PPF Scheme Investment Guide: ದೇಶದಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳು ಇದೆ. ಪೋಸ್ಟ್ ಆಫೀಸ್, ಬ್ಯಾಂಕ್, ಮ್ಯೂಚುಯಲ್ ಫಂಡ್ಸ್ ಸೇರಿದಂತೆ ಹೂಡಿಕೆ ಮಾಡಲು ಹಲವು ಆಯ್ಕೆಗಳು ಇದೆ. ಇತ್ತೀಚಿನ ಕಾಲದ ಜನರು ಸರ್ಕಾರೀ ಯೋಜನೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಹೂಡಿಕೆ ಮಾಡುವವರಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ಪೋಸ್ಟ್ ಆಫೀಸ್ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅನೇಕ ಯೋಜನೆಯನ್ನು ಜಾರಿಗೆ ತಂದಿದೆ. ಹೂಡಿಕೆ ಮಾಡಲು ಇರುವ ಲಾಭದಾಯಕ ಯೋಜನೆಯಲ್ಲಿ PPF ಯೋಜನೆ ಕೂಡ ಒಂದು. PPF ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತದ ಲಾಭ ಗಳಿಸಿಕೊಳ್ಳಬಹುದು.
ಏನಿದು PPF ಯೋಜನೆ?
ಭವಿಷ್ಯದ ಆರ್ಥಿಕ ಭದ್ರತೆಗಾಗಿ ಸುರಕ್ಷಿತ ಹೂಡಿಕೆಯನ್ನು ಮಾಡಬೇಕು ಅಂದರೆ PPF ಯೋಜನೆ ಒಂದು ಉತ್ತಮವಾದ ಆಯ್ಕೆ ಆಗಿದೆ. 1968 ರಿಂದ ಈ ಯೋಜನೆ ದೇಶಾದ್ಯಂತ ಜಾರಿಯಲ್ಲಿ ಇದ್ದು ವಾರ್ಷಿಕವಾಗಿ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿಯ ತನಕ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. PPF ಯೋಜನೆಯ ಮುಕ್ತಾಯದ ಅವಧಿ 15 ವರ್ಷಗಳು ಆಗಿದ್ದು ಮತ್ತೆ 5 ವರ್ಷಗಳ ತನಕ ಈ ಯೋಜನೆಯನ್ನು ವಿಸ್ತರಣೆ ಕೂಡ ಮಾಡಬಹುದು. ಒಟ್ಟಾರೆಯಾಗಿ PPF ಯೋಜನೆಯಲ್ಲಿ 25 ವರ್ಷಗಳ ವರೆಗೆ ವಿಸ್ತರಣೆ ಮಾಡಬಹುದು.
PPF ಯೋಜನೆಯಲ್ಲಿ ಗಳಿಸಬಹುದು 65 ಲಕ್ಷ ರೂ ಲಾಭ
PPF ಯೋಜನೆಯಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವುದರ ಮೂಲಕ ಬಹಳ ಹೆಚ್ಚಿನ ಲಾಭ ಗಳಿಸಬಹುದು. ಉದಾಹರಣೆಗೆ, PPF ಯೋಜನೆಯಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂಪಾಯಿಯನ್ನು 15 ವರ್ಷಗಳ ತನಕ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಒಟ್ಟು ಹಣ 22.50 ಲಕ್ಷ ರೂಪಾಯಿ ಆಗುತ್ತದೆ.15 ವರ್ಷಗಳ ಮ್ಯಾಚ್ಯುರಿಟಿ ಸಮಯದಲ್ಲಿ ಒಟ್ಟಾರೆಯಾಗಿ 40.68 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು. ಇದರಲ್ಲಿ ಹೂಡಿಕೆ ಮಾಡಿದ ಹಣವನ್ನು ಹೊರತುಪಡಿಸಿ ಒಟ್ಟು ಲಾಭ 18.18 ಲಕ್ಷ ರೂಪಾಯಿ ಆಗಿರುತ್ತದೆ.
