Pan Card Mistake Fine: ಪಾನ್ ಕಾರ್ಡ್ (Pan Card) ದೇಶದ ಒಂದು ಪ್ರಮುಖವಾದ ವ್ಯಾವಹಾರಿಕ ಗುರುತಿನ ಚೀಟಿಯಾಗಿದ್ದು ಹಣಕಾಸಿನ ವಹಿವಾಟು ಮಾಡುವ ಎಲ್ಲರೂ ಕೂಡ ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ತೆರಿಗೆ ಪಾವತಿ ಮಾಡಲು, ಬ್ಯಾಂಕ್ ಖಾತೆ ತೆರೆಯಲು ಸೇರಿದಂತೆ ಅನೇಕ ವ್ಯಾವಹಾರಿಕ ಕೆಲಸಗಳನ್ನು ಪಾನ್ ಕಾರ್ಡ್ ಇಲ್ಲದೆ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ಪಾನ್ ಕಾರ್ಡ್ ಬಳಸಿಕೊಂಡು ವಂಚನೆ ಮಾಡುವ ಸಂಖ್ಯೆ ಬಹಳ ಹೆಚ್ಚಾದ ಕಾರಣ ಸರ್ಕಾರ ಕೆಲವು ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಕೇಂದ್ರದ ನಿಯಮದ ಪ್ರಕಾರ, ಇನ್ನುಮುಂದೆ ಪಾನ್ ಕಾರ್ಡ್ ಇದ್ದವರು ಈ ತಪ್ಪನ್ನು ಮಾಡಿದರೆ 10 ಸಾವಿರ ರೂಪಾಯಿಯ ತನಕ ದಂಡ ಪಾವತಿ ಮಾಡಬೇಕಾಗುತ್ತದೆ. ಹಾಗಾದರೆ ಪಾನ್ ಕಾರ್ಡ್ ಇದ್ದವರು ಯಾವ ತಪ್ಪು ಮಾಡಿದ್ರೆ 10 ಸಾವಿರ ರೂಪಾಯಿ ತನಕ ದಂಡ ಪಾವತಿ ಮಾಡಬೇಕು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಪಾನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ 10 ಸಾವಿರ ದಂಡ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಅಡಿ ಡ್ಯೂಪ್ಲಿಕೇಟ್ PAN ಹೊಂದಿರುವುದು. ನಕಲಿ ಪಾನ್ ಕಾರ್ಡ್ ಅಥವಾ ಬಳಕೆ ಇಲ್ಲದ ಪಾನ್ ಕಾರ್ಡ್ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿಷ್ಕ್ರಿಯ ಪಾನ್ ಕಾರ್ಡ್ ಬಳಕೆ ಮಾಡಿದರೆ ಕಡ್ಡಾಯವಾಗಿ 10 ಸಾವಿರ ರೂಪಾಯಿ ತನಕ ದಂಡ ಪಾವತಿ ಮಾಡಬೇಕು. ಪಾನ್ ಕಾರ್ಡ್ ಇಂದು ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರೆಗೆ ಅಗತ್ಯವಾದ ದಾಖಲೆ. ಇತ್ತೀಚಿನ ದಿನಗಳಲ್ಲಿ ತೆರಿಗೆ ಇಲಾಖೆಗೆ ವಂಚನೆ ಮಾಡುವ ಉದ್ದೇಶದಿಂದ ಕೆಲವರು ನಕಲಿ ಪಾನ್ ಕಾರ್ಡ್ ಬಳಕೆ ಮಾಡುತ್ತಿರುವುದು ಈಗ ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಡ್ಯೂಪ್ಲಿಕೇಟ್ ಪಾನ್ ಹೊಂದಿರುವುದು ಅಥವಾ ನಿಷ್ಕ್ರಿಯ ಪಾನ್ ಬಳಸುವುದು ದೊಡ್ಡ ತೊಂದರೆ ತರಬಹುದು.
ತೆರಿಗೆ ಇಲಾಖೆಯ ಸ್ಪಷ್ಟಿಕರಣ ಏನು?
ಭಾರತೀಯ ತೆರಿಗೆ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಬಳಕೆ ಮಾಡಬೇಕು ಮತ್ತು ಆತ ಜೀವನಪರ್ಯಂತ ಒಂದೇ ಸಂಖ್ಯೆ ಪಾನ್ ಸಂಖ್ಯೆ ಬಳಕೆ ಮಾಡಬೇಕು. ಹಲವು ಪಾನ್ ಕಾರ್ಡ್ ಹೊಂದಿದ್ದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಅಡಿ ₹10,000 ದಂಡ ವಿಧಿಸಲಾಗುತ್ತದೆ. ಅದೇ ರೀತಿಯಲ್ಲಿ ಪಾನ್ 2.0 ಯೋಜನೆಯನ್ನು ಇನ್ನಷ್ಟು ಕಠಿಣ ಕೂಡ ಮಾಡಲಾಗಿದೆ. ಒಂದುವೇಳೆ ಪಾನ್ ಕಾರ್ಡ್ ಕಳೆದುಹೋದರೆ ಅರ್ಜಿ ಸಲ್ಲಿಸಿ ಹಳೆಯ ಪಾನ್ ಕಾರ್ಡ್ ಮರಳಿ ಪಡೆದುಕೊಳ್ಳಬಹುದು ಮತ್ತು ಪಾನ್ ಸಂಖ್ಯೆ ಒಂದೇ ಆಗಿರುತ್ತದೆ.
ಆಧಾರ್ ಲಿಂಕ್ ಮಾಡದ ಪಾನ್ ಕಾರ್ಡ್ ರದ್ದಾಗಲಿದೆ
ಭಾರತ ಸರ್ಕಾರದ ಆದೇಶದ ಪ್ರಕಾರ, ಡಿಸೆಂಬರ್ 31 ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಆಗಿದೆ. ಡಿಸೆಂಬರ್ 31 ರೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಮತ್ತು ನಿಷ್ಕ್ರಿಯವಾದ ಪಾನ್ ಕಾರ್ಡ್ ಬಳಕೆ ಮಾಡಿದರೆ 10 ಸಾವಿರ ರೂಪಾಯಿಯ ತನಕ ದಂಡ ಪಾವತಿ ಮಾಡಬೇಕಾಗುತ್ತದೆ. ಡಿಸೆಂಬರ್ 31 ರೊಳಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ 1000 ದಂಡ ಪಾವತಿ ಮಾಡಬೇಕು.
ದಂಡದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ತೆರಿಗೆ ಇಲಾಖೆಯ ದಂಡದಿಂದ ತಪ್ಪಿಸಿಕೊಳ್ಳಲು ನಿಮ್ಮ ಪಾನ್ ಸ್ಟೇಟಸ್ ಪರಿಶೀಲಿಸಿ. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಆಧಾರ್ ಲಿಂಕ್ ಮಾಡಿ. ಡಿಸೆಂಬರ್ 31 2025 ಒಳಗೆ ಮಾಡದಿದ್ದರೆ ಪಾನ್ ನಿಷ್ಕ್ರಿಯವಾಗುತ್ತದೆ. ಎರಡು ಪಾನ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಒಂದು ಪಾನ್ ಕಾರ್ಡ್ ಮರಳಿ ಕೊಡುವುದು ಕಡ್ಡಾಯ. UTIITSL ಅಥವಾ NSDL ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಮಾಡಬಹುದು. ಇದರಿಂದ ದಂಡದಿಂದ ತಪ್ಪಿಸಿಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications

