Gold Price Today: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದ ಬಂಗಾರದ ಬೆಲೆ (Gold Price) ಇಂದು (06-11-2025) ರಂದು ದಿಡೀರ್ ಆಗಿದೆ ಏರಿಕೆ ಕಂಡಿದೆ. ಚಿನ್ನದ ಬೆಲೆ ಮತ್ತೆ ಏರಿಕೆಯತ್ತ ಮುಖಮಾಡಿರುವುದು ಸದ್ಯ ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಇಂದು ದೇಶದಲ್ಲಿ 22K, 24K ಮತ್ತು 18K ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ. ಹಾಗಾದರೆ ಇಂದು 22K, 24K ಮತ್ತು 18K ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ ಆಗಿದೆ ಅನ್ನುವುದರ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.
ದೇಶದಲ್ಲಿ ಏರಿಕೆಯಾದ 24K ಬಂಗಾರದ ಬೆಲೆ
ಎರಡು ದಿನಗಳಿಂದ ಇಳಿಕೆಯತ್ತ ಮುಖಮಾಡಿದ್ದ 24K ಬಂಗಾರದ ಬೆಲೆ ಇಂದು ದಿಡೀರ್ ಏರಿಕೆ ಆಗಿದೆ. ಇಂದು ದೇಶದಲ್ಲಿ 24K ಬಂಗಾರದ ಬೆಲೆಯಲ್ಲಿ ಸುಮಾರು 43 ರೂಪಾಯಿ ಏರಿಕೆ ಆಗಿರುವುದನ್ನು ನಾವು ಗಮನಿಸಬಹುದು. ಇಂದು ದೇಶದಲ್ಲಿ 24K ನ ಒಂದು ಗ್ರಾಂ ಬಂಗಾರದ ಬೆಲೆ 12,191 ರೂಪಾಯಿ ಆಗಿದೆ ಮತ್ತು ಇಂದು 24K ಕ್ಯಾರಟ್ ನ ಹತ್ತು ಗ್ರಾಂ ಬಂಗಾರದ ಬೆಲೆಯಲ್ಲಿ 430 ರೂಪಾಯಿ ಏರಿಕೆಯಾದ ಕಾರಣ ಇಂದು 24K ನ ಹತ್ತು ಗ್ರಾಂ ಬಂಗಾರದ ಬೆಲೆ 1,21,910 ರೂಪಾಯಿ ಆಗಿದೆ ಮತ್ತು ನೂರು ಗ್ರಾಂ ಬಂಗಾರದ ಬೆಲೆ 12,19,100 ರೂ ಆಗಿದೆ.
ದೇಶದಲ್ಲಿ ಏರಿಕೆಯಾದ 22K ಬಂಗಾರದ ಬೆಲೆ
ದೇಶದಲ್ಲಿ ಇಂದು 22K ಬಂಗಾರದ ಬೆಲೆಯಲ್ಲಿ ಕೂಡ ಏರಿಕೆ ಆಗಿರುವುದನ್ನು ನಾವು ಗಮನಿಸಬಹುದು. ಇಂದು ದೇಶದಲ್ಲಿ 22K ನ ಒಂದು ಗ್ರಾಂ ಬಂಗಾರದ ಬೆಲೆಯಲ್ಲಿ ಸುಮಾರು 40 ರೂಪಾಯಿ ಏರಿಕೆ ಕಂಡುಬಂದ ಕಾರಣ ಇಂದು 22K ನ ಒಂದು ಗ್ರಾಂ ಬಂಗಾರದ ಬೆಲೆ 11,175 ರೂಪಾಯಿ ಆಗಿರುತ್ತದೆ. ಇಂದು ದೇಶದಲ್ಲಿ 22K ನ 10 ಗ್ರಾಂ ಬಂಗಾರದ ಬೆಲೆಯಲ್ಲಿ 400 ರೂ ಏರಿಕೆ ಆಗಿರುವ ಕಾರಣ ಹತ್ತು ಗ್ರಾಂ ಬಂಗಾರದ ಬೆಲೆ 1,11,750 ರೂಪಾಯಿ ಆಗಿದೆ ಮತ್ತು ನೂರು ಗ್ರಾಂ ಬಂಗಾರದ ಬೆಲೆ 11,17,500 ರೂಪಾಯಿ ಆಗಿರುತ್ತದೆ.
ದೇಶದಲ್ಲಿ ಇಂದು ಏರಿಕೆಯಾದ 18K ಬಂಗಾರದ ಬೆಲೆ
22K ಮತ್ತು 24K ಬಂಗಾರದ ಹಾಗೆ 18K ಬಂಗಾರದ ಬೆಲೆಯಲ್ಲಿ ಕೂಡ ಏರಿಕೆ ಆಗಿರುವುದನ್ನು ನಾವು ಗಮನಿಸಬಹುದು. ಇಂದು 18K ಬಂಗಾರದ ಬೆಲೆಯಲ್ಲಿ 32 ರೂ ಏರಿಕೆಯಾದ ಕಾರಣ ಇಂದು 18K ನ ಒಂದು ಗ್ರಾಂ ಬಂಗಾರದ ಬೆಲೆ 9,143 ರೂಪಾಯಿ ಆಗಿದೆ. ಇಂದು 18K ನ ಹತ್ತು ಗ್ರಾಂ ಬಂಗಾರದ ಬೆಲೆಯಲ್ಲಿ 320 ರೂಪಾಯಿ ಏರಿಕೆ ಆಗಿದ್ದು ಇಂದು 18K ನ ಹತ್ತು ಗ್ರಾಂ ಬಂಗಾರದ ಬೆಲೆ 91,430 ರೂಪಾಯಿ ಆಗಿದೆ ಮತ್ತು ನೂರು ಗ್ರಾಂ ಬಂಗಾರದ ಬೆಲೆ 9,14,300 ರೂ ಆಗಿರುತ್ತದೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಸೂಕ್ತವಾದ ಸಮಯ
ದೇಶದಲ್ಲಿ ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಕಡಿಮೆ ಆಗುತ್ತಿರುವ ಕಾರಣ ಇದು ಚಿನ್ನದ ಮೇಲೆ ಹೂಡಿಕೆ ಮಾಡಲು ಸೂಕ್ತವಾದ ಸಮಯ ಅನ್ನುವುದು ಸಾಕಷ್ಟು ಜನರ ಅಭಿಪ್ರಾಯ ಆಗಿದೆ. ಚಿನ್ನದ ಬೆಲೆ ಅಮೇರಿಕಾ ಬೆಲೆ ಸೂಚ್ಯಂಕ ಮತ್ತು ಜಾಗತಿಕ ಮಾರುಕಟ್ಟೆಯ ಮೇಲೆ ನೇರವಾಗಿ ನಿರ್ಧಾರ ಆಗುತ್ತೆ. ನವೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

