BSNL 1 Rupee Plan: ಇತ್ತೀಚಿನ ದಿನಗಳಲ್ಲಿ ಏರ್ಟೆಲ್, ಜಿಯೋ, BSNL, VI ಗಳು ತಮ್ಮ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಡಿಮೆ ಬೆಲೆಗೆ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನ ಘೋಷಣೆ ಮಾಡುತ್ತಿರುತ್ತವೆ. ಈಗಾಗಲೇ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಖಾಸಗಿ ಕಂಪನಿಗಳು ನೀಡುವ ರಿಚಾರ್ಜ್ ಯೋಜನೆಯನ್ನು ಮೀರಿಸುವ ಹಲವು ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದೀಗ ಹೊಸ ಸಿಮ್ ಖರೀದಿಸುವವರಿಗೆ ಅಥವಾ ಬೇರೆ ಸಿಮ್ ನಿಂದ BSNL ಗೆ ಬದಲಾಯಿಸಲು ಯೋಚನೆ ಮಾಡುತ್ತಿರುವವರಿಗೆ ಉತ್ತಮ ರಿಚಾರ್ಜ್ ಯೋಜನೆಯನ್ನು BSNL ಜಾರಿಗೆ ತಂದಿದೆ. ಹಾಗಾದರೆ ನಾವೀಗ ಆ ರಿಚಾರ್ಜ್ ಯೋಜನೆ ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
30 ದಿನಗಳ ಅವಧಿಗೆ 1 ರೂಪಾಯಿ ರಿಚಾರ್ಜ್ ಪ್ಲಾನ್
ಇದೀಗ BSNL ತನ್ನ ಗ್ರಾಹಕರಿಗೆ ಕೇವಲ 1 ರೂಪಾಯಿಗೆ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ 1 ರೂಪಾಯಿ ಯೋಜನೆಯಲ್ಲಿ ನಿಮಗೆ 30 ದಿನಗಳ ಅನಿಯಮಿತ ಕರೆ, ದಿನಕ್ಕೆ 2GB ಡೇಟಾ, ದೈನಂದಿನ 100 SMS ಗಳನ್ನ ಪೂರ್ತಿಯಾಗಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆಯಾದ “ಪ್ರೀಡಂ ಆಫರ್” ಈಗ ದೀಪಾವಳಿ ಬೊನಂಜ ಹೆಸರಿನಲ್ಲಿ ಮರುಪ್ರಾರಂಭಿಸಲಾಗಿದೆ. ಕೇವಲ ಒಂದು ರೂಪಾಯಿಯ ಈ ರಿಚಾರ್ಜ್ ಯೋಜನೆ ಸರ್ಕಾರೀ ಸೌಮ್ಯದ BSNL ನಿಂದ ಬಂದಿರುವ ಅತಿ ಕಡಿಮೆ ರಿಚಾರ್ಜ್ ಯೋಜನೆ ಆಗಿದೆ.
ಈ ಯೋಜನೆಯ ಲಾಭ
* 1 ರೂಪಾಯಿಗೆ ಪೂರ್ತಿ ತಿಂಗಳು ಉಚಿತ ಸೇವೆ
* ದಿನಕ್ಕೆ 2GB ಡೇಟಾ, ಡೇಟಾ ಮುಗಿದ ನಂತರ ಸ್ಪೀಡ್ ಕಡಿಮೆ ಆಗುತ್ತದೆ ಆದರೆ ಸಂಪೂರ್ಣವಾಗಿ ನಿಲ್ಲುವುದಿಲ್ಲ.
* ಅನಿಯಮಿತ ಕರೆ, ದೇಶದ ಯಾವುದೇ ನೆಟ್ವರ್ಕ್, ರೋಮಿಂಗ್ ಸೇರಿದಂತೆ ಲಭ್ಯವಾಗುತ್ತದೆ.
ಯಾರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು..?
BSNL ಜಾರಿಗೆ ತಂದಿರುವ ಈ ಯೋಜನೆಯ ಲಾಭವನ್ನು ಹೊಸದಾಗಿ ಸಿಮ್ ಅನ್ನು ಖರೀದಿ ಮಾಡುವವರಿಗೆ ಹಾಗೆ ಬೇರೆ ಕಂಪನಿಯಿಂದ ಪೋರ್ಟ್ ಮಾಡುವವರು ಪಡೆದುಕೊಳಬಹುದು. ಹಳೆಯ ಗ್ರಾಹಕರಿಗೆ ಈ ಯೋಜನೆ ಅನ್ವಯವಾಗುದಿಲ್ಲ.
ಈ ರೀತಿಯಾಗಿ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಿ
ಮೊದಲು BSNL ಕಸ್ಟಮರ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ ಅಥವಾ ರಿಟೇಲರ್ ಗೆ ಭೇಟಿ ನೀಡಿ ಉಚಿತ 4G ಸಿಮ್ ಅನ್ನು ಪಡೆದುಕೊಂಡು 1 ರೂಪಾಯಿ ರಿಚಾರ್ಜ್ ಮಾಡಿಸಿ, ಅಗತ್ಯ ದಾಖಲೆಯೊಂದಿಗೆ KYC ಅನ್ನು ಪೂರ್ಣಗೊಳಿಸಿ. ಯೋಜನೆಯ ಲಾಭವನ್ನ ಪಡೆದುಕೊಳ್ಳಿ. ಈ ಯೋಜನೆ ಸ್ವಾತಂತ್ರ್ಯ ದಿನದಿಂದ ಅಂದರೆ ಆಗಸ್ಟ್ ಮತ್ತೆ ಸೆಪ್ಟೆಂಬರ್ ಹಾಗೆ ದೀಪಾವಳಿ ಸಮಯದಲ್ಲಿ ಅಂದರೆ ಅಕ್ಟೋಬರ್ ನಲ್ಲಿ ಲಭ್ಯವಿತ್ತು. ಪ್ರಸ್ತುತ ಈ ಯೋಜನೆ ಲಭ್ಯವಿದೆಯೇ ಅಥವಾ ಇಲ್ಲವಾ ಎಂಬುದನ್ನು ನಿಮ್ಮ ಹತ್ತಿರದ BSNL ಕಚೇರಿಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

