8th Pay Commission Salary And Pension Details: ಸದ್ಯ ಕೇಂದ್ರ ಸರ್ಕಾರೀ ನೌಕರರು 8ನೇ ವೇತನ ಆಯೋಗ (8th Pay Commission) ಯಾವಾಗ ಜಾರಿಗೆ ಬರುತ್ತದೆ ಎಂದು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಹೌದು, ಕೇಂದ್ರ ಸರ್ಕಾರ ಪ್ರಸ್ತುತ ವರ್ಷದಲ್ಲಿ 8ನೇ ವೇತನ ಆಯೋಗವನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಇನ್ನು ದೇಶದಲ್ಲಿ 8ನೇ ವೇತನ ಆಯೋಗ ಜಾರಿಗೆ ಬಂದರೆ ಸರ್ಕಾರೀ ನೌಕರರ ವೇತನ ಶ್ರೇಣಿಯನ್ನು ಬಾರಿ ಪ್ರಮಾಣದ ಏರಿಕೆಯನ್ನು ನಾವು ಕಾಣಬಹುದು. ಇನ್ನು ದೇಶದಲ್ಲಿ 8ನೇ ವೇತನ ಆಯೋಗ ಜಾರಿಗೆ ಬಂದರೆ ಬರಿ ಸರ್ಕಾರೀ ನೌಕರರ ವೇತನ ಮಾತ್ರವಲ್ಲದೆ ಪಿಂಚಣಿ ನಿಯಮದಲ್ಲಿ ಕೂಡ ಬಹುದೊಡ್ಡ ಬದಲಾವಣೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ದೇಶದಲ್ಲಿ 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ ಮತ್ತು 8ನೇ ವೇತನ ಆಯೋಗ ಜಾರಿಗೆ ಬಂದನಂತರ ಸರ್ಕಾರೀ ನೌಕರರ ವೇತನ ಮತ್ತು ಅವರ ಪಿಂಚಣಿಯಲ್ಲಿ ಎಷ್ಟು ಏರಿಕೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
2026 ರಲ್ಲಿ ಜಾರಿಗೆ ಬರಲಿದೆ 8ನೇ ವೇತನ ಆಯೋಗ
ಹೌದು, ಕೇಂದ್ರ ಸರ್ಕಾರ ಈಗ 8ನೇ ವೇತನ ಆಯೋಗ ಜಾರಿಗೆ ಅನುಮೋಧನೆಯನ್ನು ನೀಡಿದೆ ಮತ್ತು 2026 ರ ವರ್ಷದಲ್ಲಿ ದೇಶದಲ್ಲಿ 8ನೇ ವೇತನ ಆಯೋಗ ಜಾರಿಗೆ ಬರಲಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ 8ನೇ ವೇತನ ಆಯೋಗ ಜಾರಿಯಾದ ನಂತರ ಸರ್ಕಾರೀ ನೌಕರರ ವೇತನದಲ್ಲಿ ಬಾರಿ ಪ್ರಮಾಣದ ಏರಿಕೆ ಆಗಲಿದೆ ಮತ್ತು ಸರ್ಕಾರೀ ನೌಕಾರರ ಕನಿಷ್ಠ ವೇತನ 40 ಸಾವಿರಕ್ಕೆ ಏರಿಕೆ ಆಗಲಿದೆ. ಇನ್ನು 8ನೇ ವೇತನ ಆಯೋಗ ಜಾರಿಯಾದ ನಂತರ ಫಿಟ್ ಮೆಂಟ್ ಅಂಶ ಕೂಡ ಹೆಚ್ಚಾಗುವ ಕಾರಣ ಕೇಂದ್ರ ಸರ್ಕಾರೀ ನೌಕರಿಯಲ್ಲಿ ಇರುವವರಿಗೆ ದೊಡ್ಡ ಮೊತ್ತದ ಪಿಂಚಣಿ ಲಾಭ ಪಡೆದುಕೊಳ್ಳಲಿದ್ದಾರೆ.
8ನೇ ವೇತನ ಆಯೋಗ ಜಾರಿಯಾದರೆ ವೇತನ ಎಷ್ಟಾಗಲಿದೆ
ಫಿಟ್ ಮೆಂಟ್ 1.98 ಕ್ಕೆ ಏರಿಕೆಯಾದರೆ ಈಗ 40 ಸಾವಿರ ಸಂಬಳವನ್ನು ಪಡೆಯುತ್ತಿರುವವರು 72 ಸಾವಿರ ರೂಪಾಯಿ ಸಂಬಳ ಪಡೆದುಕೊಳ್ಳಲಿದ್ದಾರೆ. ಅದೇ ರೀತಿಯಲ್ಲಿ ಫಿಟ್ ಮೆಂಟ್ ಅಂಶ 2.28 ಕ್ಕೆ ಏರಿಕೆಯಾದರೆ 92 ಸಾವಿರ ರೂಪಾಯಿ ಸಂಬಳ ಪಡೆದುಕೊಳ್ಳಲಿದ್ದಾರೆ. ಇನ್ನು ಉದ್ಯೋಗಿಗಳ ವೇತನ ಫಿಟ್ ಮೆಂಟ್ ಅಂಶದ ಮೇಲೆ ನಿರ್ಧಾರ ಆಗುತ್ತದೆ.
8ನೇ ವೇತನ ಆಯೋಗ ಜಾರಿಯಾದರೆ ಪಿಂಚಣಿಯಲ್ಲಿ ಹೆಚ್ಚಳ
ಹೌದು, ದೇಶದಲ್ಲಿ 8ನೇ ವೇತನ ಆಯೋಗ ಜಾರಿಯಾದ ನಂತರ ಸರ್ಕಾರೀ ನೌಕರರ ಪಿಂಚಣಿಯಲ್ಲಿ ಕೂಡ ದೊಡ್ಡ ಮೊತ್ತದ ಬದಲಾವಣೆ ಆಗಲಿದೆ ಎಂದು ಹೇಳಬಹುದು. ಸರ್ಕಾರೀ ನೌಕರರ ವಾರ್ಷಿಕ ವೇತನದ ಮೇಲೆ ಅವರ ಪಿಂಚಣಿ ನಿರ್ಧಾರ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರೀ ನೌಕರ ಕನಿಷ್ಠವಾಗಿ 23 ಸಾವಿರ ರೂಪಾಯಿಯ ತನಕ ಪಿಂಚಣಿ ಲಾಭ ಪಡೆದುಕೊಳ್ಳಲಿದ್ದಾನೆ ಎಂದು ಹೇಳಬಹುದು. ಸದ್ಯ 2026 ರಲ್ಲಿ 8ನೇ ವೇತನ ಆಯೋಗ ಜಾರಿಗೆ ಬರಲಿದೆ ಮತ್ತು ಸುಮಾರು 43 ಲಕ್ಷ ಕೇಂದ್ರ ಸರ್ಕಾರೀ ನೌಕರರು ಈ 8ನೇ ವೇತನ ಆಯೋಗದ ಸಂಬಳ ಪಡೆದುಕೊಳ್ಳಲಿದ್ದಾರೆ.