Bank Locker Rules And Regulations: ಬ್ಯಾಂಕ್ ಲಾಕರ್, ಇದು ಬ್ಯಾಂಕ್ ಗ್ರಾಹಕರ ಚಿನ್ನಾಭರಗಳು, ಬೆಳ್ಳಿ ವಸ್ತುಗಳು, ಹಾಗೆ ಪ್ರಮುಖ ದಾಖಲೆಗಳನ್ನು ಇಡುವ ಒಂದು ಸುರಕ್ಷಿತವಾದ ಸ್ಥಳವಾಗಿದೆ. ಭಾರತದಲ್ಲಿ ಲಕ್ಷಾಂತರ ಜನರು ತನ್ನ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಡುತ್ತಾರೆ. ಹೆಚ್ಚಿನ ಜನರು ಬ್ಯಾಂಕ್ ಲಾಕರ್ 100% ಸುರಕ್ಷಿತ ಎಂದು ಭಾವಿಸಿ ತಮ್ಮ ಬೆಲೆಬಾಳುವ ವಸ್ತುಗಳನ್ನ ಇಡುತ್ತಾರೆ, ಆದರೆ ಬ್ಯಾಂಕ್ ಲಾಕರ್ ಭದ್ರತಾ ಸೇವೆಯನ್ನು ನೀಡುತ್ತದೆಯೇ ಹೊರತು ಮಾಲೀಕತ್ವದ ಜವಾಬ್ದಾರಿಯನ್ನು ತಗೆದುಕೊಳ್ಳುವುದಿಲ್ಲ. ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ RBI ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಿದೆ ಮತ್ತು ಬ್ಯಾಂಕ್ ಲಾಕರ್ ನಲ್ಲಿ ಬೆಲೆಬಾಳುವ ವಸ್ತು ಇಡುವ ಮುನ್ನ RBI ನಿಯಮ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.
ಬ್ಯಾಂಕ್ ಲಾಕರ್ ಒಪ್ಪಂದದ ಮೂಲಭೂತ ನಿಯಮ
ನೀವು ಬ್ಯಾಂಕ್ ಲಾಕರ್ ಅನ್ನು ತೆಗೆದುಕೊಳ್ಳುವಾಗ ಲಾಕರ್ ಒಪ್ಪಂದದ ಮೂಲಭೂತ ನಿಯಮಗಳಿಗೆ ಸಹಿಯನ್ನು ಹಾಕಬೇಕಾಗುತ್ತದೆ. ಬ್ಯಾಂಕ್ ಲಾಕರ್ ಒಪ್ಪಂದದ ಪ್ರಕಾರ, ಬ್ಯಾಂಕ್ ತನ್ನ ಅಸಡ್ಡೆ ಅಥವಾ ಭದ್ರತಾ ವ್ಯವಸ್ಥೆಯ ವೈಫಲ್ಯ ಗಳಿಂದ ನಿಮ್ಮ ವಸ್ತುಗಳು ಕಳೆದು ಹೋದರೆ ಮಾತ್ರ ಬ್ಯಾಂಕ್ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತದೆ. ಆದರೆ ಬಾಹ್ಯ ಕಳ್ಳತನ, ಬೆಂಕಿ ಅಥವಾ ಪ್ರಳಯದಂತಹ ನೈಸರ್ಗಿಕ ವಿಕೋಪಗಳಿಗೆ ಬ್ಯಾಂಕ್ ಹೊಣೆಯಾಗಿರುದಿಲ್ಲ.
RBI ಹೊಸ ಮಾರ್ಘಸೂಚಿ
2021 ರ ಆಗಸ್ಟ್ ನಲ್ಲಿ RBI ಹೊಸ ನಿಯಮಗಳನ್ನ ಬಿಡುಗಡೆ ಮಾಡಿದೆ. ಇದರ ಪ್ರಕಾರ,
* ಬ್ಯಾಂಕು ಗಳು 2022 ಆಗಸ್ಟ್ ರೊಳಗೆ ಎಲ್ಲ ಹಳೆಯ ಲಾಕರ್ ಒಪ್ಪಂದವನ್ನು ಪುನರ್ ನವೀಕರಣ ಮಾಡಬೇಕು.
* ಗ್ರಾಹಕರು ಲಾಕರ್ ನಲ್ಲಿ ಇತ್ತ ವಸ್ತುಗಳ ಬಗ್ಗೆ ಬೇಂಕ್ ಗೆ ತಿಳಿಸುವ ಅಗತ್ಯ ಇಲ್ಲ, ಆದರೆ ಕಳ್ಳತನದ ಸಂದರ್ಭದಲ್ಲಿ ಸಾಕ್ಷಿಯನ್ನು ತೋರಿಸಬೇಕಾಗುತ್ತದೆ.
* ಬ್ಯಾಂಕುಗಳು CCTV , ಅಲಾರಾಂ ಸಿಸ್ಟಮ್, ಪೈರಾ ಪ್ರೂಫ್ ವಾಲ್ಟ್ ಮತ್ತು ಡುಯೆಲ್ ಕೀ ಸಿಸ್ಟಮ್ ಅನ್ನು ಹೊಂದಿರಬೇಕಾಗುತ್ತದೆ.
ಲಾಕರ್ ಕಳ್ಳತನದ ಸಂದರ್ಭದಲ್ಲಿ ಏನು ಮಾಡಬೇಕು..?
* ಪೊಲೀಸರಿಗೆ ದೂರು ನೀಡಿ FIR ಅನ್ನು ದಾಖಲಿಸಿ
* 7 ದಿನಗಳ ಒಳಗೆ ಬ್ಯಾಂಕ್ ಗೆ ನೋಟೀಸ್ ನೀಡಿ
* ಸಾಕ್ಷಿಗಾಗಿ ವಸ್ತುಗಳ ಫೋಟೋ, ಬಿಲ್ ಗಳು, ಹಾಗೆ ಲಾಕರ್ ರಶೀದಿಯನ್ನು ಇಟ್ಟುಕೊಳ್ಳಬೇಕು.
* ಪರಿಹಾರಕ್ಕಾಗಿ Consumer ಕೋರ್ಟ್ ಗೆ ದೂರು ನೀಡಿ
ಮುನ್ನೆಚ್ಚರಿಕೆ ಕ್ರಮಗಳು
* ಲಾಕರ್ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಪ್ರತಿಯೊಂದು ಪುಟವನ್ನು ಸರಿಯಾಗಿ ಓದಿ
* HDFC Ergo, Bajaj Allianz ನಂತಹ ಕಂಪನಿಯಲ್ಲಿ ಲಾಕರ್ ಕಂಟೆಂಟ್ ಇನ್ಸೂರೆನ್ಸ್ ಮಾಡಿ
* ಪ್ರತಿ 6 ತಿಂಗಳಿಗೊಮ್ಮೆ ಲಾಕರ್ ತೆಗೆದು ಪರೀಕ್ಷಿಸಿ
* ಹಣ ಹಾಗೆ ಅಪಾಯಕಾರಿ ವಸ್ತುಗಳನ್ನ ಬ್ಯಾಂಕ್ ಲಾಕರ್ ನಲ್ಲಿ ಇಡಬಾರದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

