Maruti Suzuki: ಮಾರುತಿ ಸುಝುಕಿಯ ಈ ಜನಪ್ರಿಯ ಕಾರಿನ ಮೇಲೆ 2 ಲಕ್ಷದವರೆಗೆ ಬೆಲೆ ಧಿಡೀರ್ ಇಳಿಕೆ

​The Maruti Suzuki Grand Vitara: ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಕಾರು ಮಾರುಕಟ್ಟೆ ಅತ್ಯಂತ ದೊಡ್ಡದು ಹಾಗು ಮಾಧ್ಯಮವರ್ಗದ ಜನಗಳಿಗೆ ಅತ್ಯಂತ ಹೆಚ್ಚು ಕಾರುಗಳು ಭಾರತದಲ್ಲೇ ಸೇಲ್ ಆಗುತ್ತವೆ. ಇನ್ನೂ ಭಾರತದ ವಿಚಾರಕ್ಕೆ ಬಂದರೆ ಇಲ್ಲಿ ಮಿಡಲ್ ಕ್ಲಾಸ್ ಕುಟುಂಬಗಳು ಹೆಚ್ಚು ಹೀಗಾಗಿ ಮಾರುತಿ ಸುಜುಕಿಯಂತಹ ಕಂಪನಿಗಳು ಈ ವರ್ಗದ ಜನರಿಗೆ ಅನುಕೂಲವಾಗಲು ಈಗಾಗಲೇ ಅನೇಕ ಕಾರುಗಳನ್ನು ರಸ್ತೆಗಿಳಿಸಿವೆ. ಮಾರುತಿಯ ಸ್ವಿಫ್ಟ್, ವ್ಯಾಗನ್ ರ್ , ಸೇರಿದಂತೆ ಅನೇಕ ಜನಪ್ರಿಯ ಕಾರುಗಳು ಬಡವರ ಕೈಗೆಟುಕುವ ಬೆಲೆಗೆ ಸಿಗುತ್ತಿವೆ.

WhatsApp Group Join Now
Telegram Group Join Now

ಸದ್ಯ ಮಾರುತಿ ಸುಜುಕಿ ಹೆಚ್ಚು ಭದ್ರ ಮತ್ತು ಬಲಿಷ್ಠವಾದ ವಾಹನಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಬ್ರೆಝ್ಜಾ ಮತ್ತು ಸೆಲೆರಿಯೋ ಕಾರುಗಳಲ್ಲಿ 6 ಎರ್‌ಬ್ಯಾಗ್‌ಗಳನ್ನು ಪರಿಚಯಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೊಸ ಡಿಝೈರ್ ಹಿಂದಿನ ತಲೆಮಾರಿಗಿಂತ ಹೆಚ್ಚು ಸುರಕ್ಷಿತವಾಗಿದ್ದು, Global NCAPನಲ್ಲಿ 5 ಸ್ಟಾರ್ ಗಳಿಸಿದೆ.

ಇದೀಗ ಬಡವರ SUV ಎಂದೇ ಕರೆಯಲಾಗುವ ಗ್ರ್ಯಾಂಡ್ ವಿಟಾರ ಕಾರಿನ ಮೇಲೆ ಸುಜುಕಿ ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ. ಹೌದು ಸದ್ಯ ಹೊಸ ಗ್ರ್ಯಾಂಡ್ ವಿಟಾರಾ ಎರಡು ರೀತಿಯ ಡ್ರೈವ್‌ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿದೆ ಮೊದಲನೆಯದು ಪೆಟ್ರೋಲ್ ಮತ್ತು ಹೈಬ್ರಿಡ್.

• ಇದರ ಪೆಟ್ರೋಲ್ ವೆರಿಯಂಟ್‌ಲ್ಲಿ 1.5 ಲೀಟರ್ 4 ಸಿಲಿಂಡರ್ ಎಂಜಿನ್ ಇದೆ, ಇದು 102 bhp ಶಕ್ತಿ ಮತ್ತು 137 Nm ಟಾರ್ಕ್ ಉತ್ಪಾದಿಸುತ್ತದೆ.

• ಎರಡನೇ ಎಂಜಿನ್ 2WD ಆಯ್ಕೆಗಳಲ್ಲಿ ಲಭ್ಯವಿದ್ದು, 5-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಹೊಂದಿದೆ.

