ಅದೇ ರೀತಿಯಲ್ಲಿ ವಿಳಾಸದ ಸ್ಪಷ್ಟ ಮತ್ತು ಪೋಷಕರ ಬಗ್ಗೆ ಕೂಡ ಮಾಹಿತಿ ನೀಡುವುದು ಅತೀ ಅಗತ್ಯವಾಗಿದೆ.
ಯಾರು ಯಾರಿಗೆ ಅನ್ವಯ ಆಗಲಿದೆ ಈ ನಿಯಮ
ಭಾರತ ಸರ್ಕಾರದ ಆದೇಶದ ಪ್ರಕಾರ ಅಕ್ಟೋಬರ್ 2023 ರ ನಂತರ ಜನಿಸಿದವರು ಪಾಸ್ಪೋರ್ಟ್ ಮಾಡಿಸಬೇಕು ಅಂದರೆ ಅವರು ಕಡ್ಡಾಯವಾಗಿ ಜನನ ಪ್ರಮಾಣಪತ್ರ ನೀಡಲೇಬೇಕು. 2023 ಅಕ್ಟೋಬರ್ ನಂತರ ಹುಟ್ಟಿದ ಯಾರಾದರೂ ಹೊಸ ಪಾಸ್ಪೋರ್ಟ್ ಮಾಡಿಸಬೇಕು ಅಂದರೆ ಅವರು ಕಡ್ಡಾಯವಾಗಿ ಜನನ ಪ್ರಮಾಣಪತ್ರ ನೀಡುವುದು ಕಡ್ಡಾಯ ಎಂದು ಭಾರತ ಸರ್ಕಾರ ತಿಳಿಸಿದೆ. ಈ ಹಿಂದೆ ಹೊಸ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಬೇರೆ ಯಾವುದಾದರು ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದಾಗಿತ್ತು, ಆದರೆ ಇನ್ನುಮುಂದೆ ಜನನ ಪ್ರಮಾಣಪತ್ರ ಇಲ್ಲದೆ ಯಾರೂ ಕೂಡ ಹೊಸ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಅಕ್ಟೋಬರ್ 2023 ಕ್ಕಿಂತ ಮೊದಲೇ ಹುಟ್ಟಿದವರಿಗೆ ನಿಯಮ ಅನ್ವಯ ಆಗಲ್ಲ
ಹೌದು, ಈ ಹೊಸ ನಿಯಮ ಅಕ್ಟೋಬರ್ 2023 ರ ನಂತರ ಹುಟ್ಟಿದವರಿಗೆ ಪಾತ್ರ ಅನ್ವಯ ಆಗಲಿದೆ, ಆದರೆ ನಿಯ್ ಅಕ್ಟೋಬರ್ 2023 ರ ಹಿಂದೆ ಹುಟ್ಟಿದವರಿಗೆ ಅನ್ವಯ ಆಗುವುದಿಲ್ಲ ಮತ್ತು ಅವರ ಹಳೆಯ ಮಾದರಿಯಲ್ಲಿಯೇ ಅರ್ಜಿ ಸಲ್ಲಿಸಬಹುದು. ದೇಶದಲ್ಲಿ ಪ್ರತಿನಿತ್ಯ ಪಾಸ್ಪೋರ್ಟ್ ಮಾಡಿಸುವವರ ಸಂಖ್ಯೆ ಬಹಳ ಹೆಚ್ಚಾಗಿದೆ, ಈ ಕಾರಣಗಳಿಂದ ಭಾರತ ಸರ್ಕಾರ ದೇಶದಲ್ಲಿ 442 ಇರುವ ಪಾಸ್ಪೋರ್ಟ್ ಕೇಂದ್ರವನ್ನು 600 ಕ್ಕೆ ಏರಿಕೆ ಮಾಡಲು ಮುಂದಾಗಿದೆ.
ಇನ್ನು ಹಳೆಯ ಪಾಸ್ಪೋರ್ಟ್ ಮತ್ತು ಹೊಸ ಪಾಸ್ಪೋರ್ಟ್ ನಲ್ಲಿ ನಾವು ಕೆಲವು ಬದಲಾವಣೆ ಕೂಡ ನೋಡಬಹುದು. ಹಳೆಯ ಪಾಸ್ಪೋರ್ಟ್ ನಲ್ಲಿ ಎಲ್ಲಾ ಮಾಹಿತಿಗಳು ನೋಡಬಹುದಾಗಿತ್ತು, ಆದರೆ ಈಗ ಸುರಕ್ಷತೆಯ ಉದ್ದೇಶದಿಂದ ಪಾಸ್ಪೋರ್ಟ್ ಮಾಹಿತಿಯನ್ನು ಗೌಪ್ಯವಾಗಿ ಇಡಲು ಕೇಂದ್ರ ಆದೇಶ ಹೊರಡಿಸಿದೆ ಮತ್ತು ಎಲ್ಲಾ ಪಾಸ್ಪೋರ್ಟ್ ನಲ್ಲಿ ನಾವು QR ಅನ್ನು ಕೂಡ ನೋಡಬಹುದು. QR ಕೋಡ್ ಮೂಲಕ ಪಾಸ್ಪೋರ್ಟ್ ಯಾರದ್ದು ಮತ್ತು ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ.