Details About Baal Aadhaar Card: ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ಕೂಡ ಆಧಾರ್ ಕಾರ್ಡ್ ಬಹಳ ಅವಶ್ಯಕವಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಅತಿ ಅಗತ್ಯವಾದ ದಾಖಲೆಯಾಗಿದೆ. ಸರ್ಕಾರೀ ಕೆಲಸಗಳಿಗೆ, ಆರೋಗ್ಯ ಸೇವೆಗಳಿಗೆ, ಶಿಕ್ಷಣ ಹಾಗೆ ಇನ್ನಿತರ ಕೆಲಸಗಳಿಗೆ ಆಧಾರ್ ಕಾರ್ಡ್ ಅತಿ ಮುಖ್ಯವಾಗಿದೆ. ಇದೀಗ ನಿಮ್ಮ ಮನೆಯಲ್ಲೂ ಕೂಡ 5 ವರ್ಷದೊಳಗಿನ ಮಕ್ಕಳಿದ್ದರೆ ಆ ಮಕ್ಕಳಿಗೂ ಕೂಡ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಮಾಡಿಸುವುದರಿಂದ ಹಲವು ಸರ್ಕಾರೀ ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ಇದೀಗ ನಾವು 5 ವರ್ಷದೊಳಗಿನ ಮಕ್ಕಳಿಗೆ ಮಾಡುವ ಬಾಲ್ ಆಧಾರ್ ಕಾರ್ಡ್ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಬಾಲ್ ಆಧಾರ್ ಕಾರ್ಡ್ ಎಂದರೇನು..?
ಬಾಲ್ ಆಧಾರ್ ಕಾರ್ಡ್ ಎಂದರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ UIDAI ನೀಡುವ ಒಂದು ನೀಲಿ ಬಣ್ಣದ ವಿಶೇಷವಾದ ಕಾರ್ಡ್ ಆಗಿದೆ. ಇದರಲ್ಲಿ ಮಗುವಿನ ಫೋಟೋ, ಹೆಸರು, ಜನ್ಮ ದಿನಾಂಕ ಹಾಗೆ ಲಿಂಗವನ್ನು ನಮೂದಿಸಲಾಗುತ್ತದೆ. ಆದರೆ ಇದರಲ್ಲಿ ಬಯೋಮೆಟ್ರಿಕ್ ಡೇಟಾ ಇರುವುದಿಲ್ಲ. ಬದಲಾಗಿ ಪೋಷಕರ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುತ್ತದೆ. 5 ವರ್ಷ ವಯಸ್ಸಾದ ಮೇಲೆ ಮಗುವಿನ ಬಯೋಮೆಟ್ರಿಕ್ ಮಾಹಿತಿ ನವೀಕರಿಸುವುದು ಕಡ್ಡಾಯವಾಗಿದೆ. ಈ ಕಾರ್ಡ್ ಮಕ್ಕಳಿಗೆ ಸರ್ಕಾರೀ ಸೌಲಭ್ಯ ಪಡೆಯಲು, ಹಾಗೆ ಶಾಲಾ ಪ್ರವೇಶಕ್ಕೆ ಇದು ಸುಲಭವಾಗುತ್ತದೆ.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
1 ) ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಗುವಿನ ಜನ್ಮ ಪ್ರಮಾಣಪತ್ರ, ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್, ಒಬ್ಬ ಪೋಷಕರ ಆಧಾರ್ ಕಾರ್ಡ್ ನೀಡಿ, ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ, ಮಗುವಿನ ಫೋಟೋ ತೆಗೆಯಿರಿ. 5 ವೃಷಕ್ಕಿಂತ ಕಡಿಮೆ ವಯಸ್ಸಿನ ಮಗುವಾದರೆ ಪೋಷಕರ ಬಯೋಮೆಟ್ರಿಕ್ ಬಳಸಿಕೊಳ್ಳಿ. ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. 60 / 90 ದಿನದಲ್ಲಿ ನಿಮಗೆ ಕಾರ್ಡ್ ದೊರೆಯುತ್ತದೆ.
2 ) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಮೊದಲು ಬಾಲ್ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು UIDAI ನ ಅಧಿಕೃತ ವೆಬ್ಸೈಟ್ ಆಗಿರುವ https://uidai.gov.in/ ಗೆ ಭೇಟಿ ನೀಡಿ, ನನ್ನ ಆಧಾರ್ ವಿಭಾಗದಲ್ಲಿ ನ್ಯಾವಿಗೇಟ್ ಆಯ್ಕೆಮಾಡಿ, Appointment ಬುಕ್ ಮಾಡಿಕೊಳ್ಳಿ. ಹೊಸ ಆಧಾರ್ ಅನ್ನು ಆಯ್ಕೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು OTP ನಮೂದಿಸಿ. ನಂತರ ಮಗುವಿನ ವಯಕ್ತಿಕ ವಿವರವನ್ನು ಭರ್ತಿ ಮಾಡಿ, ಅಪಾಯಿಂಟ್ಮೆಂಟ್ ಗಾಗಿ ಹತ್ತಿರದ ಸೇವಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ.
ಬಾಲ್ ಆಧಾರ್ ಕಾರ್ಡ್ ನ ಪ್ರಯೋಜನಗಳು
* ಸರ್ಕಾರಿ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಸಹಾಯವಾಗುತ್ತದೆ.
* ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಅಗತ್ಯವಾಗಿರುತ್ತದೆ.
* ರೈಲು ಅಥವಾ ವಿಮಾನ ಪ್ರಯಾಣ, ಹೋಟೆಲ್ ನಲ್ಲಿ ವಾಸ್ತವ್ಯ ಮುಂತಾದ ಸಂದರ್ಭಗಳಲ್ಲಿ ಗುರುತಿನ ಪುರಾವೆಯಾಗಿ ಈ ಆಧಾರ್ ಕಾರ್ಡ್ ಅನ್ನು ಬಳಸಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

