Canara Bank Home Loan Details: ಈಗಿನ ಕಾಲದಲ್ಲಿ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು ಆಗಿರುತ್ತೆ. ತಮ್ಮದೇ ಆದ ಸ್ವಂತ ಮನೆ ಇರಬೇಕು ಅನ್ನುವ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ಸಾಲ ಮಾಡಿಯಾದರೂ ಕೂಡ ಕಟ್ಟುತ್ತಾರೆ. ಸದ್ಯ ಮನೆ ಕಟ್ಟುವ ಎಲ್ಲರಿಗೂ ಕೂಡ ಬ್ಯಾಂಕುಗಳು ಗೃಹಸಾಲ ನೀಡುತ್ತಿದೆ. ಸರ್ಕಾರೀ ಬ್ಯಾಂಕ್ ಆಗಿರಬಹುದು ಅಥವಾ ಖಾಸಗಿ ಬ್ಯಾಂಕ್ ಆಗಿರಬಹುದು ಬಹಳ ಸುಲಭವಾಗಿ ಸಾಲ ಮಾಡಬಹುದು. ಗೃಹಸಾಲ ಅತೀ ಕಡಿಮೆ ಬಡ್ಡಿಗೆ ನೀಡುವ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದಾಗಿದೆ. ಹಾಗಾದರೆ ಕೆನರಾ ಬ್ಯಾಂಕಿನಲ್ಲಿ 10 ಲಕ್ಷ ರೂ ಗೃಹಸಾಲ ಮಾಡಿದರೆ ಎಷ್ಟು EMI ಬರುತ್ತೆ ಮತ್ತು ಗೃಹಸಾಲದ ಬಡ್ಡಿದರ ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಕೆನರಾ ಬ್ಯಾಂಕಿನಲ್ಲಿ ಸುಲಭವಾಗಿ ಮಾಡಬಹುದು ಗೃಹಸಾಲ
ಬೇರೆ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಮನೆ ನಿರ್ಮಾಣ ಮಾಡುವವರು ಕೆನರಾ ಬ್ಯಾಂಕಿನಲ್ಲಿ ಬಹಳ ಸುಲಭವಾಗಿ ಗೃಹಸಾಲ ಮಾಡಬಹುದು. ಕೆಲವು ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ಕೆನರಾ ಬ್ಯಾಂಕಿನಲ್ಲಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಕೆನರಾ ಬ್ಯಾಂಕ್ ಗೃಹ ಸಾಲಗಳು ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಗೆ ಸಂಬಂಧಿಸಿದ್ದು, ಪ್ರಸ್ತುತ ಬಡ್ಡಿದರ ಶೇಕಡಾ 8.35ರಿಂದ ಪ್ರಾರಂಭವಾಗುತ್ತದೆ. ಬೇರೆ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಕೆನರಾ ಬ್ಯಾಂಕಿನಲ್ಲಿ ಗೃಹಸಾಲದ ಬಡ್ಡಿದರ ಸ್ವಲ್ಪ ಕಡಿಮೆಯಾಗಿದೆ.
10 ಲಕ್ಷ ರೂ ಗೃಹಸಾಲಕ್ಕೆ ಎಷ್ಟು EMI ಬರುತ್ತೆ?
ಕೆನರಾ ಬ್ಯಾಂಕ್ ತನ್ನ ಗೃಹ ಸಾಲಗಳನ್ನು RLLR ಗೆ ಲಿಂಕ್ ಮಾಡಿದೆ. ನವೆಂಬರ್ 2025 ರಂತೆ ರೆಪೋ ರೇಟ್ ಶೇ.6.5 ಆಗಿದ್ದು ಗೃಹಸಾಲದ ಬಡ್ಡಿದರ 8.35 ನಿಂದ ಆರಂಭ ಆಗುತ್ತದೆ. CIBIL ಸ್ಕೊರ್ ಮತ್ತು ಇತರೆ ಅಂಸಹಗಳ ಆದಹಾರದ ಮೇಲೆ ಗೃಹಸಾಲದ ಬಡ್ಡಿದರ ನಿರ್ಧಾರ ಆಗುತ್ತೆ. CIBIL ಕಡಿಮೆ ಇರುವವರ ಗೃಹಸಾಲದ ಬಡ್ಡಿದರ 9.5 ರ ವರೆಗುವ ಇರುವ ಸಾಧ್ಯತೆ ಇದೆ. ಗೃಹಸಾಲ ಮಾಡುವ ಮುನ್ನ CIBIL ಸ್ಕೊರ್ ಬಗ್ಗೆ ಸ್ವಲ್ಪ ಗಮನಕೊಡಬೇಕಾಗುತ್ತದೆ.
