UPI Transaction Limit Increase Guide: UPI ಅಂದರೆ ಏಕೀಕೃತ ಪಾವತಿ ವ್ಯವಸ್ಥೆ, ಇದು ನೈಜ ಸಮಯದಲ್ಲಿ ಎರಡು ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ವರ್ಗಾಯಿಸುವ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. UPI ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲ್ಲ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಇದನ್ನು ಅಭಿವೃದ್ಧಿ ಪಡಿಸಿದೆ. ಇದು ನಿಮಗೆ ಬ್ಯಾಂಕ್ ಖಾತೆ ಸಂಖ್ಯೆಯ ಬದಲಿಗೆ ವರ್ಚುವಲ್ ಪಾವತಿ ವಿಳಾಸವನ್ನು (UPI ID) ಬಳಸಲು ನಿಮಗೆ ಅವಕಾಶ ನೀಡುತ್ತದೆ.
UPI ಪಾವತಿ ಮಿತಿ
UPI ಇದು ನಿಮ್ಮ ದೈನಂದಿನ ಜೀವನದಲ್ಲಿ ಹಣ ಕಳುಹಿಸುವ ಬಹಳ ಸುಲಭವಾದ ಮಾರ್ಗವಾಗಿದೆ. Google Pay, PhonePe ಅಥವಾ Paytm ನಂತಹ ಆಪ್ ಗಳು ನಿಮಗೆ ಹಣವನ್ನು ವರ್ಗಾಗಿಸಲು ಲಿಮಿಟ್ ಅನ್ನು ವಿಧಿಸುತ್ತದೆ. ಇದು ನಿಮ್ಮ ಹಿಂದಿನ ಟ್ರಾನ್ಸಾಕ್ಷನ್ ಅಥವಾ ಗ್ರಾಹಕರ ಚಟುವಟಿಕೆಯ ಆಧಾರದ ಮೇಲೆ ಅವಲಂಭಿತವಾಗಿರಬಹುದು. RBI ಇತ್ತೀಚಿಗೆ P2P (Person to Person) ಟ್ರಾನ್ಸಾಕ್ಷನ್ ಗೆ ಲಿಮಿಟ್ ಹೆಚ್ಚಿಸಲು NPCI ಗೆ ಅನುಮತಿ ನೀಡಿದೆ. ಆದರೆ P2P ಇನ್ನು 1 ಲಕ್ಷಕ್ಕೆ ಸೀಮಿತವಾಗಿದೆ. ಇದಕ್ಕೆ ಬ್ಯಾಂಕ್ ಅನುಮತಿ ಅಗತ್ಯ.
UPI ಲಿಮಿಟ್ ಕಡಿಮೆಯಾಗಲು ಕಾರಣಗಳು..?
* ಫೋನ್ ಅಥವಾ ಸಿಮ್ ಬದಲಾವಣೆ ಮಾಡಿದಾಗ
* UPI PIN ರಿಸೆಟ್ ಮಾಡಿದಾಗ
* ಹಬ್ಬಗಳ ಸಂದರ್ಭದಲ್ಲಿ ಅಥವಾ ಪ್ರಮೋಷನ್ ಗಾಲ ಸಂದರ್ಭದಲ್ಲಿ ಬ್ಯಾಂಕ್ ತಾತ್ಕಾಲಿಕವಾಗಿ ಲಿಮಿಟ್ ಕಡಿಮೆ ಮಾಡುತ್ತದೆ.
UPI ಲಿಮಿಟ್ ಹೆಚ್ಚಿಸುವ ಸರಳ ಹಂತಗಳು
ಮೊದಲು ನಿಮ್ಮ ಬ್ಯಾಂಕ್ app ತೆರೆದು UPI ಗೆ ಹೋಗಿ ಪ್ರಸ್ತುತ ಲಿಮಿಟ್ ಅನ್ನು ಪರಿಶೀಲಿಸಿಕೊಳ್ಳಿ. ಲಿಮಿಟ್ ಹೆಚ್ಚಿಸಲು ಬಯಸಿದರೆ ಮ್ಯಾನೇಜ್ UPI ಲಿಮಿಟ್ಸ್ ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಸಿ. ಬ್ಯಾಂಕ್ ಅನುಮೋದಿಸಿದ ತಕ್ಷಣ ನಿಮ್ಮ UPI app ನಲ್ಲಿ ಲಿಮಿಟ್ ಅಪ್ಡೇಟ್ ಆಗುತ್ತದೆ.
RBI ಹಾಗೆ NPCI ನಿಯಮಗಳು
RBI 2025 ರಲ್ಲಿ P2P ಟ್ರಾನ್ಸಾಕ್ಷನ್ ಗೆ ಲಿಮಿಟ್ ಹೆಚ್ಚಿಸುವ ಅಧಿಕಾರವನ್ನು NPCI ಗೆ ನೀಡಿದೆ. ಅರೋಗ್ಯ ಹಾಗು ಶಿಕ್ಷಣ ಕ್ಷೇತ್ರದಲ್ಲಿ 2 ರಿಂದ 5 ಲಕ್ಷದ ಲಿಮಿಟ್ ಲಭ್ಯವಾಗುತ್ತದೆ. ಆದರೆ P2P ಅನ್ನು 1 ಲಕ್ಷಕ್ಕೆ ಸೀಮಿತವಾಗಿದೆ, ಇದು ಸುರಕ್ಷತೆಯ ದೃಷ್ಟಿಯಿಂದ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

