TDS Rules On Property Purchase And Sale: ಆಸ್ತಿ ಖರೀದಿ ಮತ್ತು ಮಾರಾಟ ಸಂಬಂಧಿಸಿದಂತೆ ಭಾರತ ಸರ್ಕಾರ ಈಗಾಗಲೇ ಹಲವು ನಿಯಮಗಳನ್ನು ಮತ್ತು ಮಾರ್ಗಸೂಚಿಯನ್ನು ಜಾರಿಗೆ ತಂದಿದೆ ಮತ್ತು ಆ ನಿಯಮಗಳ ಅಡಿಯಲ್ಲಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಈಗ ಆಸ್ತಿ ಖರೀದಿ ಮಾಡುವವರಿಗೆ ಕೆಲವು ತೆರಿಗೆ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ ಮತ್ತು ಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರು ಈ ತೆರಿಗೆ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಅವರು ತೆರಿಗೆ ಇಲಾಖೆಯಿಂದ ಸಮಸ್ಯೆ ಎದುರಿಸಬೇಕಾಗುತ್ತದೆ.
ಆಸ್ತಿ ಖರೀದಿ ಮತ್ತು ಮಾರಾಟಕ್ಕೆ TDS ನಿಯಮ
ಹೌದು, ಭಾರತೀಯ ತೆರಿಗೆ ಇಲಾಖೆ ಈಗ ಆಸ್ತಿ ಖರೀದಿ ಮತ್ತು ಮಾರಾಟದ ಮೇಲೆ ಇರುವ TDS ನಿಯಮದಲ್ಲಿ ಬದಲಾವಣೆ ಮಾಡಿದೆ. ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಯಾವುದೇ ಮೋಸ ಆಗಬಾರದು ಮತ್ತು ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಪಾರದರ್ಶಕತೆ ಇರಬೇಕು ಅನ್ನುವ ಉದ್ದೇಶದಿಂದ ದೇಶದಲ್ಲಿ ಈಗ ಆಸ್ತಿ ಮಾರಾಟಕ್ಕೆ ಮತ್ತು ಖರೀದಿಗೆ ಸಂಬಂಧಿಸಿದಂತೆ ಹೊಸ TDS ನಿಯಮ ಜಾರಿಗೆ ತರಲಾಗಿದೆ. ಇನ್ನು 2025 ರ ವರ್ಷದಲ್ಲಿ ಜಾರಿಗೆ ಬಂದಿರುವ ನಿಯಮದ ಪ್ರಕಾರ, 50 ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ಆಸ್ತಿ ಖರೀದಿ ಮಾಡಿದರೆ ಶೇಕಡಾ 1 ರಷ್ಟು TDS ಅನ್ನು ಕಡಿತ ಮಾಡಲು ತೆರಿಗೆ ಇಲಾಖೆ ಆದೇಶ ಹೊರಡಿಸಿದೆ.
ಇನ್ನು ಒಂದು ಆಸ್ತಿ ಇಬ್ಬರು ಅಥವಾ ಅಧಿಕ ಜನರ ಒಡೆತನದಲ್ಲಿದ್ದರೆ ಮತ್ತು ಅವರ ಆಸ್ತಿ ಮೌಲ್ಯ 50 ಲಕ್ಷಕ್ಕಿಂತ ಕಡಿಮೆ ಇದ್ದರೆ ಅವರು ಯಾವುದೇ TDS ಕಟ್ಟುವ ಅಗತ್ಯ ಇರುವುದಿಲ್ಲ. ಇನ್ನು ಒಂದುವೇಳೆ ಆಸ್ತಿ ಮೌಲ್ಯ 50 ಲಕ್ಷಕ್ಕಿಂತ ಹೆಚ್ಚಿದ್ದು ಪಾಲುದಾರಿಕೆಯಲ್ಲಿ 50 ಲಕ್ಷಕ್ಕಿಂತ ಕಡಿಮೆ ಹಣ ಬಂದರೆ ಅವರು ಕೂಡ TDS ಕಟ್ಟುವ ಅಗತ್ಯ ಇರುವುದಿಲ್ಲ. ಇನ್ನು ಆದಾಯ ತೆರಿಗೆ ನಿಯಮದ ಪ್ರಕಾರ ಆಸ್ತಿ ಖರೀದಿ ಮತ್ತು ಮಾರಾಟದ ಸಮಯದಲ್ಲಿ ಕೆಲವು ದಾಖಲೆ ನೀಡದೆ ಇದ್ದರೆ ಇನ್ನಷ್ಟು ಹೆಚ್ಚಿನ TDS ಕಟ್ಟಬೇಕಾಗುತ್ತದೆ.
* ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು ಮತ್ತು ಪಾನ್ ಇಲ್ಲದೆ ಇದ್ದರೆ ಆತ ಶೇಕಡಾ 20 ರಷ್ಟು TDS ಕಟ್ಟಬೇಕಾಗುತ್ತದೆ.
* ಇನ್ನು TDS ಅನ್ನು ಫಾರ್ಮ್ 26QB ಬಳಸಿ ಸರ್ಕಾರಕ್ಕೆ ಜಮಾ ಮಾಡಬೇಕು ಮತ್ತು TDS ಕಡಿತ ಮಡಿದ 30 ದಿನಗಳ ಒಳಗೆ ಇದನ್ನು ಮಾಡಬೇಕು, ಇಲ್ಲವಾದರೆ ದಂಡ ಖಚಿತ.