Karnataka BPL Ration Card Rules 2025: ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ BPL ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಅನೇಕ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳನ್ನು ರದ್ದುಮಾಡಿದೆ. ಈಗ ಮತ್ತೆ BPL ರೇಷನ್ ರೇಷನ್ ಕಾರ್ಡುಗಳಿಗೆ ಹೊಸ ನಿಯಮ ಜಾರಿಗೆ ತಂದಿರುವ ಕರ್ನಾಟಕ ಸರ್ಕಾರ ಮತ್ತಷ್ಟು BPL ರೇಷನ್ ಕಾರ್ಡುಗಳನ್ನು ರದ್ದುಮಾಡುವ ಬಗ್ಗೆ ಚಿಂತನೆ ಮಾಡಿದೆ. ಹಾಗಾದರೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ BPL ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಹೊಸ ನಿಯಮ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಈಗಾಗಲೇ ರದ್ದಾಗಿದೆ 20 ಲಕ್ಷಕ್ಕೂ ಅಧಿಕ BPL ಕಾರ್ಡ್
ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಸುಮಾರು 20 ಲಕ್ಷಕ್ಕೂ ಅಧಿಕ ಅನರ್ಹ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಿದ್ದು ಈಗ ಇನ್ನಷ್ಟು BPL ಕಾರ್ಡುಗಳನ್ನು ರದ್ದು ಮಾಡುವ ಚಿಂತನೆ ಮಾಡಿದೆ. ಸರ್ಕಾರೀ ಕೆಲಸದಲ್ಲಿ ಇರುವವರು, ಸ್ವಂತ ಬಿಸಿನೆಸ್ ಮಾಡುವವರು, ವಾರ್ಷಿಕವಾಗಿ 1.2 ಲಕ್ಷ ರೂ ಆದಾಯ ಹೊಂದಿರುವ ಕುಟುಂಬದವರು, ವೈಟ್ ಬೋರ್ಡ್ ಕಾರ್ ಅಥವಾ ಇತರೆ ವಾಹನ ಇದ್ದವರು, GST ಮತ್ತು ತೆರಿಗೆ ಪಾವತಿ ಮಾಡುವವರ BPL ರೇಷನ್ ಕಾರ್ಡುಗಳನ್ನು ಈಗಾಗಲೇ ರದ್ದು ಮಾಡಲಾಗಿದೆ. BPL ಕಾರ್ಡುಗಳಿಗೆ ಸಂಬಂಧಿಸಿದಂತೆ ಕನಾಟಕ ಆಹಾರ ಮತ್ತು ನಾಗರೀಕ ಇಲಾಖೆ ಕೆಲವು ಮಾನದಂಡಗಳನ್ನು ಕೂಡ ಬಿಡುಗಡೆ ಮಾಡಿದೆ.
6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ರದ್ದು
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಈಗ ಕಳೆದ 6 ತಿಂಗಳಿಂದ ಯಾವ ಕುಟುಂಬದವರು ರೇಷನ್ ದಾನ್ಯಗಳನ್ನು ಪಡೆದುಕೊಂಡಿಲ್ಲವೋ ಅಂತಹ ಕುಟುಂಬದವರ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಲು ತೀರ್ಮಾನವನ್ನು ಮಾಡಿದೆ. ಸರ್ಕಾರದಿಂದ ಪ್ರತಿಯೊಬ್ಬ BPL ಕಾರ್ಡುದಾರರು ಪಡಿತರ ದಾನ್ಯ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ, ಆದರೆ ಕೆಲವು ಕುಟುಂಬದವರು ಕಳೆದ ಕೆಲವು ತಿಂಗಳಿಂದ ಪಡಿತರ ದಾನ್ಯಗಳನ್ನು ಪಡೆದುಕೊಳ್ಳದೇ ಇರುವುದು ಈಗ ರಾಜ್ಯ ಸರ್ಕಾರ ಗಮನಕ್ಕೆ ಬಂದಿದೆ.
ಕಳೆದ ಆರು ತಿಂಗಳಿಂದ ಯಾರು ರೇಷನ್ ದಾನ್ಯಗಳನ್ನು ಪಡೆದುಕೊಂಡಿಲ್ಲವೋ ಅಂತಹ ಕುಟುಂಬದವರ BPL ರೇಷನ್ ಕಾರ್ಡುಗಳನ್ನು ಇನ್ನುಮುಂದೆ ರದ್ದು ಮಾಡಲಾಗುತ್ತದೆ. ಇನ್ನುಮುಂದೆ BPL ಕಾರ್ಡ್ ರದ್ದಾಗಬಾರದು ಅಂದರೆ ಕಡ್ಡಾಯವಾಗಿ ಪ್ರತಿ ತಿಂಗಳು ರೇಷನ್ ದಾನ್ಯಗಳನ್ನು ಪಡೆದುಕೊಳ್ಳಬೇಕು. ಹುಬ್ಬಳ್ಳಿ, ಚಾಮರಾಜನಾಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಹಲವು ಕುಟುಂಬಗಳ BPL ಕಾರ್ಡುಗಳನ್ನು ರದ್ದು ಮಾಡಲಾಗಿದೆ.
BPL ಕಾರ್ಡ್ ರದ್ದಾದರೆ ಮರಳಿ ಪಡೆದುಕೊಳ್ಳುವುದು ಹೇಗೆ?
ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ ಕೂಡ BPL ಕಾರ್ಡ್ ರದ್ದಾದರೆ ಅದನ್ನು ಸುಲಭವಾಗಿ ಮರಳಿ ಪಡೆದುಕೊಳ್ಳಬಹುದು. ಆಹಾರ ಇಲಾಖೆಯ ವೆಬ್‌ಸೈಟ್ ahara.karnataka.gov.in ವೆಬ್ಸೈಟ್ ನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಕರೆದಾಗ ಅರ್ಜಿ ಸಲ್ಲಿಸಿ ಪುನಃ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. ರಾಜ್ಯದ ಹಲವು ಜಿಲ್ಲೆಗಳಲ್ಲಿ ರದ್ದಾದ ರೇಷನ್ ಕಾರ್ಡುಗಳಲ್ಲಿ ಮರಳಿ ನೀಡಲಾಗಿದೆ.
BPL ಕಾರ್ಡ್ ಇದ್ದವರು KYC ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ ಮತ್ತು ಅನರ್ಹರು BPL ಕಾರ್ಡ್ ಹೊಂದಿದ್ದರೆ ಅದನ್ನು APL ಕಾರ್ಡುಗಳಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ ಕಳೆದ ಕೆಲವು ತಿಂಗಳಲ್ಲಿ ಸುಮಾರು 1.3 ಲಕ್ಷ BPL ರೇಷನ್ ಕಾರ್ಡುಗಳು ಬಳಕೆ ಮಾಡದೆ ರದ್ದಾಗಿದೆ ಎಂದು ತಿಳಿದುಬಂದಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

