Ashitha Maria: ತನಗಾದ ಗಂಭೀರ ಆರೋಗ್ಯ ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ನಟಿ ಆಶಿತಾ

Kannada Film Actress Ashitha Maria Youtube Channel Latest Video: ನಟಿ ಆಶಿತಾ ಕನ್ನಡ ಚಿತ್ರರಂಗದ ಖ್ಯಾತ ನಟಿ ಎಂದು ಹೇಳಬಹುದು. ಕನ್ನಡದ ಹಲವು ಚಿತ್ರಗಳಲ್ಲಿ ನಟನೆಯನ್ನು ಮಾಡಿರುವ ನಟಿ ಆಶಿತಾ ಮಾರಿಯಾ  (Ashitha Maria) ಅವರು ಒಂದು ಕಾಲದಲ್ಲಿ ಪಡ್ಡೆ ಹುಡುಗರ ನೆಚ್ಚಿನ ನಟಿಯಾಗಿದ್ದರು. ಇನ್ನು ನಟಿ ಆಶಿತಾ ಅವರು ನಟ ಪುನೀತ್ ರಾಜಕುಮಾರ್ ಅವರ ಆಕಾಶ್ ಚಿತ್ರದಲ್ಲಿ ನಟನೆಯನ್ನು ಮಾಡಿದ ನಂತರ ಚಿತ್ರರಂಗದಿಂದ ಸ್ವಲ್ಪ ದೂರವಾದರು ಎಂದು ಹೇಳಬಹುದು. ಚಿತ್ರರಂಗದಿಂದ ದೂರವಾಗಿದ್ದ ನಟಿ ಆಶಿತಾ ಅವರು ನಂತರ ಸಾಮಾಜಿಕ ಜಾಲತಾಣದಲ್ಲಿ ಬಹಳ ಬ್ಯುಸಿ ಆದರೂ ಎಂದು ಹೇಳಬಹುದು.

WhatsApp Group Join Now
Telegram Group Join Now

ಇನ್ನು ನಟಿ ಆಶಿತಾ ಅವರು ತಮ್ಮದೇ ಆದ Youtube ಚಾನೆಲ್ ಕೂಡ ಹೊಂದಿದ್ದಾರೆ ಮತ್ತು ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ವಿಡಿಯೋ ಮಾಡಿ ಅದನ್ನು ತಮ್ಮ Youtube ಚಾನೆಲ್ ನಲ್ಲಿ ಶೇರ್ ಮಾಡುತ್ತಾರೆ,. ಇತ್ತೀಚಿಗೆ ನಟಿ ಆಶಿತಾ ಅವರು ಒಂದು ವಿಡಿಯೋ ಶೇರ್ ಮಾಡಿ ತನ್ನ ಆರೋಗ್ಯದ ಸಮಸ್ಯೆ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇನ್ನು ನಟಿ ಆಶಿತಾ ಅವರ ವಿಡಿಯೋ ನೋಡಿದ ಅವರ ಅಭಿಮಾನಿಗಳು ಬೇಸರವನ್ನು ಹೊರಹಾಕಿದ್ದು ಮಾತ್ರವಲ್ಲದೆ ನಾಟಿಗೆ ಧೈರ್ಯ ಕೂಡ ಹೇಳಿದ್ದಾರೆ. ಹಾಗಾದರೆ ಆಕಾಶ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸಿದ್ದ ನಟಿ ಆಶಿತಾ ಅವರ ಆರೋಗ್ಯದಲ್ಲಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ನಟಿ ಆಶಿತಾ
ಪುನೀತ್ ರಾಜಕುಮಾರ್, ಶಿವ ರಾಜಕುಮಾರ್ ಸೇರಿದಂತೆ ಹಲವು ಕನ್ನಡದ ನಾಯಕ ನಟರ ಜೊತೆ ನಟನೆ ಮಾಡಿ ಈಗ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಆಶಿತಾ ಅವರು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ವಿಡಿಯೋ ಮಾಡಿ ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ನಟಿ ಆಶಿತಾ ಅವರು, ಇತ್ತೀಚಿಗೆ ತನಗೆ ಫುಡ್ ಪಾಯ್ಸನ್ ಆಗಿದ್ದು ಅದೇ ಸಮಯದಲ್ಲಿ ಪಿರಿಯೆಡ್ಸ್ ಆದಾಗ ತನಗಾದ ನೋವಿಗೆ ಬಗ್ಗೆ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ವಿಪರೀತವಾದ ನೋವು ಅನುಭವಿಸಿದ ನಟಿ ಆಶಿತಾ ಅವರು ಆ ಸಮಯದಲ್ಲಿ ನನ್ನನ್ನು ಆ ದೇವರೇ ಕಾಪಾಡಿದ ಎಂದು ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ಆ ದೇವರು ನಮ್ಮ ಕೈ ಹಿಡಿಯುತ್ತಾನೆ ಮತ್ತು ಆತನನ್ನು ಯಾವತ್ತೂ ಕೂಡ ದ್ವೇಷ ಮಾಡಬೇಕು ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ ನಟಿ ಆಶಿತಾ ಅವರು.

