Parents Property Right 2025 In India: ತಂದೆ ಮತ್ತು ತಾಯಿಯ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದೇಶದಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಇನ್ನುಮುಂದೆ ತಂದೆ ಮತ್ತು ತಾಯಿ ಮಕ್ಕಳಿಗೆ ಕೊಟ್ಟ ಆಸ್ತಿಯನ್ನು ಮರಳಿ ವಾಪಾಸ್ ಪಡೆದುಕೊಳ್ಳಬಹುದು. ತಂದೆ ಮತ್ತು ತಾಯಿ ತಾವು ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿಯನ್ನು ಮಕ್ಕಳಿಗೆ ದಾನವಾಗಿ ಕೊಟ್ಟ ನಂತರ ಕೂಡ ಆ ಆಸ್ತಿಯನ್ನು ಮಕ್ಕಳಿಂದ ಮರಳಿ ಪಡೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ತಂದೆ ಮತ್ತು ತಾಯಿ ಆಸ್ತಿಗೆ ಹೊಸ ರೂಲ್ಸ್
ಆಸ್ತಿಯಲ್ಲಿ ಎರಡು ವಿಧಾನಗಳು ಇದೆ, ಒಂದು ಸ್ವಯಾರ್ಜಿತ ಆಸ್ತಿ ಮತ್ತು ಇನ್ನೊಂದು ಪಿತ್ರಾರ್ಜಿತ ಆಸ್ತಿ. ಪಿತ್ರಾರ್ಜಿತ ಆಸ್ತಿ ಅಂದರೆ ಪೂರ್ವಜರಿಂದ ಬಂದಿರುವ ಆಸ್ತಿಯಾಗಿರುತ್ತದೆ ಮತ್ತು ಸ್ವಯಾರ್ಜಿತ ಆಸ್ತಿ ಅಂದರೆ ಸ್ವಂತ ಹಣದಲ್ಲಿ ಖರೀದಿಮಾಡಿದ ಆಸ್ತಿ ಆಗಿರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಕುಟುಂಬದ ಪ್ರತಿ ಸದಸ್ಯರಿಗೆ ಹಕ್ಕು ಇರುತ್ತೆ, ಆದರೆ ಸ್ವಯಾರ್ಜಿತ ಆಸ್ತಿಯಲ್ಲಿ ಯಾರು ಕೂಡ ಹಕ್ಕು ಪಡೆದುಕೊಳ್ಳಲು ಸಾಧ್ಯವಿಲ್ಲ.
ಮಕ್ಕಳಿಗೆ ಕೊಟ್ಟ ಆಸ್ತಿ ಮರಳಿ ಪಡೆದುಕೊಳ್ಳಬಹುದು
ಕೆಲವು ಸಂದರ್ಭದಲ್ಲಿ ಮಕ್ಕಳದವರು ತಂದೆ ಮತ್ತು ತಾಯಿಯಿಂದ ಆಸ್ತಿಯನ್ನು ಪಡೆದುಕೊಂಡು ಅವರ ಆರೈಕೆ ಮಾಡುವುದಿಲ್ಲ ಮತ್ತು ಕೆಲವು ಮಕ್ಕಳು ತಂದೆ ಮತ್ತು ತಾಯಿಯನ್ನು ಅವರ ವೃದ್ದಾಪ್ಯದ ದಿನಗಳಲ್ಲಿ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಆದರೆ ಇನ್ನುಮುಂದೆ ಮಕ್ಕಳು ತಂದೆ ಮತ್ತು ತಾಯಿಯ ಆರೈಕೆ ಮಾಡದೆ ಇದ್ದರೆ ಅಥವಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ತಂದೆ ಮತ್ತು ತಾಯಿ ಮಕ್ಕಳಿಗೆ ಕೊಟ್ಟ ಆಸ್ತಿಯ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಪಡೆದುಕೊಂಡಿದ್ದಾರೆ.
ದಾನಪತ್ರದ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ
ಸ್ನೇಹಿತರೇ, ಸೆಕ್ಷನ್ 23(1) ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪೋಷಕರು ಅಥವಾ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ದಾನ (ಗಿಫ್ಟ್ ಡೀಡ್), ವಿಲ್ ಅಥವಾ ವರ್ಗಾವಣೆ ಮಾಡಿದ್ದಲ್ಲಿ, ಅದಕ್ಕೆ ಮಕ್ಕಳು ಅಥವಾ ಸಂಬಂಧಿಕರು ಆರೈಕೆ ಮತ್ತು ನಿರ್ವಹಣೆ ಕೊಡುವ ಷರತ್ತು ಇರುತ್ತದೆ. ಈ ಷರತ್ತು ಮೀರಿದರೆ ಆ ದಾನ ಅಥವಾ ವರ್ಗಾವಣೆ ಸ್ವಯಂಚಾಲಿತವಾಗಿ ರದ್ದು ಮಾಡಲಾಗುತ್ತದೆ, ಅಂದರೆ ಮತ್ತೆ ಆ ಆಸ್ತಿ ಪೋಷಕರ ಹೆಸರಿಗೆ ವರ್ಗಾವಣೆ ಆಗುತ್ತದೆ. ಈ ನಿಯಮ ಎಲ್ಲಾ ರಾಜ್ಯಗಳಿಗೆ ಅನ್ವಯ ಆಗಲಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಆಸ್ತಿ ವರ್ಗಾವಣೆಯ ನಂತರ ಪೋಷಕರು ನಿರಾಶ್ರಿತರಾದರೆ ಅಥವಾ ಪೋಷಕರು ದುರ್ಬಳಕೆಗೊಳಗಾದರೆ, ಟ್ರಿಬ್ಯೂನಲ್ ಆದೇಶದಿಂದ ವರ್ಗಾವಣೆ ರದ್ದುಗೊಳಿಸಬಹುದು. ಇದು ಎಲ್ಲ ರಾಜ್ಯಗಳಲ್ಲೂ ಅನ್ವಯ, ಕರ್ನಾಟಕದಲ್ಲಿ ಕೂಡ ಈ ನಿಯಮ ಅನ್ವಯ ಆಗುತ್ತೆ. ಈ ನಿಯಮ ಕೇವಲ ಸ್ವಯಾರ್ಜಿತ ಆಸ್ತಿಗೆ ಮಾತ್ರ ಅನ್ವಯ ಆಗಲಿದೆ, ಆದರೆ ಪಿತ್ರಾರ್ಜಿತ ಆಸ್ತಿಗೆ ಈ ನಿಯಮ ಅನ್ವಯ ಆಗಲ್ಲ ಎಂದು ಸುಪ್ರೀಂ ಸ್ಪಷ್ಟನೆಯನ್ನು ಕೂಡ ಕೊಟ್ಟಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಜನ್ಮಸಿದ್ಧ ಹಕ್ಕು ಪಡೆದುಕೊಳ್ಳುತ್ತಾರೆ.
ಪೋಷಕರ ಮಕ್ಕಳ ಮೇಲೆ ದೂರು ಕೊಡುವುದು ಹೇಗೆ?
ಮಕ್ಕಳು ಆಸ್ತಿ ಪಡೆದುಕೊಂಡು ನಂತರ ಪೋಷಕರನ್ನು ನೋಡಿಕೊಳ್ಳದೆ ಇದ್ದರೆ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಬಹುದು. ಹೆತ್ತವರಿಗೆ ರಕ್ಷಣೆ ಮತ್ತು ಅವರಿಗೆ ಅನ್ಯಾಯ ಆಗಬಾರದು ಅನ್ನುವ ಉದ್ದೇಶದಿಂದ ದೇಶಾದ್ಯಂತ ಈ ನಿಯಮ ಜಾರಿಗೆ ತರಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