• ಇತ್ತೀಚಿನ ಅಪ್ಡೇಟ್ ನಂತರ, 6-ಸ್ಪೀಡ್ ಟಾರ್ಕ್ ಕನ್ವರ್ಟರ್ (TC) ಗಿಯರ್ ಬಾಕ್ಸ್ ಅನ್ನು ಕೇವಲ AWD ಮಾದರಿಗಾಗಿ ನೀಡಲಾಗುತ್ತಿದೆ.

• ಹೈಬ್ರಿಡ್ ವೆರಿಯಂಟ್‌ ಕೂಡ 1.5 ಲೀಟರ್ ಪೆಟ್ರೋಲ್ ಎಂಜಿನ್‌ಅನ್ನು ಹೊಂದಿದ್ದು, ಇದು 116 bhp ಶಕ್ತಿ ಮತ್ತು 122 Nm ಟಾರ್ಕ್ ನೀಡುತ್ತದೆ.

• ಇದು ಇ-ಸಿವಿಟಿ (e-CVT) ಟ್ರಾನ್ಸ್ಮಿಷನ್ ಹೊಂದಿದ್ದು, ಫ್ರಂಟ್-ವೀಲ್ ಡ್ರೈವ್ (FWD) ಹೊಂದಿದೆ

• ಇದಲ್ಲದೆ, ಗ್ರ್ಯಾಂಡ್ ವಿಟಾರಾದಲ್ಲಿ CNG ಮಾದರಿಯೂ ಇದೆ, ಅದರಲ್ಲಿ ಕೂಡ ಇದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆಯಾಗಿದೆ.

• ಇದು 87 bhp ಶಕ್ತಿ ಮತ್ತು 121.5 Nm ಟಾರ್ಕ್ ಉತ್ಪತ್ತಿ ಮಾಡುತ್ತದೆ ಹಾಗೂ ಕೇವಲ 5-ಸ್ಪೀಡ್ ಮ್ಯಾನುಯಲ್ ಗಿಯರ್ ಬಾಕ್ಸ್‌ಗೂ ಮಾತ್ರ ಲಭ್ಯವಿದೆ.

ಒಟ್ಟಿನಲ್ಲಿ, ಗ್ರ್ಯಾಂಡ್ ವಿಟಾರಾ ಎಲ್ಲ ರೀತಿಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹಲವು ಡ್ರೈವ್‌ಟ್ರೈನ್ ಆಯ್ಕೆಗಳನ್ನು ಒದಗಿಸುತ್ತದೆ.

ಹೊಸ ಬೆಲೆ ಏನು? 1.81 ಲಕ್ಷ ಕಡಿಮೆ ಹೇಗೆ ?

ಹೊಸ ಅಪ್ಡೇಟ್ ಬಳಿಕ ಮಾರುತಿ ಗ್ರ್ಯಾಂಡ್ ವಿಟಾರಾದ ಬೆಲೆ (ಮುಂಬೈನಲ್ಲಿ ಆನ್-ರೋಡ್) ರೂ. 13.42 ಲಕ್ಷದಿಂದ ಆರಂಭವಾಗಿ ರೂ. 23.80 ಲಕ್ಷವರೆಗೆ ಇದೆ. ಇದರ ಹೊಸ ಡೆಲ್ಟಾ+ ವೇರಿಯಂಟ್, ಇದು ಅತ್ಯಂತ ಕಡಿಮೆ ಬೆಲೆಯ ಸ್ಟ್ರಾಂಗ್-ಹೈಬ್ರಿಡ್ ಮಾದರಿಯಾಗಿದ್ದು, ಇದರ ಬೆಲೆ ರೂ. 19.97 ಲಕ್ಷ (ಆನ್-ರೋಡ್, ಮುಂಬೈ). ಇದರ ಅರ್ಥ, ಹೈಬ್ರಿಡ್ ವೇರಿಯಂಟ್ ಈಗ ರೂ. 1.81 ಲಕ್ಷ ಕಡಿಮೆ ದರದಲ್ಲಿ ಲಭ್ಯವಾಗಿದೆ.

Leave a Comment