Karnataka e-pouti Khata 2025: ಗ್ರಾಮೀಣ ಭಾಗದ ಜನರಿಗೆ ಸರ್ಕಾರ ಹಲವು ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಅದರಲ್ಲಿ ಪೌತಿಖಾತೆ ಆಂದೋಲನ ಕೂಡ ಒಂದಾಗಿದೆ. ಪಿತ್ರರ್ಜಿತ ಆಸ್ತಿಯ ಹಕ್ಕನ್ನು ರೈತರ ಹೆಸರಿಗೆ ಮಾಡುವುದು ಇದರ ಮೂಲ ಉದ್ದೇಶ ಆಗಿದೆ. ನಾವೀಗ ಪೌತಿಖಾತೆ ಆಂದೋಲನದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ಪೌತಿಖಾತೆ ಆಂದೋಲನ
ಪೌತಿಖಾತೆ ಆಂದೋಲನ ಎಂದರೆ ರಾಜ್ಯ ಸರ್ಕಾರ ಪ್ರಾರಂಭಿಸಿದ ಒಂದು ಯೋಜನೆಯಾಗಿದ್ದು, ಮೃತ ರೈತನ ಹೆಸರಿನಲ್ಲಿ ಇರುವ ಜಮೀನಿನ ಮಾಲೀಕತ್ವವನ್ನು ಅವರ ಕಾನೂನು ಬದ್ದ ವಾರಸುದಾರರ ಹೆಸರಿಗೆ ಮಾಡುವ ಒಂದು ಯೋಜನೆಯಾಗಿದೆ. ಈ ಯೋಜನೆಯ ಮೂಲಕ ರೈತರು ಮನೆಯಲ್ಲೇ ಕುಳಿತುಕೊಂಡು ವಾರಸುದಾರರ ಹೆಸರಿಗೆ RTC ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಇದು ರಾಜ್ಯದ 42 ಲಕ್ಷಕ್ಕೂ ಅಧಿಕ ಮೃತರ ಖಾತೆಯನ್ನು ಸರಿಪಡಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಪೌತಿಖಾತೆ ಆಂದೋಲನದ ಹಿನ್ನೆಲೆ
ಕಂದಾಯ ಸಚಿವರಾಗಿರುವ ಕೃಷ್ಣಬೈರೇಗೌಡ ಅವರು ನೀಡಿದ ಮಾಹಿತಿಯಂತೆ, ರಾಜ್ಯದಲ್ಲಿ 42 ಲಕ್ಷ ಜಮೀನುಗಳು ರೈತರ ಹೆಸರಿನಲ್ಲಿ ಉಳಿದುಕೊಂಡಿದೆ. ಇದರಿಂದ ರೈತರು ಬ್ಯಾಂಕ್ ಸಾಲ, ಬೆಳೆ ವಿಮೆ ಮತ್ತು ಇತರ ಸರಕಾರಿ ಸೌಲಭ್ಯ ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಪೌತಿಖಾತೆ ಆಂದೋಲನವನ್ನು ಜಾರಿಗೆ ತರಲಾಗಿದೆ.
ಮನೆ ಬಾಗಿಲಿಗೆ ಇ-ಪೌತಿಖಾತೆ
2025-26 ರ ಬಜೆಟ್ ನಲ್ಲಿ ಇ-ಪೌತಿ ಅಭಿಯಾನ ಘೋಷಣೆಯಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಆಧಾರ್ ಲಿಂಕ್ ಮೂಲಕ ಮೃತರ ಖಾತೆಯನ್ನು ಗುರುತಿಸಿ, ಕುಟುಂಬದ ಸದಸ್ಯರೊಂದಿಗೆ ಚರ್ಚೆ ಮಾಡಿ ಕಾನೂನು ಬದ್ದ ವಾರಸುದಾರನನ್ನು ಖಚಿತಪಡಿಸಿಕೊಳ್ಳುತ್ತಾರೆ. ಇದುವರೆಗೆ 7.96 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದೆ.
ವಾರಸು ವರ್ಗಾವಣೆ ಪ್ರಕ್ರಿಯೆ ಹಂತ
ಮೊದಲು Bhoomi ಪೋರ್ಟಲ್ ಗೆ ಭೇಟಿ ನೀಡಿ (https://landrecords.karnataka.gov.in/) ಲಾಗಿನ್ ಮಾಡಿಕೊಳ್ಳಿ, ಆಧಾರ್ ಸಂಖ್ಯೆಯೊಂದಿಗೆ ಖಾತಾ ಸಂಖ್ಯೆಯನ್ನು ಹುಡುಕಿ, ವಾರಸುದಾರನ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮತ್ತು ಕುಟುಂಬ ವೃತ್ತಾಂತ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಅಧಿಕಾರಿಗಳು ಸಮೀಕ್ಷೆ ನೆಡೆಸಿ 15 / 30 ದಿನದಲ್ಲಿ RTC ಅಪ್ಡೇಟ್ ಮಾಡಲಾಗುತ್ತದೆ.
ಭೂ ದಾಖಲೆಗಳ ಡಿಜಿಟಲೀಕರಣ
ಕಂದಾಯ ಇಲಾಖೆಯಲ್ಲಿ ದಾಖಲೆಗಳು ಕಳೆದುಹೋಗುವ ಸಮಸ್ಯೆಗೆ ಭೂ ಸುರಕ್ಷತೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದುವರೆಗೆ 50 ಕೋಟಿ ಪುಟಗಳನ್ನ ಸ್ಕ್ಯಾನ್ ಮಾಡಲಾಗಿದ್ದು ಇನ್ನು 50 ಕೋಟಿ ಬಾಕಿ ಇದೆ. ಇದರಿಂದ ಎಲ್ಲ ದಾಖಲೆಗಳು ಆನ್ಲೈನ್ ಅಲ್ಲಿ ಲಭ್ಯವಾಗುತ್ತದೆ. e-ಕಚೇರಿ ವ್ಯವಸ್ಥೆಯೊಂದಿಗೆ ಕಾಗದ ರಹಿತ ಕೆಲಸಗಳು ಆರಂಭವಾಗಿದೆ. ಹಾಗೆ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ಟಾಪ್ ಗಳನ್ನ ನೀಡಲಾಗುತ್ತಿದೆ.

