Reactivate Inactive Bank Accounts: ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಹಲವಾರು ಬದಲಾವಣೆಗಳನ್ನ ನಾವು ಕಾಣಬಹುದಾಗಿದೆ. RBI ಹಣಕಾಸು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಇದೀಗ ನಾವು ನಿಮಗೆ ನಿಷ್ಕ್ರಿಯ ಖಾತೆಯಲ್ಲಿ ಹಣವನ್ನು ಹಿಂಪಡೆಯುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ.
ನಿಷ್ಕ್ರಿಯ ಖಾತೆ ಎಂದರೇನು?
12 ತಿಂಗಳಿನಿಂದ ಅಂದರೆ 1 ವರ್ಷದಿಂದ ಯಾವುದೇ ಹಣಕಾಸು ವಹಿವಾಟು ಇಲ್ಲದ ಖಾತೆಯನ್ನ ನಾವು ನಿಷ್ಕ್ರಿಯ ಖಾತೆ ಎಂದು ಕರೆಯುತ್ತೇವೆ. ಇಂತಹ ಖಾತೆಯಲ್ಲಿನ ಹಣವನ್ನು ನೇರವಾಗಿ ಹಿಂಪಡೆಯಲು ಸಾಧ್ಯವಿಲ್ಲ, ಹಾಗಾಗಿ ನೀವು ಈಗ RBI ನ ಈ ನಿಯಮವನ್ನ ಪಾಲಿಸುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆದುಕೊಳ್ಳಬಹುದು.
ನಿಷ್ಕ್ರಿಯ ಖಾತೆಯನ್ನ ಹೇಗೆ ಗುರುತಿಸಲಾಗುತ್ತದೆ?
ನೀವು ಬ್ಯಾಂಕ್ ನಲ್ಲಿ ಹೋಗಿ ಕೂಡ ಪರಿಶೀಲಿಸಿಕೊಳ್ಳಬಹುದು ಹಾಗೆ ಆನ್ಲೈನ್ ನಲ್ಲಿ ಕೂಡ ಚೆಕ್ ಮಾಡಿಕೊಳ್ಳಬಹುದು. ಆನ್ಲೈನ್ ಅಲ್ಲಿ udgam.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ನಿಷ್ಕ್ರಿಯ ಖಾತೆಯನ್ನ ಕಂಡುಕೊಳ್ಲಬಹುದಾಗಿದೆ. RBI UDGAM ಪೋರ್ಟಲ್ ನಲ್ಲಿ 30 ಬ್ಯಾಂಕ್ ಗಳನ್ನ ಕವರ್ ಮಾಡುತ್ತಿದೆ. ಇದರಲ್ಲಿ ಹಣ ಸುರಕ್ಷಿತವಾಗಿರುತ್ತದೆ ಮತ್ತು ಬ್ಯಾಂಕ್ ಇನೋಪರೇಟಿವ್ ಎಂದು ತೋರಿಸುತ್ತದೆ. UDGAM ಪೋರ್ಟಲ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ನಂಬರ್, ಹಾಗೆ IFSC ಕೋಡ್ ಅನ್ನ ಬಳಸಿಕೊಂಡು ನಿಮ್ಮ ನಿಷ್ಕ್ರಿಯ ಖಾತೆಯನ್ನ ಹುಡುಕಬಹುದಾಗಿದೆ.
ನಿಷ್ಕ್ರಿಯ ಖಾತೆಯನ್ನ ಸಕ್ರಿಯ ಗೊಳಿಸುವ ವಿಧಾನ
RBI ನ ನಿಯಮದ ಪ್ರಕಾರ ನಿಷ್ಕ್ರಿಯ ಖಾತೆಯನ್ನು ಸಕ್ರಿಯ ಗೊಳಿಸಲು KYC ಅನ್ನು ಪೂರ್ಣಗೊಳಿಸಬೇಕು. KYC ಪೂರ್ಣಗೊಳಿಸಲು ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಇತ್ತೀಚಿನ ಯಾವುದಾದರು ಒಂದು ದಾಖಲೆ ಅಗತ್ಯವಾಗಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಫಾರ್ಮ್ ಅನ್ನು ಭರ್ತಿ ಮಾಡಿ ಈ ಮೇಲಿನ ದಾಖಲೆಯನ್ನು ನೀಡಿ KYC ಅನ್ನು ಪೂರ್ಣಗೊಳಿಸಿಕೊಳ್ಳಬಹುದು. ಅಥವಾ ಆನ್ಲೈನ್ ಮೂಲಕ ನೆಟ್ ಬ್ಯಾಂಕಿಂಗ್ ನಲ್ಲಿ KYC ಅನ್ನು ಪೂರ್ಣಗೊಳಿಸಬಹುದಾಗಿದೆ. ಎಲ್ಲಾ ಬ್ಯಾಂಕ್ ಖಾತೆಗೆ KYC ಕಡ್ಡಾಯವಾಗಿದೆ.
ನಿಷ್ಕ್ರಿಯ ಖಾತೆಯಲ್ಲಿನ ಹಣವನ್ನು ಹಿಂಪಡೆಯುವ ವಿಧಾನ
KYC ಪೂರ್ಣಗೊಳಿಸಿದ ನಂತರ ನಿಮ್ಮ ಖಾತೆ ಸಕ್ರಿಯವಾಗುತ್ತದೆ. ಇದಾದ ನಂತರ ನೀವು ನಿಮ್ಮ ATM, ಚೆಕ್ ಬುಕ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನ ಹಿಂಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಶುಲ್ಕವನ್ನ ಪಾವತಿ ಮಾಡುವ ಅಗತ್ಯ ಇಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