ಯೋಜನೆಯ ಮುಕ್ತಾಯದ ನಂತರ PPF ಯೋಜನೆಯನ್ನು 25 ವರ್ಷಗಳ ವರೆಗೆ ವಿಸ್ತರಣೆ ಮಾಡಿದರೆ ಹೂಡಿಕೆದಾರನ ಒಟ್ಟು ಹೂಡಿಕೆ 3.50 ಲಕ್ಷ ರೂಪಾಯಿ ಆಗುತ್ತದೆ. 25 ವರ್ಷಗಳ ನಂತರ, ಅಂದರೆ ಮ್ಯಾಚ್ಯುರಿಟಿ ಸಮಯದಲ್ಲಿ ಒಟ್ಟಾರೆಯಾಗಿ 1.03 ಕೋಟಿ ರೂಪಾಯಿ ಹಣ ಪಡೆದುಕೊಳ್ಳಬಹುದು ಮತ್ತು ಇದರಲ್ಲಿ ಒಟ್ಟು ಲಾಭ 65.58 ಲಕ್ಷ ರೂಪಾಯಿ ಆಗಿರುತ್ತದೆ. ಇಷ್ಟು ಲಾಭ ಪಡೆದುಕೊಳ್ಳಬೇಕು ಅಂದರೆ, ಕಡ್ಡಾಯವಾಗಿ ಪ್ರತಿ ವರ್ಷ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
PPF ಯೋಜನೆಯಲ್ಲಿ ಹೂಡಿಕೆ ಮಾಡುವ ವಿಧಾನ
* ಮಾಸಿಕವಾಗಿ 12,500 ರೂಪಾಯಿ ಅಂದರೆ, ವಾರ್ಷಿಕವಾಗಿ 1.5 ಲಕ್ಷ ರೂಪಾಯಿ ಉಳಿತಾಯ ಮಾಡಿ.
* ಅವಧಿಯನ್ನು ಆಯ್ಕೆಮಾಡಿ ಮುಕ್ತಾಯದ 15 ವರ್ಷಗಳ ನಂತರ, ಮತ್ತೆ 10 ವರ್ಷಗಳು ಅಂದರೆ 25 ವರ್ಷಗಳ ವರೆಗೆ ಹೂಡಿಕೆ ವಿಸ್ತರಣೆ ಮಾಡಬೇಕು.
* 1.5 ಲಕ್ಷದವರೆಗೆ 80C ಅಡಿ ಉಳಿತಾಯ, ಇದರಿಂದ ನಿಮ್ಮ ನಿವ್ವಳ ಹೂಡಿಕೆ ಕಡಿಮೆಯಾಗುತ್ತದೆ. ಈ PPF ಯೋಜನೆಯ ತೆರಿಗೆ ನಿಯಮದಲ್ಲಿ ತೆರಿಗೆ ಉಳಿತಾಯಕ್ಕೆ ಒಳಪಡುತ್ತದೆ.
PPF ಯೋಜನೆಯ ಇತರೆ ಸೌಲಭ್ಯಗಳು
PPF ಯೋಜನೆ ಸುರಕ್ಷತೆಯ ಯೋಜನೆಯ ಆಗಿದ್ದು ಈ ಯೋಜನೆಯಲ್ಲಿ ನಿರ್ಧಿಷ್ಟ ಆದಾಯ ಪಡೆದುಕೊಳ್ಳಬಹುದು. PPF ಯೋಜನೆಯಲ್ಲಿ ಹೂಡಿಕೆ ಮಾಡಿದವರು ಯೋಜನೆಯ ಅವಧಿ ಆಧರಿಸಿ ಕಡಿಮೆ ಅವಧಿಯ ಸಾಲ ಕೂಡ ಪಡೆದುಕೊಳ್ಳಬಹುದು. ಕೆಲವು ವರ್ಷಗಳ ನಂತರ ಭಾಗಶಃ ಹಣ ಹಿಂಪಡೆಯಲು ಅವಕಾಶ ಇದ್ದು, ತುರ್ತು ಸಮಯದಲ್ಲಿ ಭಾಗಶಃ ಹಣ ಹಿಂಪಡೆಯಬಹುದು. ಒಟ್ಟಾರೆಯಾಗಿ, PPF ನಿಮ್ಮ ಭವಿಷ್ಯದ ಉಳಿತಾಯಕ್ಕೆ ಉತ್ತಮ ಆಯ್ಕೆ. ಇಂದೇ ಖಾತೆ ತೆರೆಯಿರಿ ಮತ್ತು ₹65 ಲಕ್ಷ ರೂಪಾಯಿ ಲಾಭದ ಕನಸು ನನಸಾಗಿಸಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

