Karnataka Rent Agreement Registration 2025: 2025 ರ ವರ್ಷದಲ್ಲಿ ಕರ್ನಾಟಕದಲ್ಲಿ ಬಾಡಿಗೆ ಮನೆ ನೊಂದಣಿ ನಿಯಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ನೀವು ಮನೆ ಬಾಡಿಗೆಗೆ ಪಡೆದುಕೊಳ್ಳಬೇಕಾದರೆ ಕೆಲವು ಸರ್ಕಾರೀ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಹಾಗಾದರೆ ಕರ್ನಾಟಕ ಬಾಡಿಗೆ ಮನೆ ನೋಂದಣಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಕೆಲವು ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.
ಬಾಡಿಗೆ ಮನೆ ನೋಂದಣಿಯಲ್ಲಿ ಹೊಸ ಬದಲಾವಣೆ
ಕರ್ನಾಟಕ ಬಾಡಿಗೆ ಕಾಯಿದೆಯಲ್ಲಿ ಈಗ ಕೆಲವು ಬದಲಾವಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಬಾಡಿಗೆ ಮನೆಯ ಒಪ್ಪಂದವು ಕರ್ನಾಟಕ ರೆಂಟ್ ಕಂಟ್ರೋಲ್ ಆಕ್ಟ್ 2001 ಅಡಿಯಲ್ಲಿ ನಿಯಂತ್ರಿಸಲ್ಪಟ್ಟಿದೆ. 11 ತಿಂಗಳಿಗಿಂತ ಕಡಿಮೆ ಅವಧಿಯ ಒಪ್ಪಂದಗಳಿಗೆ ನೋಂದಣಿಯ ಅಗತ್ಯ ಇರುವುದಿಲ್ಲ, ಆದರೆ 12 ತಿಂಗಳಿಗಿಂತ ಹೆಚ್ಚಿನ ಒಪ್ಪಂದಗಳಿಗೆ ಬಾಡಿಗೆ ನೋಂದಣಿ ಮಾಡುವುದು ಕಡ್ಡಾಯ ಅನ್ನುವ ಹೊಸ ನಿಯಮ ಈಗ ಕರ್ನಾಟಕ ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. 12 ತಿಂಗಳಿಗಿಂತ ಹೆಚ್ಚಿನ ಬಾಡಿಗೆ ಒಪ್ಪಂದ ಮಾಡುವವರು ಕಡ್ಡಾಯವಾಗಿ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡಬೇಕು. ಸಬ್ ರೆಜಿಸ್ಟರ್ ಆಕ್ಟ್ 1908 ರ ಅಡಿಯಲ್ಲಿ ಬಾಡಿಗೆ ಒಪ್ಪಂದ ಆಗದಿದ್ದರೆ ಆ ಒಪ್ಪಂದವನ್ನು ಯಾವುದೇ ರೀತಿಯ ಸಾಕ್ಷ್ಯ ಎಂದು ಬಳಸಲು ಸಾಧ್ಯವಿಲ್ಲ.
ಬಾಡಿಗೆ ಒಪ್ಪಂದದಲ್ಲಿ ಯಾವ ಅಂಶಗಳು ಕಡ್ಡಾಯವಾಗಿ ಇರಬೇಕು
ಬಾಡಿಗೆ ಒಪ್ಪಂದ ಮಾಡಿಕೊಳ್ಳುವ ಸಮಯದಲ್ಲಿ ಕೆಲವು ಅಗತ್ಯ ಮಾಹಿತಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಬಾಡಿಗೆ ಒಪ್ಪಂದದಲ್ಲಿ ನಮೂದಿಸಬೇಕಾದ ಅಂಶಗಳು ಈ ಕೆಳಗಿನಂತಿದೆ.
