Gold Rate Today In India: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯತ್ತ ಮುಖಮಾಡಿದ್ದು ಚಿನ್ನ ಖರೀದಿ ಮಾಡುವವರ ಸಂತಸಕ್ಕೆ ಕಾರಣವಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 80% ಏರಿಕೆಯಾಗಿದ್ದ ಬಂಗಾರದ ಬೆಲೆ ಈಗ ಇಳಿಕೆಯತ್ತ ಸಾಗುತ್ತಿದ್ದು ಚಿನ್ನ ಖರೀದಿ ಮಾಡಲು ಗ್ರಾಹಕರು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಹಾಗಾದರೆ ಭಾರತದಲ್ಲಿ ಇಂದು (04-11-2025) ಚಿನ್ನದ ಬೆಲೆ ಎಷ್ಟಿದೆ ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ದೇಶದಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ
ಭಾರತದಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಇಳಿಕೆ ಆಗಿರುವುದನ್ನು ನಾವು ಗಮನಿಸಬಹುದು. ಇಂದು 22 ಕ್ಯಾರಟ್ ನ ಒಂದು ಬಂಗಾರದ ಬೆಲೆಯಲ್ಲಿ ಸುಮಾರು 65 ರೂಪಾಯಿ ಇಳಿಕೆ ಕಂಡಿದ್ದು ಇಂದು ಭಾರತದಲ್ಲಿ 22 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆ 11225 ರೂಪಾಯಿ ಆಗಿದೆ. ಭಾರತದಲ್ಲಿ ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆಯಲ್ಲಿ ಸುಮಾರು 650 ರೂಪಾಯಿ ಇಳಿಕೆಯಾಗಿದ್ದು ಹತ್ತು ಗ್ರಾಂ ಬಂಗಾರದ ಬೆಲೆ 112250 ರೂಪಾಯಿ ಆಗಿದೆ. ಹಾಗೆ ನೂರು ಗ್ರಾಂ ಬಂಗಾರದ ಬೆಲೆ 1122500 ರೂಪಾಯಿ ಆಗಿದೆ.
ಭಾರತಲ್ಲಿ ಇಂದು 24 ಕ್ಯಾರಟ್ ಬಂಗಾರದ ಬೆಲೆ
ಭಾರತದಲ್ಲಿ ಇಂದು 24 ಕ್ಯಾರಟ್ ಬಂಗಾರದ ಬೆಲೆಯಲ್ಲಿ ಕೂಡ ಇಳಿಕೆ ಆಗಿರುವುದನ್ನು ನಾವು ಗಮನಿಸಬಹುದು. ಭಾರತದಲ್ಲಿ ಇಂದು 24 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆಯಲ್ಲಿ 71 ರೂಪಾಯಿ ಇಳಿಕೆ ಕಂಡುಬಂದಿದ್ದು ಇಂದು 24 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆ 12246 ರೂಪಾಯಿ ಆಗಿದೆ. ಹಾಗೆ ಇಂದು 24 ಕ್ಯಾರಟ್ ನ 10 ಗ್ರಾಂ ಬಂಗಾರದ ಬೆಲೆಯಲ್ಲಿ ಸುಮಾರು 710 ರೂಪಾಯಿ ಇಳಿಕೆ ಆಗಿದ್ದು ಇಂದು 24 ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆ 122460 ರೂಪಾಯಿ ಆಗಿರುತ್ತದೆ. ಹಾಗೆ 24 ಕ್ಯಾರಟ್ ನ ನೂರು ಗ್ರಾಂ ಬಂಗಾರದ ಬೆಲೆ 1224600 ರೂ ಆಗಿದೆ.
