Akka Pade Scheme In Karnataka: ಕರ್ನಾಟಕ ರಾಜ್ಯ ಸರ್ಕಾರ ಈಗ ರಾಜ್ಯದ ಮಹಿಳೆಯರಿಗಾಗಿ ಇನ್ನೊಂದು ಹೊಸ ಸೇವೆ ಆರಂಭಿಸಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಮತ್ತು ಅವರ ಸಮಸ್ಯೆ ನಿವಾರಣೆ ಮಾಡುಸಿವ ಉದ್ದೇಶದಿಂದ ಈಗ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಅಕ್ಕಪಡೆ ಅನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಏನಿದು ಅಕ್ಕಪಡೆ ಯೋಜನೆ ಮತ್ತು ಈ ಯೋಜನೆಯ ಪ್ರಮುಖ ಉದ್ದೇಶಗಳು ಯಾವುದು ಅನ್ನುವುದರ ಸಂಪೂರ್ಣ ಮಾಹಿತಿ ನವೀನ ತಿಳಿಯೋಣ.
ರಾಜ್ಯದಲ್ಲಿ ಜಾರಿಗೆ ಬಂತು ಅಕ್ಕಪಡೆ ಯೋಜನೆ
ಕರ್ನಾಟಕ ರಾಜ್ಯದ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಉದ್ದೇಶದಿಂದ ರಾಜ್ಯದಲ್ಲಿ ಅಕ್ಕಪಡೆ ಯೋಜನೆ ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದಲ್ಲಿ ಅಕ್ಕಪಡೆ ಯೋಜನೆ ಜಾರಿಗೆ ತರುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಅಕ್ಕಪಡೆ ಯೋಜನೆಯ ಮೂಲಕ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಣೆ ಮಾಡಲು ಒಂದು ವಿಶೇಷ ದಳ ರೂಪಿಸಲು ಕರ್ನಾಟಜಕ ರಾಜ್ಯ ಸರ್ಕಾರ ಮುಂದಾಗಿದೆ.
ಕರ್ನಾಟಕದಲ್ಲಿ ಯಾವ ಜಾರಿಗೆ ಬರಲಿದೆ ಅಕ್ಕಪಡೆ ಯೋಜನೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾತಿನ ಪ್ರಕಾರ ಇದೆ ನವೆಂಬರ್ 19 ರಂದು ರಾಜ್ಯಾದ್ಯಂತ ಅಕ್ಕಪಡೆ ಯೋಜನೆ ಜಾರಿಗೆ ಬರಲಿದೆ. ನವೆಂಬರ್ 19 2025 ಇಂದಿರಾಗಾಂಧಿ ಅವರ ಪುಣ್ಯತಿಥಿಯಂದು ಈ ಅಪ್ಪಕಡೆ ಯೋಜನೆಗೆ ಚಾಲನೆ ಕೊಡಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನವನ್ನು ಮಾಡಿದೆ. ಮೊದಲ ಹಂತದಲ್ಲಿ ಉಡುಪಿ, ಮೈಸೂರು, ಮಂಗಳೂರು, ಬೆಳಗಾವಿ, ಬೆಂಗಳೂರು ಸೇರಿದಂತೆ 7 ಜಿಲ್ಲೆಗಳು ಮತ್ತು 31 ಜಿಲ್ಲೆಗಳಲ್ಲಿ ಆರಂಭ ಆಗಲಿದೆ.
ಅಕ್ಕಪಡೆ ಯೋಜನೆಯ ಪ್ರಮುಖವಾದ ಉದ್ದೇಶ
ಸರ್ಕಾರದ ಮಾಹಿತಿಯ ಪ್ರಕಾರ, ಕಳೆದ ಮೂರೂ ವರ್ಷಗಳ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಸುಮಾರು 54 % ಏರಿಕೆಯಾಗಿದೆ. ಕಳೆದ 4 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 1800 ಕ್ಕೂ 18 ಕ್ಕೂ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಗರ್ಭ ಧರಿಸಿದ್ದಾರೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ರಕ್ಷಣೆ ಸಿಗದಂತೆ ಆಗುವ ಸಾಧ್ಯತೆ ಇದೆ. ಸಾಮಾಜಿಕ ಮಾಧ್ಯಮದ ದುರ್ಬಳಕೆ, POCSO ಕೇಸ್‌ಗಳು ಮತ್ತು ಬಾಲ್ಯವಿವಾಹಗಳನ್ನೂ ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಈ ಅಕ್ಕಪಡೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ ಅಪ್ಪದೇ ಯೋಜನೆ ಜಾರಿಗೆ ಬರುತ್ತಿದೆ.
ರಾಜ್ಯದ ಮಹಿಳಾ ಪೊಲೀಸ್ ಸಿಬ್ಬಂದಿಗಳು, NCC ಸಿಬ್ಬಂದಿಗಳು ಸೇರಿ ಅನೇಕ ಸರ್ಕಾರೀ ಅಧಿಕಾರಿ ಈ ಯೋಜನೆಯ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಈ ಅಕ್ಕಪಡೆ ಯೋಜನೆಯಿಂದ ಸುಮಾರು 70-95% ಬಡ ಮಹಿಳೆಯರ ಜೀವನ ಮಟ್ಟ ಏರಿಕೆಯಾಗಿದೆ ಎಂದು ಮಂತ್ರಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಈ ಯೋಜನೆಯಿಂದ ಮಹಿಳೆಯರು ಇನ್ನಷ್ಟು ಸುರಕ್ಷಿತವಾಗಿರಲಿದ್ದಾರೆ ಅನ್ನುವುದು ಸರ್ಕಾರದ ಭರವಸೆಯಾಗಿದೆ. ಬಾಲ್ಯ ವಿವಾಹ ತಡೆಗಟ್ಟುವುದು, ತಕ್ಷಣದ ಸಹಾಯ ನೀಡುವುದು, ಮಹಿಳೆಯರಿಗೆ ಭರವಸೆ ನೀಡುವುದು ಮತ್ತು ಮಕ್ಕಳ ರಕ್ಷಣೆ ಮಾಡುವುದು ಈ ಅಕ್ಕಪಡೆ ಯೋಜನೆಯ ಪ್ರಮುಖವಾದ ಉದ್ದೇಶವಾಗಿದೆ.