* ಬಾಡಿಗೆಯ ಮೊತ್ತ
* ಬಾಡಿಗೆ ಅವಧಿ
* ಬಾಡಿಗೆ ಡೆಪಾಸಿಟ್ ಹಣ
* ನಿರ್ವಹಣೆ ಮತ್ತು ತಿಂಗಳ ಎಚ್ಚರಿಕೆ
* ಸಾಕ್ಷಿದಾರರ ಸಹಿ ಮತ್ತು ಹೆಸರು
ಈ ಎಲ್ಲಾ ಅಂಶಗಳನ್ನು ಬಾಡಿಗೆ ಒಪ್ಪಂದದಲ್ಲಿ ನಮೂದಿಸುವುದು ಅತೀ ಕಡ್ಡಾಯವಾಗಿದೆ. ಈ ಅಂಶಗಳನ್ನು ನೀವು ಒಪ್ಪಂದದಲ್ಲಿ ನಮೂದಿಸಿದರೆ ಭವಿಷ್ಯದಲ್ಲಿ ಕೆಲವು ವಂಚನೆಯಿಂದ ಮುಕ್ತಿ ಪಡೆದುಕೊಳ್ಳಬಹುದು.
ಸ್ಟ್ಯಾಂಪ್ ಡ್ಯೂಟಿ ಮತ್ತು ರೆಜಿಸ್ಟರ್ ಶುಲ್ಕ ಪಾವತಿ
ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡುವ ಸಮಯದಲ್ಲಿ ಸ್ಟ್ಯಾಮ್ ಡ್ಯೂಟಿ ಮತ್ತು ರೆಜಿಸ್ಟರ್ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಸ್ಟ್ಯಾಂಪ್ ಡ್ಯೂಟಿ 11 ತಿಂಗಳ ಒಪ್ಪಂದಕ್ಕೆ 200 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ರಿಜಿಸ್ಟ್ರೇಷನ್ ಶುಲ್ಕವು ವಾರ್ಷಿಕ ಬಾಡಿಗೆ + ಡಿಪಾಸಿಟ್‌ನ ಶೇಕಡಾ 1. ಉದಾಹರಣೆಗೆ, ₹20,000 ನ ಬಾಡಿಗೆಗೆ ₹60,000 ಡಿಪಾಸಿಟ್ ಇದ್ದರೆ, ಶುಲ್ಕ ₹2,600 ಸುಮಾರು. ಇನ್ನು ಸ್ಟ್ಯಾಮ್ ಡ್ಯೂಟಿ ಹಣವನ್ನು ಸಂಪೂರ್ವಗಾಯ್ ಡಿಜಿಟಲ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
ಲ್ಯಾಂಡ್‌ಲಾರ್ಡ್ ಮತ್ತು ಟೆನಂಟ್ ಗೆ ರುವ ಕೆಲವು ಹಕ್ಕುಗಳು
ಕರ್ನಾಟಕ ಬಾಡಿಗೆ ಒಪ್ಪಂದದ ಪ್ರಕಾರ, ಲ್ಯಾಂಡ್‌ಲಾರ್ಡ್‌ಗೆ ಬಾಡಿಗೆ ಸಮಯಕ್ಕೆ ಪಾವತಿಸುವ ಹಕ್ಕು ಇದೆ, ಆದರೆ ಟೆನಂಟ್‌ಗೆ ಸುರಕ್ಷಿತ ಮನೆಯ ಹಕ್ಕು ಇದೆ. 2026 ರ ವರ್ಷದಿಂದ ಕರ್ನಾಟಕದಲ್ಲಿ ಡಿಜಿಟಲ್ ರೆಜಿಸ್ಟರ್ ಕಡ್ಡಾಯವಾಗಿದೆ. ಕರ್ನಾಟಕ ಪ್ರತಿಯೊಬ್ಬ ಬಾಡಿಗೆ ಮನೆ ಮಾಲೀಕ ಮತ್ತು ಬಾಡಿಗೆದಾರ ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬಾಡಿಗೆ ಮನೆ ಮಾಲೀಕ ಮತ್ತು ಬಾಡಿಗೆದಾರರ ಸುರಕ್ಷತೆಯ ಉದ್ದೇಶದಿಂದ ಕರ್ನಾಟಕದಲ್ಲಿ ಈ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

