Microfinance Loan: ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಕಾಟ ಬಹಳ ಹೆಚ್ಚಾಗಿದ್ದು ಈ ಕಾರಣಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ಮೈಕ್ರೋ ಫೈನಾನ್ಸ್ ಕಾಟ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಬಹುದೊಡ್ಡ ಆದೇಶ ಹೊರಡಿಸಿದೆ. ಸಚಿವರ ಜೊತೆ ಸಮಾಲೋಚನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮತ್ತು ಸಾಲ ಕೊಡುವ ಎಲ್ಲಾ ಸಂಘ ಸಂಸ್ಥೆಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಮತ್ತು ಇತರೆ ಸಣ್ಣಪುಟ್ಟ ಸಾಲ ಸಂಸ್ಥೆಯಲ್ಲಿ ಸಾಲ ಮಾಡಿಕೊಂಡವರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಕಾನೂನು ನಿಯಮ ಮೀರಿ ಸಾಲ ಕೊಡಲಾಗುತ್ತಿದೆ
ಕೆಲವು ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಬೇಕಾದರೆ ಪದೇಪದೇ ಸಾಲ ಕೊಡುವುದರ ಮೂಲಕ ಅವರನ್ನು ಸಾಲದ ಸುಳಿಗೆ ಸಿಲುಕಿಸುವ ಕೆಲಸ ಮಾಡುತ್ತಿದೆ ಎಂದು ಸಾಕಷ್ಟು ಜನರು ಮೈಕ್ರೋ ಫೈನಾನ್ಸ್ ಮೇಲೆ ಆರೋಪ ಮಾಡಿದ್ದಾರೆ. ಸಾಲ ಪಡೆದುಕೊಂಡ ವ್ಯಕ್ತಿ ಆ ಸಾಲ ತೀರಿಸದೆ ಇದ್ದ ಸಮಯದಲ್ಲಿ ಆತನ ಮೇಲೆ ಕಾನೂನು ಬಾಹಿರ ಕ್ರಮಗಳನ್ನು ಮೈಕ್ರೋ ಫೈನಾನ್ಸ್ ಕಂಪನಿಗಳು ತಗೆದುಕೊಳ್ಳುತ್ತಿರುವುದು ಕೂಡ ಈಗ ಸರ್ಕಾರದ ಗಮನಕ್ಕೆ ಬಂದಿದೆ.
ಇನ್ನುಮುಂದೆ ಒಬ್ಬನೇ ವ್ಯಕ್ತಿಗೆ ಪದೇಪದೇ ಸಾಲ ಕೊಡುವಂತಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಮತ್ತು ಮೈಕ್ರೋ ಫೈನಾನ್ಸ್ ಕಂಪನಿಗಳು ಒಬ್ಬನೇ ವ್ಯಕ್ತಿಗೆ ಪದೇಪದೇ ಸಾಲ ಕೊಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಒಬ್ಬನೇ ವ್ಯಕ್ತಿಗೆ ಪದೇಪದೇ ಸಾಲ ಕೊಡುವ ಸಮಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು.
ಸಾಲದಾತನ ಮನೆ ಜಪ್ತಿ ಮಾಡುವಂತಿಲ್ಲ
ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದುಕೊಂಡ ವ್ಯಕ್ತಿ ಆ ಸಾಲ ತೀರಿಸದೆ ಇದ್ದರೆ ಮೈಕ್ರೋ ಫೈನಾನ್ಸ್ ಕಂಪನಿಗಳು ಆತನ ಮನೆ ಜಪ್ತಿಮಾಡುವ ಕೆಲಸ ಮಾಡುತ್ತೆ. ಆದರೆ ಇನ್ನುಮುಂದೆ ಸಾಲಗಾರರ ಮನೆ ಜಪ್ತಿಮಾಡುವ ಮೊದಲು ಕಡ್ಡಾಯವಾಗಿ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು. ಸಾಲ ವಸೂಲಿ ಮಾಡಲು ರೌಡಿಗಳನ್ನು ಬಳಸಿಕೊಂಡರೆ ಮೈಕ್ರೋ ಫೈನಾನ್ಸ್ ಸಂಸ್ಥೆಯ ಪರವಾನಿಗೆ ರದ್ದು ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಸಾಲ ನೀಡುವ ಸಂಸ್ಥೆಗಳು ಕಡ್ಡಾಯವಾಗಿ RBI ನಿಯಮಗಳನ್ನು ಪಾಲನೆ ಮಾಡಬೇಕು. ಒಬ್ಬ ವ್ಯಕ್ತಿಗೆ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದ್ದರೆ ಮಾತ್ರ ಆತನಿಗೆ ಪದೇಪದೇ ಸಾಲ ಕೊಡಬೇಕು ಮತ್ತು ಸಾಲ ಕೊಡುವ ಮುನ್ನ ಕಡ್ಡಾಯವಾಗಿ KYC ಪಡೆದುಕೊಳ್ಳಬೇಕು. ಸಾಲ ಕೊಡುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳು ಈ ನಿಯಮ ಪಾಲನೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. RBI ನಿಂದ ಪರವಾನಿಗೆ ಪಡೆದುಕೊಂಡ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳು ಈ ನಿಯಮ ಪಾಲನೆ ಮಾಡುವುದು ಕಡ್ಡಾಯ. ನಿಯಮ ಪಾಲನೆ ಮಾಡದೆ RBI ನಿಯಮ ಅನ್ವಯ ಅವರ ಲೈಸನ್ಸ್ ರದ್ದು ಮಾಡಲಾಗುತ್ತದೆ ಮತ್ತು ಅವರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕೊನೆಯ ಎಚ್ಚರಿಕೆ ನೀಡಿದ್ದಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

