Son Rights Om Companssionate Employement: ದೇಶದಲ್ಲಿ ಸರ್ಕಾರೀ ನೌಕರ ಸೇವೆಯಲ್ಲಿರುವಾಗ ನಿಧನ ಹೊಂದಿದರೆ ಆತನ ಉದ್ಯೋಗವನ್ನ ಆತನ ಕುಟುಂಬದ ಸದಸ್ಯರಿಗೆ ನೀಡಲಾಗುತ್ತದೆ. ಈ ನಿಯಮವು ಕುಟುಂಬಕ್ಕೆ ಆರ್ಥಿಕ ಆಸರೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಅನುಕಂಪ ಆಧಾರಿತ ಉದ್ಯೋಗವನ್ನು ಸಾಮಾನ್ಯವಾಗಿ ಮಗಳಿಗೆ ನೀಡಲಾಗುತ್ತದೆ. ಆದರೆ ಈಗ ಆ ಹಕ್ಕು ಮಗನಿಗೂ ಇದೆ ಎಂದು ಸುಪ್ರೀಮ್ ಕೋರ್ಟ್ ಆದೇಶವನ್ನ ಹೊರಡಿಸಿದೆ. ಅನುಕಂಪದ ಆಧಾರದ ಮೇಲೆ ನೀಡಲಾಗುವ ಸರ್ಕಾರೀ ನೌಕರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗ ಮಹತ್ವದ ತೀರ್ಪು ನೀಡಿದೆ. ನಾವೀಗ ಅನುಕಂಪನ ಆಧಾರಿತ ಉದ್ಯೋಗದ ಬಗ್ಗೆ ಸುಪ್ರೀಮ್ ಕೋರ್ಟ್ ಹೊರಡಿಸಿರುವ ಆದೇಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ತೀರ್ಪಿನ ಹಿನ್ನೆಲೆ
ಮಧ್ಯ ಪ್ರದೇಶದ ಓರ್ವ ಸರ್ಕಾರೀ ನೌಕರನಾದ ಅಶೋಕ್ ಅವಸ್ಥಿ ಮರಣ ಹೊಂದಿದ್ದಾರೆ. ಈಗ ಆತನ ಮಗ ಆಶೀಶ್ ಅವಸ್ಥಿ ಅವರು ತಂದೆ ಸಾವಿನ ನಂತರ ಅನುಕಂಪ ಆಧಾರಿತ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಅರ್ಜಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ, ಏಕೆಂದರೆ ನಿಯಮದ ಪ್ರಕಾರ, ಅನುಕಂಪನ ಆಧಾರಿತ ಉದ್ಯೋಗವನ್ನು ವಿಧವೆಯರಿಗೆ ಅಥವಾ ವಿಚ್ಚೇದಿತ ಮಗಳಿಗೆ ನೀಡಬೇಕು ಎಂದಿತ್ತು. ಹಾಗಾಗಿ ಮಗನಿಗೆ ಉದ್ಯೋಗವನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದೀಗ ಆಶೀಶ್ ಅವರು ಹೈ ಕೋರ್ಟ್ ಗೆ ಮನವಿ ಇಟ್ಟಿದ್ದಾರೆ. ಹೈ ಕೋರ್ಟ್ ಆಶೀಶ್ ಅವರ ಪರವಾಗಿ ತೀರ್ಪು ನೀಡಿದೆ. ಇದಕ್ಕೆ ಸುಪ್ರೀಮ್ ಕೋರ್ಟ್ ಮೇಲ್ಮನವಿ ಸಲ್ಲಿಸಿತು.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ?
ನವೆಂಬರ್ 2025 ರಲ್ಲಿ ಜಸ್ಟಿಸ್ ಹೃಷಿಕೇಶ್ ರಾಯ್ ಮತ್ತು SV ಭಟ್ಟಿ ಅವರು ಈ ಪ್ರಕರಣದ ವಿಚಾರಣೆಯನ್ನು ನೆಡೆಸಿದ್ದಾರೆ. ಇದರಲ್ಲಿ ಕೋರ್ಟ್ ಸ್ಪಷ್ಟವಾಗಿ ” ಕರುಣಾಧಾರಿತ ಉದ್ಯೋಗದ ನಿಯಮದಲ್ಲಿ ಲಿಂಗ ಭೇದ ಭಾವಕ್ಕೆ ಅವಕಾಶ ಇರುವುದಿಲ್ಲ, ಮಗ ಅಥವಾ ಮಗಳು ಯಾರು ಬೇಕಾದರೂ ಆ ಉದ್ಯೋಗವನ್ನು ಪಡೆದುಕೊಳ್ಳುವ ಹಕ್ಕು ಇದೆ ” ಎಂದು ಹೇಳಿಕೆ ನೀಡಿದೆ. ಈ ತೀರ್ಪು ಸಂವಿಧಾನದ 14, 15,16 ನೇ ವಿಧಿಯ ಅಡಿಯಲ್ಲಿ ಲಿಂಗ ಸಮಾನತೆಯನ್ನು ಒತ್ತಿ ಹೇಳುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಲಿಂಗ ಭೇದವಿಲ್ಲದೆ ಕುಟುಂಬದ ಯಾವುದೇ ಸದಸ್ಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದು ಯಾರಿಗೆ ಉಪಯೋಗವಾಗುತ್ತದೆ..?
ಪ್ರತಿ ವರ್ಷ ದೇಶದಲ್ಲಿ ಸಾವಿರಾರು ಸರ್ಕಾರೀ ನೌಕರರು ಮರಣ ಹೊಂದುತ್ತಾರೆ. ಅವರ ಕುಟುಂಬದಲ್ಲಿ ಮಗನೆ ಏಕೈಕ ಆಧಾರವಾಗಿರುತ್ತಾನೆ. ಅಂತಹ ಕುಟುಂಬಗಳಿಗೆ ಈ ತೀರ್ಪು ಬಹಳ ಉಪಯುಕ್ತವಾಗಿತ್ತದೆ. ಕೆಲವು ಕುಟುಂಬದಲ್ಲಿ ಮಗನೆ ಆ ಕುಟುಂಬದ ವಾರಸುದಾರ ಆಗಿರುತ್ತದೆ, ಅಂತಹ ಕುಟುಂಬದಲ್ಲಿ ತಂದೆಯಾದವನು ಮರಣ ಹೊಂದಿದರೆ ಮಗ ತಂದೆಯ ಪರವಾಗಿ ಅನುಕಂಪದ ಉದ್ಯೋಗ ಪಡೆದುಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

