PM Kisan Samman Nidhi Scheme Farmers Name Delete: ಕೇಂದ್ರದ ನರೇಂದ್ರ ಮೋದಿ (Narendra Modi) ಸರ್ಕಾರ ದೇಶದ ರೈತರಿಗೆ ಹಲವಾರು ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ PM ಕಿಸಾನ್ ಯೋಜನೆ ಕೂಡ ಒಂದಾಗಿದೆ. ಹೌದು ಕೇಂದ್ರ ಸರ್ಕಾರದ PM ಕಿಸಾನ್ ಯೋಜನೆಯ ಅಡಿಯಲ್ಲಿ ದೇಶದ ರೈತರಿಗೆ ವಾರ್ಷಿಕವಾಗಿ 6000 ಹಣವನ್ನ 3 ಕಂತುಗಳಾಗಿ ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ಅನರ್ಹ ರೈತರು ಕೂಡ ಅರ್ಜಿ ಸಲ್ಲಿಸಿ ಹಣವನ್ನ ಪಡೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಕ್ಕಾಗಿ ಅನರ್ಹ ರೈತರ ಹೆಸರುಗಳನ್ನ ಈ ಯೋಜನೆಯ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದೀಗ ನೀವು ರೈತರಾಗಿದ್ದರೆ ನಿಮ್ಮ ಹೆಸರು ಈ ಯೋಜನೆಯಲ್ಲಿ ಇದೆಯೇ..? ಇಲ್ಲವೇ..? ಎಂಬುದನ್ನ ಪರಿಶೀಲಿಸಿಕೊಳ್ಳಿ. ಈ ಬಗ್ಗೆ ಮಾಹಿತಿಯನ್ನ ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
35 ಲಕ್ಷಕ್ಕೂ ಕ್ಕೂ ಅಧಿಕ ರೈತರ ಹೆಸರು ಡಿಲೀಟ್
2018 ರಲ್ಲಿ PM ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಭಾರತಾದ್ಯಂತ 9.7 ಕೋಟಿಗೂ ಅಧಿಕ ರೈತರ ಖಾತೆಗೆ ನೇರವಾಗಿ ಹಣವನ್ನ ಜಮಾಮಾಡುತ್ತಿದೆ. ಈ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಹಲವು ರೈತರು ಅರ್ಜಿಯನ್ನು ಸಲ್ಲಿಸಿ ಹಣವನ್ನ ಪಡೆದುಕೊಳುತಿದ್ದಾರೆ. ಇದನ್ನು ತಿಳಿದ ಕೇಂದ್ರ ಸರ್ಕಾರ ರಾಷ್ತ್ರೀಯ ಮಟ್ಟದಲ್ಲಿ ಪರಿಶೀಲನೆಯನ್ನ ನೆಡೆಸಿ 35.44 ಲಕ್ಷ ಅನರ್ಹರ ಹೆಸರನ್ನು ತೆಗೆದುಹಾಕಿದೆ.
ಈ ರೀತಿಯಾಗಿ ಪರೀಕ್ಷಿಸಿಕೊಳ್ಳಿ
PM ಕಿಸಾನ್ ಯೋಜನೆಯ ಅಡಿಯಲ್ಲಿ ನಿಮ್ಮ ಹೆಸರು ಇದೆಯೇ..? ಇಲ್ಲವೇ..? ಎನ್ನುದನ್ನು ತಿಳಿದುಕೊಳ್ಳಲು https://pmkisan.gov.in/ ಗೆ ಭೇಟಿ ನೀಡಿ KNOW YOUR STATUS ಅಥವಾ ELIGIBILITY STATUS ಗೆ ಹೋಗಿ ನಿಮ್ಮ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ.
PM ಕಿಸಾನ್ ಯೋಜನೆಯ ಅರ್ಹತೆ..?
* ರೈತರಾಗಿರಬೇಕು
* ತೆರಿಗೆ ಪಾವತಿಸಬಾರದು
* ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು
* e -kyc ಪೂರ್ಣಗೊಳಿಸಬೇಕು
PM ಕಿಸಾನ್ 21 ನೇ ಕಂತಿನ ಹಣ
PM ಕಿಸಾನ್ ಯೋಜನೆಯ 21 ನೇ ಕಂತಿನ ಹಣ ಇನ್ನು ಬಿಡುಗಡೆಯಾಗಿಲ್ಲ, ಇದು ನವೆಂಬರ್ ನಲ್ಲಿ ಬಿಡುಗಡೆಯಾಗಬಹುದು. ಈಗಲೇ ನಿಮ್ಮ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಅನ್ನುವುದನ್ನು ಪರೀಕ್ಷಿಸಿಕೊಳ್ಳಿ.

