Delhi Blast Operation Sindoor Restart: ನವೆಂಬರ್ 10 ರಂದು ದೆಹಲಿಯ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ ನಡೆದ ಕಾರು ಸ್ಫೋಟ ಸದ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಸ್ಪೋಟದ ಹಿಂದೆ ಅನೇಕ ಪಿತೂರಿ ಎಂದು ಅನ್ನುವುದು ಸಕಷ್ಟು ಜನರ ಅಭಿಪ್ರಾಯವಾಗಿದೆ. ದೆಹಲಿ ಸ್ಪೋಟದಲ್ಲಿ ಸುಮಾರು 8 ರಿಂದ 10 ಜನರು ಪ್ರಾಣ ಕಳೆದುಕೊಂಡಿದ್ದು 20 ಕ್ಕೂ ಅಧಿಕ ಜನ ತೀವ್ರವಾದ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಶದ ಅನೇಕ ರಾಜಕೀಯ ಗಣ್ಯರು ಮತ್ತು ಅನೇಕ ನಾಯಕರು ಈ ಸ್ಪೋಟಕ್ಕೆ ಸಂಬಂಧಿಸಿದಂತೆ ಸಂತಾಪವನ್ನ ಸೂಚಿಸಿದ್ದಾರೆ.
ದೆಹಲಿಯಲ್ಲಿ ಈ ಸ್ಫೋಟ ಹೇಗೆ ನಡೆಯಿತು?
ನವೆಂಬರ್ ಸಂಖ್ಯೆ ಸುಮಾರು 6:52 ಸಮಯದಲ್ಲಿ ಹುಂಡೈ I20 ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಬಂದುನಿಂತ ಕೆಲವೇ ಸಮಯದಲ್ಲಿ ಕಾರ್ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ ಸುಮಾರು 8 ರಿಂದ 10 ಮಂದಿ ಪ್ರಾಣ ಕಳೆದುಕೊಂಡರೆ, ಸುಮಾರು 20 ಜನರಿಗೆ ತೀವ್ರವಾದ ಗಾಯವಾಗಿದೆ. ಈ ಸ್ಪೋಟಕ್ಕೆ ಸುಮಾರು 6 ಮತ್ತು 3 ರಿಕ್ಷಾಗಳು ಹೊತ್ತಿ ಉರಿದಿದೆ. ದೆಹಲಿ ಪೊಲೀಸರು ಈಗಾಗಲೇ ಯುಎಪಿಎ (UAPA) ಮತ್ತು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಎನ್ಎಸ್‌ಜಿ, ಎನ್‌ಐಎ, ಫೊರೆನ್ಸಿಕ್ ತಂಡಗಳು ಸ್ಥಳದಲ್ಲಿ ತನಿಖೆ ನಡೆಸುತ್ತಿವೆ. ಇನ್ನು ಸ್ಪೋಟಕ್ಕೆ ಬಳಸಿದ ವಸ್ತು ಯಾವುದು ಅನ್ನುವುದರ ಬಗ್ಗೆ ಇನ್ನೂ ಕೂಡ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಈ ಸ್ಪೋಟದ ಹಿಂದೆ ಇದೆಯಾ ಉಗ್ರರ ಕೈವಾಡ?
ದೆಹಲಿಯ ಈ ಸ್ಪೋಟದ ಹಿಂದೆ ಉಗ್ರರ ಕೈವಾಡ ಇದೆ ಅನ್ನುವುದು ಸಾಕಷ್ಟು ಜನರ ಮತ್ತು ಸಾಕಷ್ಟು ನಾಯಕರ ಅಭಿಪ್ರಾಯ ಆಗಿದೆ. ಈ ವರ್ಷದ ಮೇ ತಿಂಗಳಲ್ಲಿ ಪಹಲಗಾಂ ದಾಳಿಯ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ್‌ನಲ್ಲಿ ಪಾಕಿಸ್ತಾನದಲ್ಲಿರುವ ಅನೇಕ ಉಗ್ರರ ತಾಣಗಳನ್ನು ಧ್ವಂಸ ಮಾಡಲಾಗಿದ್ದು, ಈ ಕಾರಣಗಳಿಂದ ಪಾಕಿಸ್ತಾನದ ಉಗ್ರರು ಭಾರತಕ್ಕೆ ಅನೇಕ ಬೆದರಿಕೆ ಕೂಡ ನೀಡಿದ್ದರು. ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಕಾರಣಕ್ಕೆ ಉಗ್ರರೇ ಈ ಕೃತ್ಯ ನಡೆಸಿರಬಹುದು ಅನ್ನುವುದು ಹಲವರ ಅಭಿಪ್ರಾಯವಾಗಿದೆ.
ಮತ್ತೆ ನಡೆಯುತ್ತಾ ಆಪರೇಷನ್ ಸಿಂಧೂರ?
ದೆಹಲಿಯ ಈ ಸ್ಪೋಟದ ಹಿಂದೆ ಉಗ್ರರ ಕೈವಾಡ ಇದ್ದರೆ ಭಾರತ ಮತ್ತೆ ಪಾಕಿಸ್ತಾನದ ಉಗ್ರರ ಮೇಲೆ ಆಪರೇಷನ್ ಸಿಂಧೂರ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ (Rajanath Singh) ಅವರು ಎಚ್ಚರಿಕೆಯನ್ನು ಕೊಟ್ಟಿದ್ದರು. ಒಂದುವೇಳೆ ಈ ಸ್ಪೋಟದ ಹಿಂದೆ ಉಗ್ರರ ಕೈವಾಡವಿದ್ದರೆ ಪಾಕಿಸ್ತಾನ ಇದರ ನೇರ ಹೊಣೆ ತಗೆದುಕೊಳ್ಳಬೇಕು ಮತ್ತು ಇದರಿಂದ ಪಾಕಿಸ್ತಾನ ತಕ್ಕ ಪಾಠ ಕಲಿಯಬೇಕಾಗುತ್ತದೆ. ಇದು ಉಗ್ರರು ನಡೆಸಿದ ಸ್ಪೋಟವಾದರೆ ಮತ್ತೆ ಭಾರತ ಆಪರೇಷನ್ ಸಿಂಧೂರ ನಡೆಸಿದರೆ ನಡೆಸಬಹುದು.
ಸಾಕಷ್ಟು ಸಮಯಗಳಿಂದ ಉಗ್ರರಿಗೆ ಬೆಂಬಲಿಸುತ್ತಾ ಬಂದಿರುವ ಪಾಕಿಸ್ತಾನ
ಪಾಕಿಸ್ತಾನ ದೇಶ ಸಾಕಷ್ಟು ಸಮಯಗಳಿಂದ ಉಗ್ರರಿಗೆ ಬೆಂಬಲ ನೀಡುತ್ತಾ ಬಂದಿದೆ ಮತ್ತು ಅದನ್ನು ಸಮರ್ಥನೆ ಕೂಡ ಮಾಡಿಕೊಂಡು ಬಂದಿದೆ. ಪಾಕಿಸ್ತಾನಕ್ಕೆ ಎಷ್ಟೇ ಎಚ್ಚರಿಕೆ ನೀಡಿದರು ಇಂತಹ ಹೀನ ಕೃತ್ಯ ನಡೆಸುತ್ತಿದ್ದು ಭಾರತಕ್ಕೆ ಮತ್ತೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಅನ್ನುವುದು ಸಾಕಷ್ಟು ಜನರ ಮತ್ತು ರಾಜಕೀಯ ನಾಯಕರ ಅಭಿಪ್ರಾಯವಾಗಿದೆ. ದೆಹಲಿ ಸ್ಪೋಟದ ಬೆನ್ನಲ್ಲೇ ಈಗ ಬೆಂಗಳೂರು, ಮುಂಬೈ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications

