Best Banks For Apply Home loan 2025: ಅದೆಷ್ಟೋ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಕಟ್ಟಬೇಕು ಅನ್ನುವ ಕನಸು ಇರುತ್ತದೆ. ಆದರೆ ಹಣಕಾಸಿನ ಸಮಸ್ಯೆಯಿಂದ ಅವರ ಕನಸು ಕನಸಾಗಿಯೇ ಉಳಿದುಕೊಳ್ಳುತ್ತದೆ. ಇದೀಗ ಸಾಮಾನ್ಯ ಜನರ ಕನಸು ಈಡೇರಲು ಉತ್ತಮ ಸಮಯ ಬಂದಿದೆ. ಹೌದು ಇದೀಗ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿದರ ಕಡಿಮೆ ಆಗಿದೆ. ಹಲವು ಖಾಸಗಿ ಮತ್ತು ಸರ್ಕಾರೀ ಬ್ಯಾಂಕುಗಳು ಕಡಿಮೆ ಬಡ್ಡಿಗೆ ಗೃಹಸಾಲ ನೀಡುತ್ತಿದ್ದು ನಾವೀಗ ಕಡಿಮೆ ಬಡ್ಡಿ ನೀಡುವ ಟಾಪ್ ಬ್ಯಾಂಕ್ ಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ರೆಪೋದರ ಕಡಿಮೆಯಾದ ಕಾರಣ ಕಡಿಮೆಯ ಗೃಹಸಾಲದ ಬಡ್ಡಿದರ
RBI ನ ರೆಪೋದರ ಇಳಿಕೆಯಿಂದಾಗಿ ಬ್ಯಾಂಕುಗಳು ಈಗ ಆಕರ್ಷಕ ಆಫರ್ ಗಳನ್ನ ನೀಡುತ್ತಿದೆ. ನವೆಂಬರ್ 2025 ರಿಂದ ಗೃಹ ಸಾಲದ ಬಡ್ಡಿದರ 7.35 % ರಿಂದ ಆರಂಭವಾಗುತ್ತದೆ, ಇದರಿಂದ ನಿಮ್ಮ ಮಾಸಿಕ EMI ಕಡಿಮೆಯಾಗುತ್ತದೆ. ಪ್ರಸ್ತುತ ಸಾರ್ವಜನಿಕ ಬ್ಯಾಂಕ್ ಗಳು ಖಾಸಗಿ ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರವನ್ನ ನೀಡುತ್ತಿದೆ. ಉದಾಹರಣೆಗೆ ನೀವು 50 ಲಕ್ಷ ಲೋನ್ ಅನ್ನು 20 ವರ್ಷಕ್ಕೆ 7.35 % ರ ಬಡ್ಡಿದರದಲ್ಲಿ ತೆಗೆದುಕೊಂಡರೆ EMI ಸುಮಾರು 39,770 ಆಗುತ್ತದೆ, ಆದರೆ ಅದೇ 50 ಲಕ್ಷ ಲೋನ್ ಅನ್ನು 20 ವರ್ಷಕ್ಕೆ 8.50% ರ ಬಡ್ಡಿದರದಲ್ಲಿ ತೆಗೆದುಕೊಂಡರೆ EMI ಸುಮಾರು 43,400 ಆಗುತ್ತದೆ. 3,630 ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ.
ಬ್ಯಾಂಕುಗಳ ಹೆಸರು ಮತ್ತು ಅವುಗಳು ನೀಡುವ ಬಡ್ಡಿದರ
* ಸೆಂಟ್ಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ – 7.35 % ರಿಂದ
* ಕೆನರಾ ಬ್ಯಾಂಕ್ – 7.40 % ರಿಂದ
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ – 7.45 % ರಿಂದ
* SBI, LIC ಹೌಸಿಂಗ್ ಫೈನಾನ್ಸ್ – 7.50 % ರಿಂದ
* ಪಂಜಾಬ್ ಆಂಡ್ ಸಿಂದ್ ಬ್ಯಾಂಕ್, IDBI ಬ್ಯಾಂಕ್ – 7.55 % ರಿಂದ
* ಟಾಟಾ ಕ್ಯಾಪಿಟಲ್ – 7.75 % ರಿಂದ
* ಕೋಟಕ್ ಮಹಿಂದ್ರಾ, Standard Chartered – 7.99 % ರಿಂದ
* HDFC – 7.90% ರಿಂದ
* ಆಕ್ಸಿಸ್ ಬ್ಯಾಂಕ್ – 8.35 % ರಿಂದ
* ಫೆಡರಲ್ ಬ್ಯಾಂಕ್ – 8.75 % ರಿಂದ
ಲೋನ್ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳು
ಸಾರ್ವಜನಿಕ ಬ್ಯಾಂಕ್ ಗಳು ಕಡಿಮೆ ಬಡ್ಡಿ ನೀಡುತ್ತವೆ ಆದರೆ ತ್ವರಿತ ಸೇವೆ ನೀಡುವುದಿಲ್ಲ, ಹಾಗೆ ಖಾಸಗಿ ಬ್ಯಾಂಕ್ ತ್ವರಿತ ಗ್ರಾಹಕರಿಗೆ ಸೇವೆಯನ್ನ ಒದಗಿಸುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕ ಬ್ಯಾಂಕ್ ಅನ್ನು ಆರಿಸಿಕೊಳ್ಳಿ. ಹೋಂ ಲೋನ್ ತೆಗೆದುಕೊಳ್ಳುವ ಮುನ್ನ ಹಲವು ಬ್ಯಾಂಕ್ ಗಳ ಬಡ್ಡಿದರವನ್ನ ಪರಿಶೀಲಿಸಿಕೊಳ್ಳಿ. ಲೋನ್ ಪ್ರೊಸೆಸಿಂಗ್ ಫೀ 0.35% ರಿಂದ 1% ವರೆಗೆ ಇರುತ್ತದೆ. 750 + ನಿಮ್ಮ ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿಗೆ ತ್ವರಿತವಾಗಿ ಸಾಲ ಸಿಗುತ್ತದೆ. ಈಗಲೇ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಮನೆಯನ್ನ ನಿರ್ಮಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ವೆಬ್ ಸೈಟ್ ಅನ್ನು ಪರಿಶೀಲಿಸಿ.
CIBIL ಸ್ಕೊರ್ ಕಾಪಾಡಿಕೊಳ್ಳುವುದು ಕಡ್ಡಾಯ
ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಬೇಕಾದರೆ ನೀವು ಉತ್ತಮವಾದ ಸಿಬಿಲ್ ಕಾಪಾಡಿಕೊಳ್ಳುವುದು ಬಹಳ ಅಗತ್ಯ ಆಗಿರುತ್ತದೆ. ಕಡಿಮೆ ಸಿಬಿಲ್ ಸ್ಕೊರ್ ಹೊಂದಿರುವ ವ್ಯಕ್ತಿ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುತ್ತಿಲ್ಲ ಅನ್ನುವುದಕ್ಕೆ ಒಂದು ಸಾಕ್ಷಿಯಾಗಿರುತ್ತದೆ. ಗೃಹಸಾಲ, ವಾಹನಸಳ ಅಥವಾ ವಯಕ್ತಿಕ ಸಾಲ ಪಡೆದುಕೊಂಡ ಸಮಯದಲ್ಲಿ ಆ ಸಾಲ ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದು ಬಹಳ ಅಗತ್ಯ.
Disclaimer: This information is provided for awareness purposes only. For personalised legal advice, consult a qualified professional and refer to official government notifications

