Women’s World Cup Prize Money: ಭಾರತದ ಮಹಿಳಾ ಕ್ರಿಕೆಟ್ ತಂಡ ಇದೆ ಮೊದಲ ಬಾರಿಗೆ ICC ವರ್ಲ್ಡ್ ಕಪ್ ಆಗಿದೆ. ಸೌತ್ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಜಯ ಸಾಧಿಸುವುದರ ಮೂಲಕ ಇದೆ ಮೊದಲ ಬಾರಿಗೆ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ನಲ್ಲಿ ಸೌತ್ ಆಫ್ರಿಕಾ ತಂಡದ ಮೇಲೆ ಜಯ ಸಾಧಿಸುವುದರ ಮೂಲಕ ಈ ಬಾರಿಯ ICC ವರ್ಲ್ಡ್ ಭಾರತ ತನ್ನ ಮಡಿಲಿಗೆ ಹಾಕಿಕೊಂಡಿದೆ.
ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಸೆಮಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಅಮೋಘವಾದ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ ನೀಡಿದ್ದ 338 ರನ್ ಗಳನ್ನೂ ಬೆನ್ನಟ್ಟಿದ ಭಾರತ 342 ರನ್ ಭರಿಸುವುದರ ಮೂಲಕ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಸೆಮಿ ಫೈನಲ್ ಪಂದ್ಯದಲ್ಲಿ ನಾವು ಜಮಿಮಾ ರೊಡ್ರಿಗಸ್ ಅವರ ಅಮೋಘ ಶತಕ ಕಾಣಬಹುದು. ಇತ್ತದೆ ಸೌತ್ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕಫೈನಲ್ ಪ್ರವೇಶವನ್ನು ಪಡೆದುಕೊಂಡಿತ್ತು.
ಭಾರತ ಮಹಿಳಾ ತಂಡಕ್ಕೆ ಸಿಕ್ಕಿತು ದೊಡ್ಡ ಮೊತ್ತದ ಬಹುಮಾನ
ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾದಿಸಿದ ಭಾರತ ಮಹಿಳಾ ತಂಡಕ್ಕೆ ICC ಕಡೆಯಿಂದ ಮತ್ತು BCCI ಕಡೆಯಿಂದ ಬಹುದೊಡ್ಡ ಮೊತ್ತದ ಬಹುಮಾನ ನೀಡಲಾಗಿದೆ. ಈ ಬಾರಿನ ವುಮೆನ್ಸ್ ವರ್ಲ್ಡ್ ಕಪ್‌ನಲ್ಲಿ ICC ಒಟ್ಟು ಬಹುಮಾನ ಪೂಲ್ ಅನ್ನು USD 13.88 ಮಿಲಿಯನ್‌ಗೆ (ಸುಮಾರು ₹122.5 ಕೋಟಿ) ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಈ ಹಿಂದೆ ನಡೆದ ಎಲ್ಲಾ ಮಹಿಳಾ ICC ವಿಶ್ವಕಪ್ ಪಂದ್ಯಕ್ಕೆ ಹೋಲಿಕೆ ಮಾಡಿದರೆ ಇದು ಬಹಳ ದೊಡ್ಡ ಮೊತ್ತದ ಬಹುಮಾನವಾಗಿದೆ. ಹಿಂದಿನ ಆವೃತ್ತಿಗಳಲ್ಲಿ ಗೆದ್ದ ತಂಡಕ್ಕೆ ಕೇವಲ USD 2 ಮಿಲಿಯನ್ ಸಿಗುತ್ತಿತ್ತು, ಆದರೆ ಈ ಬಾರಿ ಗೆದ್ದ ತಂಡಕ್ಕೆ ಇದು ಮೂರು ಪಟ್ಟು ಹೆಚ್ಚಾಗಿದೆ.
ಭಾರತ ತಂಡಕ್ಕೆ ಬೋನಸ್ ನೀಡಿದ BCCI
ವಿಶ್ವಕಪ್ ವಿಜೇತ ಭಾರತ ತಂಡಕ್ಕೆ BCCI ಕೂಡ ಬಹಳ ಮೊತ್ತ ಬಹುಮಾನ ಘೋಷಣೆ ಮಾಡಿದೆ. ಇದೆ ಮೊದಲ ವಿಸ್ವಾಕ್ಯುಪ್ ಗೆದ್ದ ಭಾರತ ತಂಡಕ್ಕೆ BCCI ಕೂಡ ಬೋನಸ್ ಘೋಷಣೆ ಮಾಡಿದೆ. ಭಾರತೀಯ ಕ್ರಿಕೆಟ್ ಬೋರ್ಡ್ (BCCI) ಈ ವಿಜಯವನ್ನು ಆಚರಿಸಲು ತಂಡ, ಕೋಚ್‌ಗಳು ಮತ್ತು ಸಪೋರ್ಟ್ ಸ್ಟಾಫ್‌ಗೆ ₹51 ಕೋಟಿ ಬೋನಸ್ ಘೋಷಿಸಿದೆ. ಇದೆ ಮೊದಲ ಭಾರಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಷ್ಟೊಂದು ದೊಡ್ಡ ಮೊತ್ತ ಬಹಮಾನ ಗೆದ್ದಿರುವುದು ಆಗಿದೆ.
ಪುರುಷರಂತೆ ದೊಡ್ಡ ಮೊತ್ತದ ಬಹುಮಾನ ಪಡೆದುಕೊಂಡ ಮಹಿಳಾ ತಂಡ
ಈ ಹಿಂದೆ T20 ವಿಶ್ವಕಪ್ ಗೆದ್ದ ಭಾರತ ಪುರುಷ ತಂಡಕ್ಕೆ ಸುಮಾರು 122 ಕೋಟಿ ರೂಪಾಯಿ ಬಹುಮಾನವಾಗಿ ಸಿಕ್ಕಿತ್ತು. ಅದೇ ರೀತಿಯಲ್ಲಿ ಈಗ ಏಕದಿನ ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೂ ಕೂಡ 122 ಕೋಟಿ ರೂಪಾಯಿ ಹಣ ಬಹುಮಾನವಾಗಿ ಸಿಕ್ಕಿದೆ. ಈ ಗೆಲುವು ಕೇವಲ ಟ್ರೋಫಿ ಅಲ್ಲ, ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಉತ್ಸಾಹ ತಂದಿದೆ. ದೀಪ್ತಿ ಶರ್ಮ ಅವರು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತದ ಮಹಿಳೆಯರ ಈ ಪ್ರದರ್ಶನ ಯುವ ಕ್ರಿಕೆಟ್ ತಂಡಕ್ಕೆ ಇನ್ನಷ್ಟು ಪ್ರೇರಣೆಯಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