ಭಾರತದಲ್ಲಿ 18 ಕ್ಯಾರಟ್ ಬಂಗಾರದ ಬೆಲೆ
ಭಾರತದಲ್ಲಿ ಇಂದು 18 ಬಂಗಾರದ ಬೆಲೆಯಲ್ಲಿ ಕೂಡ ಇಳಿಕೆ ಆಗಿರುವುದನ್ನು ನಾವು ಗಮನಿಸಬಹುದು. ಭಾರತದಲ್ಲಿ ಇಂದು 18 ಕ್ಯಾರಟ್ ಬಂಗಾರದ ಬೆಲೆಯಲ್ಲಿ 54 ರೂಪಾಯಿ ಇಳಿಕೆ ಕಂಡುಬಂದಿದೆ ಮತ್ತು ಇಂದು 18 ಕ್ಯಾರಟ್ ನ ಒಂದು ಗ್ರಾಂ ಬಂಗಾರದ ಬೆಲೆ 9184 ರೂಪಾಯಿ ಆಗಿದೆ. ಭಾರತದಲ್ಲಿ ಇಂದು 18 ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆಯಲ್ಲಿ 540 ರೂಪಾಯಿ ಇಳಿಕೆ ಆಗಿದೆ ಮತ್ತು ಇಂದು ಗ್ರಾಂ ಬಂಗರದ ಬೆಲೆ 91840 ರೂಪಾಯಿ ಆಗಿರುತ್ತದೆ. ಇಂದು 18 ಕ್ಯಾರಟ್ ನ ನೂರು ಗ್ರಾಂ ಬಂಗಾರದ ಬೆಲೆ 918400 ರೂಪಾಯಿ ಆಗಿದೆ.
ಚಿನ್ನ ಬೆಲೆ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುದು?
ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆಗೆ ಅಮೆರಿಕಾದ ಬೆಲೆ ಸೂಚ್ಯಂಕಗಳು, ಭಾರತದ ರೂಪಾಯಿ ಮೌಲ್ಯ ಮತ್ತು ಹಬ್ಬದ ಒತ್ತಡಗಳು ಪ್ರಮುಖವಾದ ಪಾತ್ರ ವಹಿಸುತ್ತದೆ. ಉದಾಹರಣೆಗೆ ದೀಪಾವಳಿ ಮತ್ತು ಇನ್ನಿತರ ರಾಷ್ಟ್ರೀಯ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗುವುದನ್ನು ನಾವು ಗಮನಿಸಬಹುದು. ಇನ್ನು ಭಾರತದಲ್ಲಿ ಚಿನ್ನದ ಆಮದಿನ ಮೇಲೆ ಶೇಕಡಾ 10 ರಷ್ಟು ತೆರಿಗೆ ಹಾಕುವುದು ಕೂಡ ಚಿನ್ನದ ಬೆಲೆ ಏರಿಕೆಗೆ ಪ್ರಮುಖವಾದ ಕಾರಣ ಆಗಿರುತ್ತದೆ.
ಚಿನ್ನದ ಬೆಲೆ ಹೂಡಿಕೆ ಮಾಡುವವರಿಗೆ ಕೆಲವು ಸಲಹೆಗಳು
ಚಿನ್ನದ ಬೆಲೆ ಹೂಡಿಕೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾದ ಕಾರಣ ಚಿನ್ನದ ಮೇಲೆ ಹೂಡಿಕೆ ಮಾಡುವವರು BIS ಹಾಲ್‌ಮಾರ್ಕ್ ಚಿನ್ನವನ್ನು ಆಯ್ಕೆ ಮಾಡುವುದು ಬಹಳ ಉತ್ತಮ ಆಗಿರುತ್ತದೆ. ಇಂದು ಚಿನ್ನದ ಬೆಲೆ ಇಳಿಕೆಯಾದ ಕಾರಣ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಿಕೊಳ್ಳಬಹುದು. ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಏರಿಳಿತ ಗಮನಿಸುವುದು ಬಹಳ ಉತ್ತಮ ಆಗಿರುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರು ETF ಅಥವಾ ಸುವರ್ಣ ನೇರ ಹೂಡಿಕೆಯ ಮೂಲಕ ಸುಲಭವಾಗಿ ಹೂಡಿಕೆ ಆರಂಭಿಸಬಹುದು.
ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುತ್ತ ಬಂಗಾರದ ಬೆಲೆ?
ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಚಿನ್ನದ ಬೆಲೆ ಇಳಿಕೆ ನೇರವಾಗಿ ಅಮೆರಿಕಾದ ಬೆಲೆ ಸೂಚ್ಯಂಕಗಳು ಮತ್ತು ಭಾರತದ ರೂಪಾಯಿ ಮೌಲ್ಯದ ಮೇಲೆ ನೇರವಾಗಿ ನಿರ್ಧಾರ ಆಗುತ್ತೆ. ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

