Rahul Gandhi About Bihar Election: ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು NDA ಗೆ ದೊಡ್ಡ ಗೆಲುವು ದೊರೆತಿದೆ. ಹೌದು ನಿತೀಶ್ ಕುಮಾರ್ ನೇತ್ರತ್ವದ NDA 202 ಸ್ಥಾನವನ್ನು ಗಳಿಸುವ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿದೆ. ಇದೀಗ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಅವರು ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಚುನಾವಣೆ ಆರಂಭದಿಂದಲೇ ನ್ಯಾಯಯುತವಾಗಿರಲಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ಇದು ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
NDA ಗೆ ಐತಿಹಾಸಿಕ ಗೆಲುವು
ಬಿಹಾರದ 243 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ NDA ( BJP, JD(U), LJP-RV ) 202 ಸ್ಥಾನವನ್ನು ಪಡೆದುಕೊಂಡಿದೆ, BJP 89, JD(U) ಗೆ 85 ಸ್ಥಾನಗಳು ದೊರೆತಿವೆ. ಮಹಾಗಥಬಂಧನ್ ( Congress, RJD ) ಕೇವಲ 35 ಸ್ಥಾನಗಳನ್ನ ಪಡೆದುಕೊಂಡಿದೆ. ಕಾಂಗ್ರೆಸ್ 61 ಸ್ಥಾನಗಳಲ್ಲಿ ಹೋರಾಟ ಮಾಡಿದರು ಸಹ ಕೇವಲ 6 ಸ್ಥಾನಗಳನ್ನು ಪಡೆದುಕೊಂಡಿದೆ. ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಿದೆ.
ರಾಹುಲ್ ಗಾಂಧಿ ಆರೋಪ
ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ ಬಿಹಾರದ ಕೋಟ್ಯಂತರ ಮತದಾರರಿಗೆ ಧನ್ಯವಾದ ಹೇಳಿದ್ದಾರೆ, ” ಬಿಹಾರ ಫಲಿತಾಂಶ ನಿಜನ್ನು ಆಶ್ಚರ್ಯಕರ . ನಾವು ಆರಂಭದಿಂದಲೇ ನ್ಯಾಯರಹಿತ ಚುನಾವಣೆಯಲ್ಲಿ ಗೆಲುವು ದೊರೆತಿಲ್ಲ ” ಎಂದು ಬರೆದುಕೊಂಡಿದ್ದಾರೆ.
ಚುನಾವಣೆಯ ಹಿನ್ನೆಲೆ
ರಾಹುಲ್ ಗಾಂಧಿ ಚುನಾವಣೆಯ ಮುನ್ನ ವೋಟರ್ ಅಧಿಕಾರ್ ಯಾತ್ರೆ ಮಾಡಿ ವೋಟ್ ಚೋರಿ ಆರೋಪವನ್ನು ಮಾಡಿದ್ದರು, ಆದರೂ ಕೂಡ ಇದು ಮತದಾರರನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಒತ್ತು ನೀಡಿದ NDA ಮೋದಿ ಅವರ ಮಹಿಳಾ ಯುವ ಸೂತ್ರದಿಂದ ಲಾಭವನ್ನು ಪಡೆದುಕೊಂಡಿದೆ. ನಿತೀಶ್ ಕುಮಾರ್ ಅವರ ಅನುಭವ ಹಾಗೆ BJP ಯಾ ರಾಷ್ಟ್ರೀಯ ಬೆಂಬಲವು ಗೆಲುವಿಗೆ ಕಾರಣವಾಗಿದೆ. ಬಿಹಾರದ ಮತದಾರರು ಅಭಿವೃದ್ಧಿ ಮತ್ತು ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡು ಮತವನ್ನು ಹಾಕಿದ್ದಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