ಕೆನರಾ ಬ್ಯಾಂಕಿನಲ್ಲಿ 10 ಲಕ್ಷ ರೂ ಗೃಹಸಾಲವನ್ನು 15 ವರ್ಷಕ್ಕೆ (180 ತಿಂಗಳು) ಅಂದಾಜು ಬಡ್ಡಿದರ 8.5% ಗೆ ತಗೆದುಕೊಂಡರೆ ಮಾಸಿಕ EMI ಸುಮಾರು 9,850 ರೂಪಾಯಿ ಬರುತ್ತದೆ.
ಕೆನರಾ ಬ್ಯಾಂಕಿನಲ್ಲಿ 10 ಲಕ್ಷ ರೂ ಗೃಹಸಾಲವನ್ನು 15 ವರ್ಷಕ್ಕೆ ಶೇಕಡಾ 8.35 ರ ಬಡ್ಡಿದರದಲ್ಲಿ ತಗೆದುಕೊಂಡರೆ ಮಾಸಿಕ EMI 9,760 ರೂಪಾಯಿ ಆಗುತ್ತದೆ. ಬಡ್ಡಿದರದ ಮೇಲೆ ನೇರವಾಗಿ ಮಾಸಿಕ EMI ನಿರ್ಧಾರ ಆಗುತ್ತೆ.
ಕೆನರಾ ಬ್ಯಾಂಕಿನಲ್ಲಿ ಗೃಹಸಾಲ ಮಾಡಲು ಬೇಕಾಗಿರುವ ದಾಖಲೆಗಳು
* ಉತ್ತಮ CIBIL ಸ್ಕೊರ್ ಹೊಂದಿರುವುದು ಕಡ್ಡಾಯ
* ಗುರುತಿನ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
* ಆಸ್ತಿಗೆ ಸಂಬಂದಿಸಿದ ಎಲ್ಲಾ ದಾಖಲೆಗಳು
* ಆದಾಯ ತೆರಿಗೆ ಪಾವತಿ ದಾಖಲೆಗಳು ಅಥವಾ ಅರ್ಜಿದಾರನ ಸಂಬಳದ ಸ್ಲಿಪ್
* ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷದಿಂದ 70 ವರ್ಷದ ಒಳಗೆ ಇರಬೇಕು.
ಮಹಿಳೆಯರ ಹೆಸರಲ್ಲಿ ಸಾಲ ಮಾಡಿದ್ರೆ ಹೆಚ್ಚು ಲಾಭ
ಕೆನರಾ ಬ್ಯಾಂಕಿನಲ್ಲಿ ಮಹಿಳೆಯರ ಹೆಸರಲ್ಲಿ ಗೃಹಸಾಲ ಮಾಡಿದರೆ ಇನ್ನಷ್ಟು ಹೆಚ್ಚಿನ ಲಾಭ ಗಳಿಸಿಕೊಳ್ಳಬಹುದು ಮತ್ತು ಮಹಿಳೆಯರ ಹೆಸರಲ್ಲಿ ಸಾಲ ಮಾಡಿದರೆ ಕಡಿಮೆ ಬಡ್ಡಿಗೆ ಸಾಲ ಪಡೆದುಕೊಳ್ಳಬಹುದು. ಸ್ನೇಹಿತರೇ, ಗೃಹ ಸಾಲ ತೆಗೆದುಕೊಳ್ಳುವ ಮೊದಲು ಬಡ್ಡಿದರ ಮತ್ತು EMI ಚೆನ್ನಾಗಿ ಲೆಕ್ಕ ಹಾಕಿ. ಹೆಚ್ಚಿನ ಮಾಹಿತಿಗೆ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ನೋಡಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