“ಫುಡ್ ಪಾಯ್ಸನ್ ಆದಾಗ ಆಸ್ಪತ್ರೆಗೆ ಹೋಗಿದ್ದ ನಟಿ ಆಶಿತಾ ಅವರು ಅಲ್ಲೇ ಇರಬೇಕಾಗಿತ್ತು. ಡಾಕ್ಟರ್ ಭೇಟಿಯಾಗಿ ಮನೆಗೆ ಬಂದನಂತರ ನಟಿ ಅಶಿತಾವರಿಗೆ ತಿಂಗಳ ಪಿರಿಯೆಡ್ಸ್ ಆಗಿದ್ದು ಆ ಸಮಯದಲ್ಲಿ ನಟಿ ಆಶಿತಾ ಅವರು ವಿಪರೀತವಾದ ನೋವಿನಿಂದ ಒದ್ದಾಡಿದ್ದರಂತೆ. ಮನೆಯಲ್ಲಿ ಒಬ್ಬರೇ ಇದ್ದ ಕಾರಣ ನೋವು ತಾಳಲಾರದೆ ನಟಿ ಆಶಿತಾ ಅವರು ತನ್ನ ಸ್ನೇಹಿತರೊಬ್ಬರಿಗೆ ವಿಷಯ ತಿಳಿಸಿದ್ದಾರೆ. ಆಶಿತಾ ಅವರ ಮಾತು ಕೇಳಿ ತಕ್ಷಣ ಮನೆಗೆ ಬಂದ ಆಶಿತಾ ಅವರ ಸ್ನೇಹಿತರೊಬ್ಬರು ನಟಿ ಆಶಿತಾ ಅವರಿಗೆ ಬಹಳ ಸಹಾಯ ಮಾಡಿದ್ದಾರಂತೆ. ಅವರು ತಮ್ಮ ಕೆಲಸ ಬಿಟ್ಟು ನಾನು ಕರೆಮಾಡಿದ ತಕ್ಷಣ ನನ್ನ ಮನೆಗೆ ಬಂದು ನನಗೆ ಸಹಾಯ ಮಾಡಿದ್ದಾರೆ” ಎಂದು ಹೇಳಿದ ನಟಿ ಆಶಿತಾ ಅವರು ದೇವರು ನಮಗೆ ಕಷ್ಟದ ಸಮಯದಲ್ಲಿ ಕೈ ಹಿಡಿಯುತ್ತಾನೆ ಮತ್ತು ಯಾವತ್ತೂ ದೇವರನ್ನು ದ್ವೇಷಿಸಬೇಡಿ ಎಂದು ಹೇಳಿದ್ದಾರೆ.

ಆಶಿತಾ ಅವರ ಮನೆಗೆ ಬಂದ ಆಶಿತಾ ಅವರ ಸ್ನೇಹಿತರೊಬ್ಬರು ವೈದ್ಯರ ಸಲಹೆಯ ಮೇರೆಗೆ ಒಂದು ಮಾತ್ರೆ ಕೊಟ್ಟಿದ್ದಾರೆ ಮತ್ತು ಆ ಮಾತ್ರೆ ತಿಂದನಂತರ ಆಶಿತಾ ಅವರ ನೋವು ಕಡಿಮೆ ಆಗಿದೆ ಮತ್ತು ನೋವು ಕಡಿಮೆಯಾದ ನಂತರ ಇನ್ನೊಂದು ಮಾತ್ರೆ ತಿಂದು ಆಶಿತಾ ಅವರು ಮಲಗಿದ್ದಾರೆ. ನನ್ನ ಮಲಗಿ ಬೆಳಿಗ್ಗೆ ಏಳುವ ತನಕ ಅವರು ನನ್ನಜೊತೆ ಇದ್ದಿದ್ದರು, ಆ ಸಮಯದಲ್ಲಿ ಅವರನ್ನು ನನ್ನಬಳಿ ಕಳುಹಿಸಿದ್ದು ಆ ದೇವರೇ ಎಂದು ಹೇಳಿದ್ದಾರೆ ನಟಿ ಆಶಿತಾ ಅವರು. ನಾನು ಈಗ ಹುಷಾರಾಗಿ ಇದ್ದೀನಿ, ನನಗೆ ಈಗ 40 ವರ್ಷ ವಯಸ್ಸು ಮತ್ತು ವಯಸ್ಸಾದ ಕಾರಣ ಕೆಲವು ಸಮಸ್ಯೆ ಬರುವುದು ಸಹಜ ಎಂದು ತಮ್ಮ Youtube ಚಾನೆಲ್ ನಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ ನಟಿ ಆಶಿತಾ ಅವರು.

Leave a Comment